ಅಡಿಕೆ ತೋಟಕ್ಕೆ ನುಗ್ಗಿ 15 ಕ್ವಿಂಟಾಲ್‌ಗೂ ಹೆಚ್ಚು ಅಡಿಕೆ ಕಳವು: ಪ್ರಶ್ನಿಸಿದ ಮಾಲೀಕನಿಗೆ ಜೀವ ಬೆದರಿಕೆ

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆ ತೋಟಕ್ಕೆ ನುಗ್ಗಿ 15 ಕ್ವಿಂಟಾಲ್‌ಗೂ ಹೆಚ್ಚು ಅಡಿಕೆ ಕಳವು: ಪ್ರಶ್ನಿಸಿದ ಮಾಲೀಕನಿಗೆ ಜೀವ ಬೆದರಿಕೆ
Shimoga news Areca Nut Theft Copper Utensils Theft Woman Narrowly Escapes Chain Snatching Attempt in Soraba While Riding Scooty

ಸೊರಬಾದ ಗ್ರಾಮವೊಂದರಲ್ಲಿ ಅಡಿಕೆ ತೊಟಕ್ಕೆ ಅಕ್ರಮವಾಗಿ ಪ್ರವೇಶಿಸಿ 15 ಕ್ವಿಂಟಾಲ್​ ಹಸಿ ಅಡಿಕೆಯನ್ನು ಕದ್ದಿದ್ದು ಅಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದ ಮಾಲೀಕನಿಗೆ  ಜೀವ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೊರಬಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ ನಾಗರಿಕರಿಗೆ ನಾಳೆ ವಿದ್ಯುತ್‌, ನೀರು ಪೂರೈಕೆಯಲ್ಲಿ ಸಂಕಷ್ಟ!

Areca Nut Theft  ಪ್ರಕರಣದ ವಿವರ

ಸೊರಬಾದ ಗ್ರಾಮವೊಂದರ ರೈತರಿಗೆ ಸೇರಿದ 1 ಎಕರೆ 20 ಗುಂಟೆ ವಿಸ್ತೀರ್ಣದ ಅಡಿಕೆ ತೋಟಕ್ಕೆ ಆರೋಪಿಗಳೆಲ್ಲರೂ ಅಕ್ರಮವಾಗಿ ನುಗ್ಗಿದ್ದಾರೆ. ಅವರು ತೋಟದಿಂದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ, ಅಂದಾಜು 15 ಕ್ವಿಂಟಾಲ್‌ಗಿಂತ ಹೆಚ್ಚು ಹಸಿ ಅಡಿಕೆಯನ್ನು ಕದ್ದಿದ್ದಾರೆ.

ಈ ಕದ್ದ ಅಡಿಕೆಯನ್ನು  ಟಿಲ್ಲರ್‌ನಲ್ಲಿ ತುಂಬಿ ಸಾಗಿಸುತ್ತಿದ್ದರು. ಇ ವೇಳೆ ತೋಟದ ಮಾಲೀಕ  ಮಧ್ಯಾಹ್ನ ತೋಟಕ್ಕೆ ನೀರು ಬಿಡಲು ಹೋದಾಗ, ಕಳ್ಳರು ಅಡಿಕೆ ಸಾಗಿಸುತ್ತಿರುವುದನ್ನು ನೋಡಿದ್ದಾರೆ. ತಕ್ಷಣವೇ ಕಳ್ಳತನವನ್ನು ತಡೆಯಲು ಹೋದ ಮಾಲೀಕರ ಮೇಲೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಆರೋಪಿತರಲ್ಲಿ ಒಬ್ಬ ವ್ಯಕ್ತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರೆ, ಮತ್ತೊಬ್ಬ ಆರೋಪಿಯು ಕುಡುಗೋಲು ತೋರಿಸಿ ಕೊಚ್ಚಿಬಿಡುವುದಾಗಿ ಬೆದರಿಸಿದ್ದಾನೆ. ಉಳಿದ ಆರೋಪಿಗಳು ಸೇರಿಕೊಂಡು ತೋಟದ ಮಾಲೀಕರನ್ನು ಕೈಯಿಂದ ತಳ್ಳಿ, ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ  ಆರೋಪಿಸಲಾಗಿದೆ.

Areca Nut Theft case in soraba 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor