ನವೆಂಬರ್ 10 2025 ಮಲೆನಾಡು ಟುಡೆ ಸುದ್ದಿ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣ ಬೇಟೆ, ಅರಣ್ಯ ಇಲಾಖೆಯಿಂದ ಆರು ಜನರ ಬಂಧನ, ಮೂಡಿಗೆರೆ ವ್ಯಾಪ್ತಿಯಲ್ಲಿ ವನ್ಯಜೀವಿ ಹತ್ಯೆ ಪ್ರಕರಣ, ಮಾಂಸ, ಬಂದೂಕು ವಶ, ಎಸ್ಟೇಟ್ ಮಾಲೀಕ ಸೇರಿ ಮೂವರು ಆರೋಪಿಗಳು ಪರಾರಿ

ಶಿವಮೊಗ್ಗ, ದಕ್ಷಿಣಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ : 15 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್!
ಕೋಣ ಹೊಡೆಯಲು ಹೋಗಿ ಆರು ಮಂದಿ ಅಂದರ್ ಆದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಅರಣ್ಯ ವಲಯದಲ್ಲಿ ನಡೆದಿದೆ. ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತೀ ಬೈಲ್ ವ್ಯಾಪ್ತಿಯ ಬಾಳೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಾಟಿ ಬೇಟೆಯ ಸಂಬಂಧ ಆರು ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ.
ಸಣ್ಣ ಮುನ್ನೆಚ್ಚರಿಕೆಯಿಂದ ಸುಗಮವಾಗಿ ಸಾಗಿದ ಚಿಕ್ಕಮಗಳೂರು-ಶಿವಮೊಗ ಟ್ರೈನ್! ಕಣಿವೆ ಗ್ರಾಮದಲ್ಲಿ ಏನಾಯ್ತು ಓದಿ
ಇಲ್ಲಿನ ನಿವಾಸಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಾಡುಕೋಣದ ಮಾಂಸ ಸಮೇತ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳು ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟ್‌ನಲ್ಲಿ ಕಾಡುಕೋಣ ಬೇಟೆಯಾಡಿದ್ದಾರೆ. ಇಲ್ಲಿನ ಕಲ್ಮನೆ ಎಸ್ಟೇಟ್‌ನಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಕಾಡುಕೋಣವನ್ನು ಬೇಟೆಯಾಡಿದ್ದು, ಅದರ ಮಾಂಸವನ್ನು ಬಹಳ ಜನರು ಹಂಚಿಕೊಂಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಇನ್ನೂ ಇಲ್ಲಿನ ಮರ್ಕಲ್ ಕೆರೆಯಲ್ಲಿ ಕಾಡುಕೋಣದ ತಲೆ ಪತ್ತೆಯಾಗಿದೆ. ಸದ್ಯ ಪ್ರಕರಣದಲ್ಲಿ ಆರು ಜನರನ್ನ ಅರೆಸ್ಟ್ ಮಾಡಲಾಗಿದೆ. ಮೂವರು ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಯಲ್ಲೋ ಅಲರ್ಟ್! ಹವಾಮಾನ ಇಲಾಖೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Six Arrested for Bison Gaur Poaching in Mudigere Forest Chikkamagaluru
