4 ರಾಜ್ಯಗಳಲ್ಲಿ ಜಾಲಾಡಿ 110 ಫೋನ್‌ ಹುಡುಕಿದ ಪೊಲೀಸ್! ಮೊಬೈಲ್ ವಿಷಯದಲ್ಲಿ ವಹಿಸಬೇಕಾದ ಜಾಗ್ರತೆ ಏನು? ಎಸ್‌ಪಿ ಸಲಹೆ ಓದಿ!

ajjimane ganesh

SP Mithun KumarsAdvice ಡಿಸೆಂಬರ್ 4 2025, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಮಾನ್ಯವಾಗಿ ಮೊಬೈಲ್ ಫೋನ್‌, ಕಳ್ಕೊಂಡರೆ ಮುಗಿತು! ಹೊಸ ಪೋನ್​ ತಗೊಳ್ಳದೇ ಬೇರೆ ವಿಧಿ ಇಲ್ಲ ಅಂದ್ಕೊಳ್ತೀವಿ. ಈ ಪೈಕಿ ಕೆಲವರು, ಹೇಗಾದ್ರೂ ಆಗಲಿ, ತಮ್ಮ ಪೋನ್​ ತಮಗೆ ಸಿಗಲೇ ಬೇಕು ಅಂತಾ ಅದಕ್ಕೆ ಅಗತ್ಯವಿರುವ ಎಲ್ಲಾ ದಾರಿಗಳಲ್ಲು ಪ್ರಯತ್ನಿಸ್ತಾರೆ. ಹೀಗೆ ಪ್ರಯತ್ನಿಸಿದವರಿಗೂ, ಹೋಯ್ತು ಬಿಡು ಮೊಬೈಲ್​ ಅಂತಾ ಮರೆತವರಿಗೂ ಶಿವಮೊಗ್ಗ ಪೊಲೀಸ್ ಇಲಾಖೆ ಸರ್​ಪ್ರೈಸ್ ನೀಡಿದೆ. 

Shivamogga Cyber Crime 110 Lost Mobiles Recovered and Returned SP Mithun KumarsAdvice for mobile

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ

ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು, ಶಿವಮೊಗ್ಗ ಮಂದಿಯಿಂದ ಕಾಣೆಯಾದ, ಕಳುವಾದ ಮೊಬೈಲ್​ಗಳನ್ನು ಹುಡುಕಿ ತಂದು ಅದರ ವಾರಸ್ಸುದಾರರಿಗೆ ವಾಪಸ್ ಕೊಟ್ಟಿದ್ದಾರೆ. ವಿಶೇಷ ಅಂದರೆ, ಈ ಫೋನ್​ಗಳು ಶಿವಮೊಗ್ಗದಿಂದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣದಲ್ಲಿ ಸುತ್ತಾಡಿ, ಇನ್ನೆಲ್ಲೋ ಪೊಲೀಸರ ಕೈಗೆ ಸಿಕ್ಕಿದೆ.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಜಿಲ್ಲಾದ್ಯಂತ ಇದುವರೆಗೆ ಸುಮಾರು 6445 ಮೊಬೈಲ್ ಕಳೆದುಹೋಗಿರುವ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಒಟ್ಟು 1194ಕ್ಕೂ ಅಧಿಕ ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದೇವೆ ಎಂಬುದು ಶಿವಮೊಗ್ಗ ಪೊಲೀಸರ ಹೆಗ್ಗಳಿಕೆ. ಇದರ ನಡುವೆ ಕಳೆದ 02 ತಿಂಗಳಲ್ಲಿ 110 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ ಪೊಲೀಸರು ಅದನ್ನ ನಿನ್ನೆ ದಿನ ಮೊಬೈಲ್ ಕಳೆದುಕೊಂಡವರಿಗೆ ವಾಪಸ್ ಕೊಟ್ಟಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಎಸ್​ಪಿ ಜಿ. ಕೆ. ಮಿಥುನ್ ಕುಮಾರ್ ಅವರು, ಮೊಬೈಲ್ ಕಳೆದುಕೊಂಡಾಗ ಪ್ರತಿಯೊಬ್ಬರೂ ತಕ್ಷಣ ಜಾಗರೂಕತೆ ವಹಿಸಬೇಕು ಅಂತಾ ಒಂದಿಷ್ಟು ಸಲಹ ನೀಡಿದ್ದಾರೆ. 

ಎಸ್​ಪಿ ಜಿ. ಕೆ. ಮಿಥುನ್ ಕುಮಾರ್ ನೀಡಿದ ಸಲಹೆ/SP Mithun KumarsAdvice

  1. ಕಳೆದುಹೋದ ಮೊಬೈಲ್‌ನಲ್ಲಿರುವ ಸಿಮ್ ಕಾರ್ಡ್‌ಗಳನ್ನು ಬಳಸಿ ಸೈಬರ್ ಅಪರಾಧ ಎಸಗುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ, ನಾವು ಬೆಲೆಬಾಳುವ ಚಿನ್ನಾಭರಣಗಳನ್ನು ಹೇಗೆ ಕಾಪಾಡಿಕೊಳ್ತುತ್ತೇವೆಯೋ? ಅದೇ ರೀತಿಯಲ್ಲಿ ಮೊಬೈಲ್‌ಗಳನ್ನು ಸಹ ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು
  2. ಮೊಬೈಲ್‌ನಲ್ಲಿ ಕೆಲವು ಸೇಫ್ಟಿ ಅಪ್ಲಿಕೇಶನ್‌ಗಳನ್ನು ಉಪಯೋಗಿಸಿಕೊಳ್ಳುವುದು ಉತ್ತಮ. 
  3. ಮೊಬೈಲ್ ಫೋನ್‌ನಲ್ಲಿ ಲೊಕೇಶನ್ ಅನ್ನು ಯಾವಾಗಲೂ ಆನ್ ಮಾಡಿಕೊಂಡಿದ್ದರೆ, ಮೊಬೈಲ್ ಕಳೆದುಹೋದಾಗ ಅದನ್ನು ಹುಡುಕಲು ಅನುಕೂಲವಾಗುತ್ತದೆ. 
  4. ಮೊಬೈಲ್ ಕಳೆದುಹೋದ ತಕ್ಷಣವೇ ಅದನ್ನು ಬ್ಲಾಕ್ ಮಾಡಿಸುವುದು ಅತ್ಯಗತ್ಯ. ಇಲ್ಲದಿದ್ದರೆ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ಬಳಸಿ ಸೈಬರ್ ಅಪರಾಧ ಎಸಗಬಹುದು.
  5. ಮೊಬೈಲ್‌ನಲ್ಲಿರುವ ನಿಮ್ಮ ವೈಯುಕ್ತಿಕ ಡೇಟಾ, ಇಮೇಲ್ ಪಾಸ್‌ವರ್ಡ್, ಪಿನ್, ಒಟಿಪಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ಶೇರ್ ಮಾಡಬಾರದು. 
  6. ಮೊಬೈಲ್‌ನ ಸುರಕ್ಷತೆಗಾಗಿ ಕಡ್ಡಾಯವಾಗಿ ಪಿನ್ ಇಟ್ಟುಕೊಳ್ಳಬೇಕು. ಫಿಂಗರ್ ಅಥವಾ ಬಯೋಮೆಟ್ರಿಕ್ ಲಾಕ್ ಇದ್ದರೆ, ಅದು ಇನ್ನೂ ಹೆಚ್ಚು ಉತ್ತಮ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಸೈಬರ್ ಕ್ರೈಂ 110 ಕಳೆದುಹೋದ ಮೊಬೈಲ್‌ಗಳ ಮರು ಹಸ್ತಾಂತರ; ಎಸ್‌ಪಿ ಮಿಥುನ್ ಕುಮಾರ್ ಭದ್ರತಾ ಸಲಹ Shivamogga Cyber Crime 110 Lost Mobiles Recovered and Returned SP Mithun KumarsAdvice for mobile
Share This Article