ಬೆಕ್ಕಿನ ಕಲ್ಮಠದ ಕಚೇರಿಗೆ ಬಂದ ವಿಷವಿರದ ಅತಿಥಿ! ಸ್ನೇಕ್ ಕಿರಣ್ ಸ್ಟೋರಿ

ಹಂಚಿಕೊಳ್ಳಿ
WhatsApp Facebook X Telegram
Snake Enters Bekkinakalmata Office Shivamogga Rescued by Snake Kiran

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಹೊಳೆ ಬಸ್​ ಸ್ಟಾಪ್ ಬಳಿ ಇರುವ ಬೆಕ್ಕಿನಕಲ್ಮಠಕ್ಕೆ ಮೊನ್ನೆ ದಿನ ಅಪರೂಪದ ಅತಿಥಿಯೊಬ್ಬರು ಆಗಮಿಸಿದ್ದರು. ಅದನ್ನ ಕಂಡು ಮಠದ ಸಿಬ್ಬಂದಿ ಆತಂಕಗೊಂಡಿದ್ದಷ್ಟೆ ಅಲ್ಲದೆ ಭಯಭೀತರಾಗಿದ್ದರು. ಏಕೆಂದರೆ ಬಂದಿದ್ದ ಅಪರೂಪದ ಅತಿಥಿ ಹಾವಾಗಿತ್ತು.

ನಿಜ, ಕಚೇರಿಗೆ ಹಾವೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಜೂನ್ 04ರ ಗುರುವಾರ ಮಧ್ಯಾಹ್ನ ವರದಿಯಾಗಿದೆ. ಕಚೇರಿಯಲ್ಲಿದ್ದ ಬೀರುವಿನ ಕೆಳಭಾಗದಲ್ಲಿ ಹಾವು ಸೇರಿಕೊಂಡಿದ್ದು, ಅಲ್ಲಿಂದ ಹರಿದಾಡದ ಕಾರಣ ಕಚೇರಿ ಸಿಬ್ಬಂಧಿ ಆತಂಕಗೊಂಡಿದ್ದರು. ಕೊನೆಗೆ ಶಿವಮೊಗ್ಗದ ಸ್ನೇಕ್​ ಕಿರಣ್​ಗೆ ಕರೆ ಮಾಡಿ, ಹಾವನ್ನ ರೆಸ್ಕ್ಯೂ ಮಾಡುವಂತೆ ಮನವಿ ಮಾಡಿದ್ದಾರೆ.

ಶಿವಮೊಗ್ಗದ ಖ್ಯಾತ ಉರಗ ರಕ್ಷಕ ಸ್ನೇಕ್ ಕಿರಣ್ ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಬೀರುವಿನ ಅಡಿಯಲ್ಲಿದ್ದ ಹಾವನ್ನು ಪರಿಶೀಲಿಸಿ, . ಅದು ವಿಷರಹಿತ ಕೆರೆ ಹಾವು ಎಂಬುದನ್ನ ಖಾತ್ರಿ ಮಾಡಿಕೊಂಡಿದ್ದಾರೆ. ಅಂತಿಮವಾಗಿ ಹಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ , ಕಾರ್ಯಾಚರಣೆ ನಡೆಸಿ ಅದನ್ನ ಹಿಡಿದಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಕಚೇರಿ ಸಿಬ್ಬಂದಿ ಸುನಿಲ್ ವಿ. ಅವರು, ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವಿವರಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್​ ಕಿರಣ್ ಹಾವನ್ನ ಹಿಡಿದಿದ್ದಾರೆ. ಅವರು ಕೈಗೊಂಡ ಈ ಕಾರ್ಯಾಚರಣೆಗಾಗಿ ಬೆಕ್ಕಿನಕಲ್ಮಠದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor