ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಇವತ್ತಿನ ಈ ವಾರದ ಅಲ್ಲಲ್ಲಿ ವಿಭಾಗದ ಸುದ್ದಿಗಳು ಇಲ್ಲಿವೆ. ಚಿಕ್ಕಮಗಳೂರಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ, ಕೊಪ್ಪದಲ್ಲಿ ಪಿತ್ರಾರ್ಜಿತ ಆಸ್ತಿಗಾಗಿ ಸಹೋದರನ ಪತ್ನಿ ಮೇಲೆ ಹಲ್ಲೆ, ಮೈಮೇಲೆ ಬಂದವರಂತೆ ಆಡಿದ ಮಹಾರಾಯನ ವಿರುದ್ಧ ಕೇಸ್, ಆನಂದಪುರ ಪಟ್ಟಣದಲ್ಲಿ ಪಾಳು ಬಿದ್ದ ಕಟ್ಟಡದಲ್ಲಿ ವೃದ್ಧನ ಶವ ಪತ್ತೆ.

ಭೀಕರ ಅಪಘಾತದಲ್ಲಿ ಇಬ್ಬರು ದುರ್ಮರಣ
ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿಯ ತಿರುವಿನಲ್ಲಿ ಇವತ್ತು ಬೆಳಗ್ಗೆ ಎರಡು ಕಾರಿನ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ಮೂಲದ ಕುಮಾರಪ್ಪ (69) ಮತ್ತು ಸತೀಶ್ (35) ಎನ್ನಲಾಗಿದೆ. ಎರಡು ಕಾರುಗಳು ಪೂರ್ತಿ ಜಖಂ ಆಗಿವೆ. ಚಾಲಕ ಸೀರಿಯಸ್ ಆಗಿದ್ದು ಆತನಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ.
ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಯಲ್ಲೋ ಅಲರ್ಟ್! ಹವಾಮಾನ ಇಲಾಖೆ
ಕೊಪ್ಪದಲ್ಲಿ ಮೈಮೇಲೆ ದೈವ ಬಂದಂತೆ ಹೈಡ್ರಾಮಾ
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆರ್ಡರ್ ತಗೊಂಡು ಸರ್ವೆಗೆ ಬಂದವರ ಮೇಲೆ ವ್ಯಕ್ತಿಯೊಬ್ಬ ಕಾಂತಾರಾ ಸ್ಟೈಲ್ನಲ್ಲಿ ಹೆದರಿಸಲು ಹೋಗಿದ್ದ ಘಟನೆ ವೈರಲ್ ಆಗಿದೆ. ಲೇಟೆಸ್ಟ್ ಅಪ್ಡೆಟ್ ಅಂದರೆ, ಈ ಘಟನೆಯಲ್ಲಿ ದೈವ ಬಂದಂತೆ ಆಡಿದವನ ವಿರುದ್ಧ ಕೇಸ್ ದಾಖಲಾಗಿದೆ.
ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ಘಠನೆ ನಡೆದಿದೆ. JMFC ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ಜಮೀನು ಸರ್ವೆ ನಡೆಸಲು ಬಂದಿದ್ದರು. ಈ ವೇಳೆ, ಸುರೇಶ್ ಎಂಬುವವರು ಏಕಾಏಕಿ ಕೈಯಲ್ಲಿ ಬೆಂಕಿ ಪಂಜು ಹಿಡಿದು ಓಡಿ ಬಂದು ದೈವ ಬಂದಿದೆ ಎಂದು ಕೂಗುತ್ತಾ, ಸ್ಥಳದಲ್ಲಿ ನಿಂತಿದ್ದ ತಮ್ಮನ ಹೆಂಡತಿ ರಮ್ಯಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದೃಶ್ಯ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಶರಾವತಿ ವಿಚಾರದಲ್ಲಿ ಉಗ್ರಹೋರಾಟಕ್ಕೆ ಅಣಿ! ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ

ಆನಂದಪುರದಲ್ಲಿ ವೃದ್ಧನ ಶವ ಪತ್ತೆ/today incidents
ಶಿವಮೊಗ್ಗ ಜಿಲ್ಲೆಯ ಆನಂದಪುರ ಪಟ್ಟಣದ ಮೀನು ಮಾರುಕಟ್ಟೆಯ ಮುಂಭಾಗದಲ್ಲಿ ಪಾಳು ಬಿದ್ದ ಮನೆಯೊಂದರಲ್ಲಿ ಸುಮಾರು 60 ವಯಸ್ಸಿನ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಸ್ಥಳೀಯರು ಇದನ್ನ ಗಮನಿಸಿ ಗ್ರಾಮ ಪಂಚಾಯತಿ ಆಡಳಿತ, ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಗೆ ತಿಳಿಸಿದ್ದಾರೆ. ಸಂಬಂಧಪಟ್ಟವರು ಸ್ಥಳಕ್ಕೆ ಬಂದು ಮೃತದೇಹವನ್ನು ಶಿಫ್ಟ್ ಮಾಡಿದ್ದು ಗುರುತು ಪತ್ತೆಗಾಗಿ ಪರಿಶೀಲನೆ ನಡೆಸ್ತಿದ್ದಾರೆ.
ಶಿವಮೊಗ್ಗ : ಗಾಂಧಿ ಪಾರ್ಕ್ನಲ್ಲಿನ ಮಕ್ಕಳ ರೈಲಿನ ಇಂಜಿನ್ನಲ್ಲಿ ಸಮಸ್ಯೆ! ದಟ್ಟ ಹೊಗೆ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
