ಶಿವಮೊಗ್ಗ:ಪಾಲಿಕೆಯಿಂದ ಕಾರ್ಯಾಚರಣೆ, ಆರ್.ಟಿ.ಓ. ರಸ್ತೆಯ ಗೂಡಂಗಡಿಗಳ ತೆರವು 

ಹಂಚಿಕೊಳ್ಳಿ
WhatsApp Facebook X Telegram
RTO Road Clearance MCC Removes Illegal Stalls
RTO Road Clearance MCC Removes Illegal Stalls

ಶಿವಮೊಗ್ಗ: ನಗರದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿ ಇದ್ದ ಗೂಡಂಗಡಿ ಹಾಗೂ ತಿಂಡಿ ಗಾಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ತೆರವುಗೊಳಿಸಿದ್ದಾರೆ.

ಶಿವಮೊಗ್ಗದ ವಿವಿಧೆಡೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ!

ಆರ್.ಟಿ.ಓ. ರಸ್ತೆ ಅಕ್ಕಪಕ್ಕದಲ್ಲಿದ್ದ  ಈ ಅಂಗಡಿಗಳಿಂದಾಗಿ ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗುತ್ತಿತ್ತು. ಅಷ್ಟೇ ಅಲ್ಲದೆ, ಈ ಭಾಗದಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ಈ ಕುರಿತು ಪತ್ರಿಕೆಗಳಲ್ಲಿ ವರದಿಗಳು ಬಿತ್ತರವಾಗಿದ್ದವು ಮತ್ತು ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಪಾಲಿಕೆಗೆ ಸಲ್ಲಿಕೆಯಾಗಿದ್ದವು. 

ಇದರಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಈ ಹಿಂದೆ ತೆರವು ಕಾರ್ಯಾಚರಣೆ ಮಾಡಿದ್ದರು. ಆದರೆ ಅದು ಪೂರ್ಣಪ್ರಮಾಣದಲ್ಲಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಂಚಾರಿ ಪೊಲೀಸರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ, ಫುಟ್‌ಪಾತ್‌ಗಳನ್ನು ಮುಕ್ತಗೊಳಿಸಿದ್ದಾರೆ. 

ರಸ್ತೆ ಬದಿಯ ಅತಿಕ್ರಮಣ ತೆರವುಗೊಳಿಸಿರುವುದರಿಂದ ಈಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ. 

RTO Road Clearance MCC Removes Illegal Stalls

RTO Road Clearance MCC Removes Illegal Stalls
RTO Road Clearance MCC Removes Illegal Stalls
shivamogga car decor sun control house
shivamogga car decor sun control house


ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor