ವಿನೋಬಾ ನಗರದಲ್ಲಿ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಿಕ್ ಸಾಮಗ್ರಿಗಳ ಕಳ್ಳತನ

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

Theft at Vinobanagar : ಶಿವಮೊಗ್ಗ: ವಿನೋಬಾ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಮತ್ತು ಕಟ್ಟಡ ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಕುರಿತು ಕಾಮಗಾರಿ ವಹಿಸಿಕೊಂಡಿದ್ದ ಇಂಜಿನಿಯರ್ ಅವರು ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ ನಾಗರಿಕರಿಗೆ ನಾಳೆ ವಿದ್ಯುತ್‌, ನೀರು ಪೂರೈಕೆಯಲ್ಲಿ ಸಂಕಷ್ಟ!

ವಿನೋಬಾ ನಗರದ  ಇಂಜಿನಿಯರ್​ ಒಬ್ಬರು ಕಾಶಿಪುರ ಪ್ರಿಯದರ್ಶಿನಿ ಬಡಾವಣೆಯ 5ನೇ ಮುಖ್ಯ ರಸ್ತೆಯಲ್ಲಿ ಹೊಸ ಮನೆಯನ್ನು ನಿರ್ಮಿಸುತ್ತಿದ್ದಾರೆ. ಡಿಸೆಂಬರ್ 7ಕೆಲಸ ಮುಗಿಸಿ, ಕೆಲಸದ ಸಾಮಗ್ರಿಗಳು ಮತ್ತು ಎಲೆಕ್ಟ್ರಿಕ್ ವಸ್ತುಗಳನ್ನು ಕೋಣೆಯಲ್ಲಿ ಇಟ್ಟು ಹೋಗಿದ್ದರು. ಆದರೆ ಡಿಸೆಂಬರ್ 8 ರಂದು ಬೆಳಿಗ್ಗೆ ಸ್ಥಳಕ್ಕೆ ಬಂದು ನೋಡಿದಾಗ ಇಂಜಿನಿಯರ್​ಗೆ ಶಾಕ್​​ ಎದುರಾಗಿದೆ. ಅದೇನೆಂದರೆ  ಕಳ್ಳರು ಬಾಗಿಲಿನ ಬೀಗ ತೆಗೆದು ಕಳ್ಳತನ ಮಾಡಿರುವುದು ತಿಳಿದುಬಂದಿದೆ.

ಕಳ್ಳರು ಕೋಣೆಯಿಂದ 6 ಕಾಯಿಲ್ ವೈರ್‌ಗಳು, 60 ಸ್ವಿಚ್‌ಗಳು, 7 ಎಂಸಿಬಿಗಳು, 25 ಸ್ವಿಚ್‌ ಮೇಟ್‌ಗಳು, ಪ್ಲಂಬಿಂಗ್ ವಸ್ತುಗಳು, ಟೈಲ್ಸ್ ಅಳವಡಿಸಲು ಬಳಸುವ 2 ಕಟ್ಟಿಂಗ್ ಮಷಿನ್‌ಗಳು, 1 ಗ್ರೇಡಿಂಗ್ ಮಷಿನ್ ಮತ್ತು ಪೇಂಟಿಂಗ್ ಮಿಕ್ಸಿಂಗ್ ವೈರ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಇದರ ಜೊತೆಗೆ, ಈಗಾಗಲೇ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸುಮಾರು ಒಂದು ಲಕ್ಷದ 20 ಸಾವಿರ ರೂ. ಅಂದಾಜು ಮೌಲ್ಯದ 6 ಕಾಯಿಲ್ ವೈರ್‌ಗಳನ್ನು ಸಹ ಕತ್ತರಿಸಿ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga
Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

Theft at Vinobanagar Construction Site

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor