ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಸಮೀಪ ಇತ್ತೀಚೆಗೆ ಚಿರತೆ ಒಂದು ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಮಲೆನಾಡು ಟುಡೆಗೆ ಬಂದಿತ್ತು. ಈ ಬಗ್ಗೆ ವರದಿ ಮಾಡಿದ್ದೆವೆ. ಇದೀಗ ಮತ್ತೊಂದು ಕಾಡುಪ್ರಾಣಿಯ ಸಾವಿನ ವರದಿ ಬಂದಿದೆ. ತಾಲ್ಲೂಕಿನ ತಿರಳೇಬೈಲು ಗ್ರಾಮದಲ್ಲಿ ತಂತಿ ಬೇಲಿ ಜಿಗಿಯಲು ಕಾಡೆಮ್ಮೆಯೊಂದು ಆಯತಪ್ಪಿ ಬಿದ್ದು ಸಾವನ್ನಪ್ಪಿದೆ.
ತೀರ್ಥಹಳ್ಳಿಯಲ್ಲಿ ಮೊನ್ನೆ ಶನಿವಾರ ನಡೆದ ಘಟನೆ
ಶನಿವಾರ ರಾತ್ರಿ ಅಂದಾಜು 8 ವರ್ಷದ ಕಾಟಿ ಅಡಿಕೆ ತೋಟವೊಂದಕ್ಕೆ ನುಗ್ಗಿತ್ತು. ರಾತ್ರಿಯಿಡಿ ಅಲ್ಲಿಯೇ ಓಡಾಡಿತ್ತು. ಬೆಳಗ್ಗೆ ತೋಟದ ಮಾಲೀಕರನ್ನು ಓಡಲು ಆರಂಭಿಸಿದ ಕಾಡೆಮ್ಮೆ, ತಂತಿ ಬೇಲಿಯನ್ನು ಹಾರಲು ಯತ್ನಿಸಿದೆ. ಆದರೆ, ಬೇಲಿ ಜಿಗಿಯುವ ಭರದಲ್ಲಿ ಕಾಡೆಮ್ಮೆ ಮಗ್ಗಲಾಗಿ ಉರುಳಿ ಬಿದ್ದಿದೆ. ಇದರಿಂದ ತೀವ್ರ ಪೆಟ್ಟಾಗಿ ಕಾಡೆಮ್ಮೆ ಅಲ್ಲದೆ ಒದ್ದಾಡಲು ಆರಂಭಿಸಿತ್ತು.
ಇಷ್ಟೊತ್ತಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡೆಮ್ಮೆಗೆ ಕುಡಿಯಲು ನೀರು, ತಿನ್ನಲು ಹುಲ್ಲು ಹಾಗೂ ಆಹಾರವನ್ನು ಒದಗಿಸಿ ಉಪಚರಿಸಿದರು. ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ರು. ಆದರೆ ನಿನ್ನೆ ಸಂಜೆ ಕಾಡೆಮ್ಮೆ ಅಲ್ಲೆ ಸತ್ತು ಹೋಗಿದೆ. ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಸಂಜಯ್ ಕಾಡೆಮ್ಮೆ ಮೃತಪಟ್ಟಿದ್ದನ್ನ ಖಚಿತ ಪಡಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
