sslc result :  SSLC  ಫಲಿತಾಶ ಪ್ರಕಟ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ | ಶಿವಮೊಗ್ಗ ಜಿಲ್ಲೆಗೆ ಎಷ್ಟನೇ ಸ್ಥಾನ

ಹಂಚಿಕೊಳ್ಳಿ
WhatsApp Facebook X Telegram
Shivamogga Power Cable Theft bhadravati
Shivamogga Power Cable Theft bhadravati

sslc result : ಕರ್ನಾಟಕ ಎಸ್​ ಎಸ್​ ಎಲ್​ ಸಿ ಪರೀಕ್ಷೆ -01 ರ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ರಾಮಕೃಷ್ಣ ಶಾಲೆಯ ನಿತ್ಯಾ ಎಂ. ಕುಲಕರ್ಣಿ,   ಆದಿ ಚುಚಂಚನಗಿರಿ ಶಾಲೆಯ ಸಹಿಷ್ಣು ಎನ್,​ ಹಾಗೂ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ನಮನ ಕೆ ಎಂಬುವ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ

ಮಾರ್ಚ್​ 21 ರಿಂದ ಏಪ್ರಿಲ್​ 04 ರ ವರೆಗೆ ನಡೆದಿತ್ತು. ಒಟ್ಟು  8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು.  

sslc result :  ಶಿವಮೊಗ್ಗ ಜಿಲ್ಲೆಗೆ ಎಷ್ಟನೇ ಸ್ಥಾನ 

ಈ ಬಾರಿ ಎಸ್​ ಎಸ್​ ಎಲ್​ ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇಕಡಾ 82.29 ಪಡೆಯುವುವದರ ಮೂಲಕ  4 ನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲನೆ ಸ್ಥಾನದಲ್ಲಿ ಶೇಕಡಾ  91.12 ಪಡೆದು ದಕ್ಷಿಣ ಕನ್ನಡ ಜಿಲ್ಲೆ ಇದ್ದರೆ ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆ ಶೇಕಡಾ 89.96  ಹಾಗೂ ಮೂರನೇ ಸ್ಥಾನದಲ್ಲಿ ಶೇಕಡಾ 83.19  ಉತ್ತರ ಕನ್ನಡ ಜಿಲ್ಲೆ ಇದೆ. 

ಕಳೆದ ಬಾರಿ ಜಿಲ್ಲೆಗೆ ಮೂರನೇ ಸ್ಥಾನವನ್ನು ಪಡೆದಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ 4 ಸ್ಥಾನವನ್ನು ಪಡೆದಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor