SHIVAMOGGA NEWS TODAY

ಶಿವಮೊಗ್ಗದ ಸೂಗೂರಿನಲ್ಲಿ ಆರು ಕಾಲುಗಳ ಕರುವಿನ ಜನನ!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಹಸುವೊಂದು ಆರು ಕಾಲುಗಳಿರುವ ಕರುವಿಗೆ ಜನ್ಮ ನೀಡಿದೆ. ಈ ಕರುವನ್ನು ನೋಡಲು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ. 

ಶಿವಮೊಗ್ಗ:ಪಾಲಿಕೆಯಿಂದ ಕಾರ್ಯಾಚರಣೆ, ಆರ್.ಟಿ.ಓ. ರಸ್ತೆಯ ಗೂಡಂಗಡಿಗಳ ತೆರವು 

ಗ್ರಾಮದ ರೈತ ಹನುಮಂತಪ್ಪ ಎಂಬುವವರಿಗೆ ಸೇರಿದ ಹಸು ಈ ಕರುವಿಗೆ ಜನ್ಮ ನೀಡಿದೆ. ವಿಶೇಷವೆಂದರೆ, ಈ ಕರುವಿಗೆ ಹಿಂಬದಿಯಲ್ಲಿ ನಾಲ್ಕು ಕಾಲುಗಳಿವೆ. ಈ ಹೆಚ್ಚುವರಿ ಕಾಲುಗಳ ಕಾರಣದಿಂದ ಕರು ಎದ್ದು ನಿಲ್ಲಲು ಪರದಾಡುತ್ತಿದೆ. ಹಸು ಈ ವಿಚಿತ್ರ ಕರುವಿಗೆ ಜನ್ಮ ನೀಡುವ ಸಮಯದಲ್ಲಿ ತೀವ್ರ ಪ್ರಸವ ವೇದನೆಯಿಂದ ಒದ್ದಾಡುತ್ತಿತ್ತು. 

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ, ಹಸುವಿನ ಗರ್ಭದಲ್ಲಿದ್ದ ಕರುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಪ್ರಸ್ತುತ ಹಸು ಮತ್ತು ಆರು ಕಾಲುಗಳ ಕರು ಎರಡೂ ಆರೋಗ್ಯವಾಗಿದ್ದು, ವೈದ್ಯರ ನಿಗಾದಲ್ಲಿವೆ.

Six-Legged Calf Born in Suguru Village

Six-Legged Calf Born in Suguru Village
Six-Legged Calf Born in Suguru Village
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.