STATE NEWS

ದೈನಂದಿನ ಪಂಚಾಂಗ ಹಾಗೂ ರಾಶಿಫಲ: ಮೇಷದಿಂದ ಕುಂಭದವರೆಗಿನ ದಿನಭವಿಷ್ಯ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

financial breakthrough / ಮಲೆನಾಡು ಟುಡೆ ಸುದ್ದಿ / ಪರಾಭವ ನಾಮಸಂವತ್ಸರದ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ ಮಧ್ಯಾಹ್ನ 2.43 ರವರೆಗೆ ಇರಲಿದ್ದು, ತದನಂತರ ನವಮಿ ತಿಥಿ ಆರಂಭವಾಗಲಿದೆ. ಆರಿದ್ರ ನಕ್ಷತ್ರ ರಾತ್ರಿ 7.04 ರವರೆಗೆ ಇರಲಿದೆ. ತರುವಾಯ ಪುನರ್ವಸು ನಕ್ಷತ್ರವಿರಲಿದೆ. ಅಮೃತ ಘಳಿಗೆ ಬೆಳಿಗ್ಗೆ 9.42 ರಿಂದ 11.12 ರವರೆಗೆ ಒದಗಿಬರಲಿದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದ್ದು, ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

Who will experience a major financial breakthrough today in the Parabhava Nama Samvatsara When and where will find the fortune according to todays astrological predictions?
Who will experience a major financial breakthrough today in the Parabhava Nama Samvatsara When and where will find the fortune according to todays astrological predictions?

ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

ಇವತ್ತಿನ ರಾಶಿಫಲ

ಮೇಷ / ಹೊಸ ಉದ್ಯೋಗ ಅವಕಾಶ. ಸಮಾಜದಲ್ಲಿ ಘನತೆ ಮತ್ತು ಗೌರವ ವೃದ್ಧಿಯಾಗಲಿವೆ. ದೂರದ ಊರುಗಳಿಂದ ಮಾಹಿತಿಯೊಂದು ಲಭ್ಯವಾಗಲಿದೆ. ಔತಣಕೂಟಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿವೆ. ವ್ಯಾಪಾರ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಆರ್ಥಿಕ ಪ್ರಗತಿ ಕಂಡುಬರಲಿದ್ದು, ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ದೊರೆಯುವ ಸಾಧ್ಯತೆಗಳಿವೆ. 

ವೃಷಭ /ಪ್ರಯಾಣ ಮುಂದೂಡಿಕೆ. ದೈನಂದಿನ ಕೆಲಸದಲ್ಲಿ ಶ್ರಮ ಜಾಸ್ತಿಯಾಗಲಿದೆ. ಕೆಲಸಗಳಲ್ಲಿ ಆತುರ. ವಾಣಿಜ್ಯ ವ್ಯವಹಾರಗಳಲ್ಲಿ ಈ ದಿನ ನಿಧಾನ ಸಾಗಲಿದೆ. ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಅಡೆತಡೆ, ಕಿರಿಕಿರಿ ಎದುರಾಗಬಹುದು. ಆಧ್ಯಾತ್ಮಿಕ ಚಿಂತನೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ.

ಮಿಥುನ / ಕೈಹಾಕಿದ ಕೆಲವು ಪ್ರಮುಖ  ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಸುಖಾಂತ್ಯ ಕಾಣಲಿವೆ. ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ವಿಶೇಷದಿನ, ಉದ್ಯೋಗ ಕ್ಷೇತ್ರದಲ್ಲಿಯೂ ಸಹ ಉತ್ತಮವಾದ ವಾತಾವರಣ.

ಕರ್ಕಾಟಕ /ಅನಿರೀಕ್ಷಿತವಾಗಿ ಪ್ರಯಾಣ, ಹಣಕಾಸಿನ ವೆಚ್ಚಜಾಸ್ತಿ. ಮನೆಯ ಒಳಗೆ ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದ್ದು, ಹೊರಗಡೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಹಾಗೂ ಉದ್ಯೋಗಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಈ ದಿನ ಕುತೂಹಲ ವಿಶೇಷ ಹೆಚ್ಚಿರಲಿದೆ. 

ಸಿಂಹ / ಮಾತಿಗೊಂದು ತೂಕ ಬರಲಿದೆ. ಆಪ್ತರು ಹಾಗೂ ಸ್ನೇಹಿತರೊಡನೆ ಅತ್ಯಂತ ಉತ್ಸಾಹದಿಂದ ಕಾಲ ಕಳೆಯಲಿದ್ದೀರಿ. ಶುಭ ಸಮಾಚಾರವೊಂದು ನಿಮ್ಮ ಕಿವಿಗೆ ಬೀಳಲಿದೆ. ವಹಿಸಿಕೊಂಡ ಕೆಲಸ ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಿರಿ. ವೃತ್ತಿಪರರಿಗೆ ಹಾಗೂ ವ್ಯಾಪಾರಿಗಳಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ.

ಕನ್ಯಾ / ಪ್ರತಿಭೆಗೆ ತಕ್ಕುದಾದ ಸೂಕ್ತ ಮನ್ನಣೆ ಸಿಗಲಿದೆ. ಶುಭಕರವಾದ ವಾರ್ತೆಯೊಂದನ್ನು ಆಲಿಸುವಿರಿ. ವಾಹನ, ಭೂಮಿ ಖರೀದಿಸುವ ಯೋಗವಿದೆ. ವ್ಯಾಪಾರ ಅಭಿವೃದ್ಧಿಯ ಪಥದಲ್ಲಿ ಸಾಗಲಿದ್ದು, ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಕೊಂಚ ಮುಕ್ತಿ ಸಿಗಲಿದೆ.

Who will experience a major financial breakthrough today in the Parabhava Nama Samvatsara When and where will find the fortune according to todays astrological predictions?
Who will experience a major financial breakthrough today in the Parabhava Nama Samvatsara When and where will find the fortune according to todays astrological predictions?

ಗೋವಾದಲ್ಲಿ ಆ ದಂಧೆಯ ರಾಕೆಟ್​ ಬಯಲು! ಶಿವಮೊಗ್ಗ ನಿವಾಸಿ ಮಾಸ್ಟರ್​ ಮೈಂಡ್ ಅರೆಸ್ಟ್!

ತುಲಾ/ ಹಣಕಾಸಿನ ಪರಿಸ್ಥಿತಿಯು ಕೊಂಚ ಮಟ್ಟಿಗೆ ನಿರಾಸೆ ಮೂಡಿಸಲಿದೆ. ಶ್ರಮ ವಹಿಸಿದರೂ ತಕ್ಕ ಪ್ರತಿಫಲ ಸಿಗದೆ, ಕೆಲವು ಕೆಲಸ ಅರ್ಧದಲ್ಲೇ ಕೈಬಿಡುವಂತಹ ಪರಿಸ್ಥಿತಿ ಉದ್ಭವಿಸಬಹುದು. ಅನಿರೀಕ್ಷಿತ ಪ್ರಯಾಣ. ವಾಣಿಜ್ಯ ವ್ಯವಹಾರಗಳಲ್ಲಿ ಒತ್ತಡ ಸೃಷ್ಟಿಯಾಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ

ವೃಶ್ಚಿಕ / ದಿನನಿತ್ಯದ ಕೆಲಸ ಕಾರ್ಯಗಳು ಕೊಂಚ ನಿಧಾನಗತಿಯಲ್ಲಿ ಸಾಗಲಿವೆ. ಸಂಬಂಧಿಕರೊಡನೆ ಸಣ್ಣಪುಟ್ಟ ಕಾರಣಗಳಿಗಾಗಿ ಭಿನ್ನಾಭಿಪ್ರಾಯ, ಜಗಳ ಏರ್ಪಡಬಹುದು. ಅನಾರೋಗ್ಯ , ಕುಟುಂಬದೊಳಗೆ ಕೆಲವು ಸಮಸ್ಯೆ ತಲೆದೋರಲಿವೆ. ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಲಿದ್ದು, ಉದ್ಯೋಗಿಗಳಿಗೆ ಕೆಲಸದಲ್ಲಿ ನಿರಾಸಕ್ತಿ ಮೂಡಲಿದೆ. 

ಧನಸ್ಸು / ಕುಟುಂಬದಲ್ಲಿ ಸಂತಸದ ಶುಭ ಕಾರ್ಯಗಳು ಜರುಗಲಿವೆ. ಮಹತ್ವದ ಮಾಹಿತಿಯೊಂದು ಕೈಸೇರಲಿದೆ. ಹಿತೈಷಿಗಳು ಹಾಗೂ ಆಪ್ತರೊಡನೆ ಬಾಂಧವ್ಯ ಗಟ್ಟಿಯಾಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಅವಕಾಶ, ನೂತನ ವಸ್ತುಗಳನ್ನು ಖರೀದಿಸುವ ಯೋಗವಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಆರ್ಥಿಕ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಕೆಲವು ನಿರ್ಣಾಯಕ ಬೆಳವಣಿಗೆಗಳು ನಡೆಯಲಿವೆ.

ಮಕರ /ನೂತನ ಉದ್ಯೋಗಾವಕಾಶ. ಬಂಧುಮಿತ್ರರ ಶುಭ ಸಮಾರಂಭಗಳಲ್ಲಿ  ಪಾಲ್ಗೊಳ್ಳಲಿದ್ದೀರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಆಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥಗೊಳ್ಳಲಿವೆ. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ, ಉದ್ಯೋಗಿಗಳಲ್ಲಿ ಮತ್ತಷ್ಟು ಹೊಸ ಉತ್ಸಾಹ ಗರಿಗೆದರಲಿದೆ.

ಕುಂಭ / ವಿನಾಕಾರಣ ಭಿನ್ನಾಭಿಪ್ರಾಯಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಕೆಲವು ಇಕ್ಕಟ್ಟು ಎದುರಾಗಲಿದ್ದು, ಸಾಲಕ್ಕಾಗಿ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಕುಟುಂಬದ ಜವಾಬ್ದಾರಿಗಳು ಹೆಗಲೇರಲಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಗೊಂದಲಮಯವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಮೀನ  /  ಕೈಗೆತ್ತಿಕೊಂಡ ಕೆಲವು ಪ್ರಮುಖ ಕೆಲಸ ಮುಂದೂಡಲ್ಪಡುವ ಸಾಧ್ಯತೆಗಳಿವೆ.  ಸಣ್ಣಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ಮೂಡಬಹುದು.ವ್ಯಾಪಾರ ವಹಿವಾಟುಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುವುದು, ವೃತ್ತಿ ಕ್ಷೇತ್ರದಲ್ಲಿ ಹಾಗೂ ಉದ್ಯೋಗದ ಸ್ಥಳದಲ್ಲಿ ದಿಢೀರ್ ಬದಲಾವಣೆ ಸಾಧ್ಯತೆ ಇದೆ.

Who will experience a major financial breakthrough today in the Parabhava Nama Samvatsara When and where will find the fortune according to todays astrological predictions?
Who will experience a major financial breakthrough today in the Parabhava Nama Samvatsara When and where will find the fortune according to todays astrological predictions?

ಗೋವಾದಲ್ಲಿ ಆ ದಂಧೆಯ ರಾಕೆಟ್​ ಬಯಲು! ಶಿವಮೊಗ್ಗ ನಿವಾಸಿ ಮಾಸ್ಟರ್​ ಮೈಂಡ್ ಅರೆಸ್ಟ್!

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Who will experience a major financial breakthrough today in the Parabhava Nama Samvatsara When and where will find the fortune according to todays astrological predictions?

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY