KARNATAKA NEWS/ ONLINE / Malenadu today/ Jun 5, 2023 SHIVAMOGGA NEWS
ಶಿವಮೊಗ್ಗ/ ನಿಧನ ಹೊಂದಿದ ಕಾಂಗ್ರೆಸ್ ಕಾರ್ಯಕರ್ತನ ಅಂತ್ಯಸಂಸ್ಕಾರದಲ್ಲಿ ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡು, ತಮ್ಮ ಪಕ್ಷದ ಕಾರ್ಯಕರ್ತನಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಕೊಂಡೊಯ್ಯುವಾಗ ಹೆಗಲು ಕೊಟ್ಟ ಸ್ಪೀಕರ್, ಕೊನೆಕ್ಷಣದವರೆಗೂ ಇದ್ದು, ಅಗಲಿದ ಕಾರ್ಯಕರ್ತನಿಗೆ ವಿದಾಯ ಹೇಳಿದರು.
ಕುರ್ನಾಡು ಮಿತ್ತಕೋಡಿ ವೆಂಕಪ್ಪ ಕಾಜವ ಅವರ ಪುತ್ರ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವರ ಸಹೋದರ ಶರತ್ ಕಾಜವ ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದರು.
ಅವರ ಅಂತಿಮ ಸಂಸ್ಕಾರದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಪ್ತ ಬಳಗದವರು ಪಾಲ್ಗೊಂಡಿದ್ದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಕೂಡ ಅಲ್ಲಿದ್ದು, ಅಂತ್ಯಕ್ರಿಯೆ ವ್ಯವಸ್ಥೆಗಳನ್ನು ಗಮನಿಸಿದರಷ್ಟೆ ಅಲ್ಲದೆ ಮೃತದೇಹ ಸಾಗಿಸಲು ಹೆಗಲು ಕೊಟ್ಟು ಭಾವುಕರಾದರು.
ಕಾರ್ಯಕರ್ತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಭಾವುಕರಾದ ಸ್ಪೀಕರ್ ಯುಟಿ ಖಾದರ್ pic.twitter.com/ogmrBugcSX
— malenadutoday.com (@CMalenadutoday) June 5, 2023