JP STORY

ನರಸಿಂಹ ಮ@ರ್ಡರ್​! ಅಂಬು ಶಿಕಾರಿ ಸ್ಕೆಚ್​​ ಬೇರೆ ಇತ್ತಾ? ಕೇಸ್​ನ ಬಾಸ್ ಬೇರೆಯವರಾ? ರಿವೆಂಜಾ? ಏಳಿ ಎದ್ದೇಳಿ!?

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga rowdyism story / ಶಿವಮೊಗ್ಗದಲ್ಲಿ ಮತ್ತೊಮ್ಮ ರೌಡಿಸಂ ಮೌನ ಮುರಿದಿದೆ. ಈ ಹಿಂದೆ ಮಲೆನಾಡು ಟುಡೆ ಶಿವಮೊಗ್ಗದಲ್ಲಿ ಮತ್ತೊಂದು ಘಟನೆ ನಡೆಯುವ ಸಾಧ್ಯತೆ ಇದೆ. ಮಚ್ಚು ಲಾಂಗುಗಳು ದ್ವೇಷ ಸಾಧಿಸ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಜಾಗ್ರತೆ ವಹಿಸಬೇಕಿದೆ ಎಂದು ವರದಿ ಮಾಡಿತ್ತು. ಇದೀಗ ಏನು ನಡೆಯಬಾರದು ಎಂದು ನಮ್ಮ ವರದಿ ಆಶಯಿಸಿತ್ತೋ ಅದೆ ನಡೆಯುತ್ತಿದೆ. ಮೊನ್ನೆ ಮೊನ್ನೆ ಭದ್ರಾವತಿಯ ಮುದ್ದೆ ಅಲಿಯಾಸ್​ ವಿಶ್ವ ಮೇಲೆ ನಡೆದ 307 ಕೇಸ್​ನಲ್ಲಿ ಪೊಲೀಸರು ಓಡಾಡ್ತಿರುವ ಬೆನ್ನಲ್ಲೆ ನಿನ್ನೆ ಶಿವಮೊಗ್ಗದ ಗಾಂಧಿ ಬಂಜಾರ್​ನ ಅಡ್ಡೆಯೊಂದರಲ್ಲಿ ಮೂಲತಃ ಸೀಗೆಹಟ್ಟಿಯ ನರಸಿಂಹ 302 ಆಗೋಗಿದ್ದಾನೆ. ಇದಕ್ಕೆ ಕಾರಣ ಏನಿರಬಹುದು ಎಂಬುದು ಕೆಲವೇ ಸೆಕೆಂಡ್​ಗಳಲ್ಲಿ ಗೊತ್ತಾಗಿ ಹೋಗಿದೆ.

ಬಲು ಜೋರಾಗಿದೆ ಶಿವಮೊಗ್ಗದಲ್ಲಿ ರೌಡಿಗಳ ಫೀಲ್ಡಿಂಗ್​? 

ಗಾಂಧಿ ಬಜಾರ್​ನಲ್ಲಿ ಹೀಗಾಯ್ತು ಎನ್ನುವುದರ ಸುದ್ದಿ ಜಸ್ಟ್ ಕೆಲವೇ ಸೆಕೆಂಡ್​ಗಳಲ್ಲಿ ಇಡಿ ಹಳೆಶಿವಮೊಗ್ಗ ಗೊತ್ತಾಗಿ ಹೋಗಿತ್ತು. ಮೀಡಿಯಾಕ್ಕೆ ಪೊಲೀಸರಿಗೆ ಸುದ್ದಿ ಸಿಗುವ ಮೊದಲೇ ವಿತ್ ಟೈಮಿಂಗ್​ನ ಫೋಟೋಗಳು ವಾಟ್ಸಾಪ್​ಗಳಲ್ಲಿ ಬುಲೆಟ್​ ಟ್ರೈನ್​ ಸ್ಪೀಡ್​ನಲ್ಲಿ ಫಾರವರ್ಡ್​ ಆಗಿತ್ತು ಎಂದರೆ ಜಸ್ಟ್ ಇಮಾಜಿನ್​ ನಡೆದ ಕೃತ್ಯದ ಉದ್ದೇಶ ಎನಿರಬಹುದು ಎಂದು. ಹೌದು ವೀಕ್ಷಕರೆ,, ನಿನ್ನೆ ನಡೆದ ನರಸಿಂಹ ಸಂಹಾರದ ಹಿಂದೆ ಮತ್ತದೆ ಶಿವಮೊಗ್ಗದ ರೌಡಿ ಕಾಳಗದ ಕಥೆ ಸೇರುತ್ತಿದೆ. ಇಲ್ಲಿ ಮತ್ತೆ ಹೆಬ್ಬಟ್ಟು, ನವುಲೆ, ಅಣ್ಣಿ, ಕಾರ್ತಿ ಹೀಗೆ ಹಲವು ಹೆಸರುಗಳು ಬಂದು ಹೋಗುತ್ತಿದೆ.

ಮಲೆನಾಡು ಟುಡೆಗೆ ಸಿಕ್ಕ ಬಲ್ಲಮೂಲದ ಮಾಹಿತಿ ಪ್ರಕಾರ, ನಿನ್ನೆ ನಡೆದಿದ್ದು ಕೇವಲ ಒಂದು ಇನ್ಸಿಡೆಂಟ್​ ಅಷ್ಟೆ! ನರಸಿಂಹ ಆರೋಪಿಗಳಿಗೆ ಸಿಕ್ಕಿದ್ದು ಕಾಕತಾಳೀಯವಷ್ಟೆ.. ಅಸಲಿಗೆ ಹಲ್ಲೆಕೋರರ ಶಿಕಾರಿ ಬೇರೆಯವನಾಗಿದ್ದ. ರೌಡಿ ಪಟಾಲಂನಲ್ಲಿ ಸ್ಕೆಚ್​ ಹಾಕಿದ ತಕ್ಷಣ ಕೆಲಸ ಆಗೋದು ನೂರಕ್ಕೆ ಒಂದು ಪರ್ಸೆಂಟ್​ ನಷ್ಟೆ ಸಾಧ್ಯ..ಆದಾಗ್ಯು ಟೂಲ್ಸ್​ ಇಟ್ಟುಕೊಂಡೆ ಓಡಾಡುತ್ತಿದ್ದ ಟೀಂಗೆ ನಿನ್ನೆ ಅಚಾನಕ್​ ಆಗಿ ಅಡ್ಡೆಯೊಳಗೆ ಎಕ್ಕಾದಾಟದ ಜೊತೆಗೆ ಮಿಕಾ ಆಗಿ ನರಸಿಂಹ ಸಿಕ್ಕಿಬಿಟ್ಟಿದ್ದ. ಇಸ್ಪೀಟ್​ ಎಲೆಯ ಆಟಕ್ಕೆ ಬಂದವರಿಗೆ ಅಲ್ಲಿ ನರಸಿಂಹ ಕಾಣಿಸಿದ್ದಾನೆ.. ಯಾರಾದರೇನೂ ಹಣೆಬರಹಕ್ಕೆ ಎಂದು ಕೊಂಡ ಗ್ಯಾಂಗ್​ ಮಚ್ಚು ಬೀಸಿ ಮನಸ್ಸೋ ಇಚ್ಚೆ ಕತ್ತರಿಸಿದೆ. ರೂಮಿನ ಮೂರು ಮೂಲೆಯೊಳಗೆ ಲಾಕ್ ಆಗಿದ್ದ ನರಸಿಂಹನಿಗೆ ಹೊರಬರಲು ಜೀವಂತವಾಗಿ ಸಾಧ್ಯವಾಗಲಿಲ್ಲ. ಬೆಡ್​ಶೀಟ್​ ಸುತ್ತಿದ ಹೆಣವಾಗಿ ಆತ ಶವಗಾರ ಸೇರಿದ..

ಇಷ್ಟಕ್ಕೂ ನರಸಿಂಹನನ್ನು ಹೊಡೆದವರು ಯಾರು? ಏಕೆ? ನಿನ್ನೆ ಅಂದರೆ ಜೂನ್​ 12 ರ ಸಂಜೆ 4:57 ಕ್ಕೆ ಘಟನೆಯ ಫೋಟೋಗಳು ಹೊರಕ್ಕೆ ಬಂದಿವೆ. ಅಂದರೆ, ಕೃತ್ಯ ನಾಲ್ಕು ಮುಕ್ಕಾಲರ ಹೊತ್ತಿಗೆ ನಡೆದಿತ್ತು. ಈ ಘಟನೆ ಹಿಂದಿರೋರು ಅಂಬು ಅಲಿಯಾಸ್ ಅನಿಲ್ & ಗ್ಯಾಂಗ್​. ಈತ ಶಿವಮೊಗ್ಗದ ಸೀಗೆಹಟ್ಟಿಯವನು. ಒಳ್ಳೆಹುಡುಗನಾಗಿದ್ದವನು. ಇನ್ನೂ ಸಣ್ಣ ವಯಸ್ಸು, ಬಂಕ್ ಬಾಲು ಮರ್ಡರ್​ ಕೇಸ್​ನಲ್ಲಿ ರೌಡಿ ಫೀಲ್ಡ್​ ಎಂಟ್ರಿಯಾದವ, ಸದ್ಯ ಶಿವಮೊಗ್ಗ ಪಾತಕಲೋಕದಲ್ಲಿ ಮೇಲ್ಮಟ್ಟದ ಹೆಸರು ಹೊಂದಿದಾತ. ಈತನಿಗೂ ನರಸಿಂಹನಿಗೂ ಅಂತದ್ದೇನು ದ್ವೇಷವಿಲ್ಲ. ಒಂದ್​ ಟೈಮ್​ನಲ್ಲಿ ನರಸಿಂಹನೂ ಈತನ ಜೊತೆಗಿದ್ದ ಅಂತಾರೆ ಲೋಕಲ್ ಬಾಯ್ಸ್..

ಆದರೆ, ಶಿವಮೊಗ್ಗದಲ್ಲಿ ದೊಡ್ಡ ಕೈಗಳ ನಡುವಿನ ದ್ವೇಷಕ್ಕೆ ಈಗಾಗಲೇ ಹಲವು ಕೊಲೆಗಳು ನಡೆದು ಹೋಗಿವೆ. ಈ ಪೈಕಿ ಹಂದಿ ಅಣ್ಣಿಯ ಕೊಲೆ ಕೇಸ್​, ನಿನ್ನೆಯ ನರಸಿಂಹನ ಹತ್ಯೆ ಪ್ರಕರಣಕ್ಕೆ ಬ್ಲಿಂಕ್​ ಆಗುತ್ತಿದೆ. ಇತ್ತ ಅಂಬುಗೂ ಅಸ್ತಿತ್ವದ ಪ್ರಶ್ನೆ. ಆತನಿಗೂ ಎದುರಾಳಿಗಳ ಕಡೆಯಿಂದ ಥ್ರಟ್​ ಇತ್ತು ಎನ್ನಲಾಗುತ್ತೆ. ಹೀಗಾಗಿ ಒಬ್ಬನ ಶಿಕಾರಿಗಾಗಿ ಅಂಬು ಟೀಂ ಫೀಲ್ಡ್ ಮಾಡಿತ್ತು. ಆದರೆ ಶಿಕಾರಿ ಸಿಗಲಿಲ್ಲ, ನರಸಿಂಹ ತಗ್ಲಾಕ್ಕಿಕೊಂಡಿದ್ದ. ಅಣ್ಣಿ ಮುಗಿಸಲು ಸಾಥ್​ ಕೊಟ್ಟಿದ್ದ ಅನ್ನುವ ಕಾರಣಕ್ಕೆ ನರಸಿಂಹನನ್ನು ಮುಗಿಸಲಾಯ್ತಾ? ಈ ಕೇಸ್ ನಡೆದಿದ್ದೇ ಬಾಸ್​ಗಳ ಅಣತಿಯಿಂದನಾ? ಇದು ಮುತ್ತೊಂದಕ್ಕೆ ಮುನ್ನುಡಿಯಾ? ಭಗವಂತ ಬಲ್ಲ…ಸದ್ಯಕ್ಕೆ ಇಷ್ಟೆ …ಅಷ್ಟೆ..

Whatsapp / https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ