shivamogga short news live / 1. ಶಿವಮೊಗ್ಗದಲ್ಲಿ ಬಡ್ಡಿ ವ್ಯವಹಾರದ ವಿವಾದ: ಹಲ್ಲೆ ಪ್ರಕರಣ ದೂರು
ಶಿವಮೊಗ್ಗದ ಹೊಸಮನೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಬಡ್ಡಿ ವ್ಯವಹಾರದ ವಿವಾದ ಹಲ್ಲೆಗೆ ಎಡೆಮಾಡಿಕೊಟ್ಟಿದೆ. ಇಲ್ಲಿನ ವ್ಯಕ್ತಿಯೊಬ್ಬರು ಸಿಂಡಿಕೇಟ್ ಬ್ಯಾಂಕ್ ಚೆಕ್ ಅಡವಿಟ್ಟು 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಚೆಕ್ ಹಿಂದಿರುಗಿಸದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಹಲ್ಲೆಯಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ಪ್ರಕರಣ ತನಿಖೆ ಮಾಡುತ್ತಿದ್ದಾರೆ.
2. ಸಾಗರದ ಏತರ್ ಶೋರೂಮ್ ವಿರುದ್ಧ ಪತ್ರಕರ್ತರ ಪ್ರತಿಭಟನೆ
ಸಾಗರದ ಏತರ್ ಇಲೆಕ್ಟ್ರಿಕ್ ವಾಹನ ಶೋರೂಮ್ ವಿರುದ್ಧ ಪತ್ರಕರ್ತ ರಮೇಶ್ ಪ್ರತಿಭಟನೆ ನಡೆಸಿದ್ದಾರೆ. ಎರಡು ತಿಂಗಳ ಹಿಂದೆ ಅಪಘಾತಗೊಂಡ ವಾಹನವನ್ನು ಸರಿಪಡಿಸಲು ಶೋರೂಮ್ಗೆ ನೀಡಿದರೂ, ಇನ್ನೂ ದುರಸ್ತಿ ಪೂರ್ಣಗೊಳಿಸಿಲ್ಲ. ಮೇಲಾಗಿ ಮತ್ತು ಇನ್ಷುರೆನ್ಸ್ ಕಂಪನಿಯಿಂದ ನಿರ್ಲಕ್ಷ್ಯದ ಬರುತ್ತಿದೆ ಎಂದು ಆರೋಪಿಸಿದ್ದಾರೆ.

3. ಅಡಿಕೆ ಸಹಕಾರ ಸಂಘದ ಮಹಾಮಂಡಳದ ಅಧ್ಯಕ್ಷರಾಗಿ ಶಾಸಕ ಜ್ಞಾನೇಂದ್ರ ಆಯ್ಕೆ
ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಯು ಸುಪ್ರೀಂ ಕೋರ್ಟ್ನಲ್ಲಿ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ.

4. ಸಾಗರ ಆಸ್ಪತ್ರೆ ಸುಧಾರಣೆ ಹಾಗೂ ಜನೌಷಧಿ ಕೇಂದ್ರ ವಿವಾದ / shivamogga short news live
ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೊರೋನಾ ಮತ್ತು ಡೆಂಗ್ಯೂ ನಿಯಂತ್ರಣ ಕುರಿತು ನಡೆದ ಸಭೆಯ ನಂತರ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣರವರು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳು ಬಡವರಿಗೆ ಸಹಾಯಕವಾಗಿದ್ದು, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿವೆ. ಇಂತಹ ಉಪಯುಕ್ತ ಕೇಂದ್ರಗಳನ್ನು ಆಸ್ಪತ್ರೆ ಆವರಣದಿಂದ ತೆರವುಗೊಳಿಸಲಾಗುತ್ತಿರುವುದಕ್ಕೆ ತಮ್ಮ ಸಹಮತ ಇಲ್ಲ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.