ರೈಲ್ವೆ ಪ್ರಯಾಣಿಕರಿಗೆ ಬೇಸರದ ಸುದ್ದಿ | ಶಿವಮೊಗ್ಗದಿಂದ ಸಂಚಾರ ಸ್ಥಗಿತಗೊಳಿಸಿದ ಈ ಟ್ರೈನ್​! ಕಾರಣವೇನು ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

THIRTHAHALLI | ಶಿವಮೊಗ್ಗದ ರೈಲುಗಳೆಲ್ಲಾ ಫುಲ್ ಆಗಿಯೇ ಓಡುತ್ತಿವೆ.  ಶಿವಮೊಗ್ಗ -ಬೆಂಗಳೂರು ಟ್ರೈನ್​  ಆಗಿರಬಹುದು ಅಥವಾ ಶಿವಮೊಗ್ಗ ಟು ಮೈಸೂರು ಟ್ರೈನ್ ಆಗಿರಬುದು ಬಹುತೇಕ ಟ್ರೈನ್​ಗಳಿಗೆ ಜನರು ಒಗ್ಗಿ ಹೋಗಿದ್ದು, ಅದರಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದಾರೆ. ಇದರ ನಡುವೆ ಶಿವಮೊಗ್ಗ ಚನ್ನೈ ತಿರುಪತಿ ರೈಲು ಸಂಚಾರ ಸ್ಥಗಿತಗೊಂಡಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಈ ಸಂಬಂಧ  ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂ ಟದ ಸದಸ್ಯರು ಸಂಸದರನ್ನ ಭೇಟಿ ಮಾಡಿದ್ದಾರೆ. ಅಲ್ಲದೆ  ಶಿವಮೊಗ್ಗದಿಂದ ತಿರುಪತಿಗೆ ಈ ಸಂಚರಿಸುತ್ತಿದ್ದ ರೈಲಿನ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದರಿಂದ ಶಿವಮೊಗ್ಗದ ನಗರದ ಜನತೆಗೆ ಬಹುದೊಡ್ಡ ಅನ್ಯಾಯವಾಗಲಿದೆ. ಕೇಂದ್ರ ರೈಲ್ವೆ ಸಚಿವರನ್ನು ಸಂಪರ್ಕಿಸಿ  ನಗರದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶಿವಮೊಗ್ಗದ ಸಂಸದರಿಗೆ ಮನವಿ ಸಲ್ಲಿಸಿದ್ದಾರೆ. 

ಇನ್ನು ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ  ಸಂಸದ ಬಿ.ವೈ.ರಾಘವೇಂದ್ರ  ಶಿವಮೊಗ್ಗದಿಂದ ಚೈನ್ನೈಗೆ ತೆರಳುತ್ತಿದ್ದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಪುನರಾರಂಭಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಚೆನ್ನೈನಲ್ಲಿ ಪ್ಲಾಟ್‌ಫಾರಂ ಕೊರತೆ ಎಂಬ ನೆಪ ಹೇಳಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರ ಪುನರಾರಂಭಕ್ಕೆ ಯತ್ನ ಮಾಡಲಾಗುತ್ತಿದೆ.

READ : ಇಸ್ರೇಲ್​ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ!

 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor