156 ಮಂದಿ ಮೇಲೆ ಪಿಟ್ಟಿ ಕೇಸ್‌ : ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ಕ್ವಿಕ್ ಆಕ್ಷನ್!

ಹಂಚಿಕೊಳ್ಳಿ
WhatsApp Facebook X Telegram
Police Use Public Eye Drones for Crime Control
Police Use Public Eye Drones for Crime Control

ಮಲೆನಾಡು ಟುಡೆ, ಶಿವಮೊಗ್ಗ / ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಹಾಗೂ ಅಸಭ್ಯವಾಗಿ ವರ್ತಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಗರದಲ್ಲಿ ಅಕ್ಕ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ಈ ಅಕ್ಕಪಡೆಯ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ 156 ವ್ಯಕ್ತಿಗಳ ಮೇಲೆ ಸಣ್ಣ ಪುಟ್ಟ ಪ್ರಕರಣಗಳನ್ನು ದಾಖಲಿಸಲಾಗಿದೆ ಅಂತಾ ಎಸ್​ಪಿ ನಿಖಿಲ್ ಬಿ ತಿಳಿಸಿದ್ದಾರೆ. ಮನೆಗಳ್ಳತನ ತಡೆಯುವ ನಿಟ್ಟಿನಲ್ಲಿ ನೂತನ ಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಹಿತಿ ನೀಡುತ್ತಿದ್ದ ನಿಖಿಲ್ ಬಿ, ಈ ಬಗ್ಗೆ ವಿವರಿಸಿದೆ.

ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ಹೇಳಿದ ಪ್ರಮುಖ ಅಂಶಗಳು

ಜಿಲ್ಲೆಯಾದ್ಯಂತ ಖಾಲಿ ನಿವೇಶನಗಳು ಮತ್ತು ಜನಸಂಚಾರವಿಲ್ಲದ ಹೊರವಲಯದ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಡೋನ್ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ.

ಭದ್ರಾವತಿ ತಾಲೂಕಿನ ಕೂಡಿಗೆರೆ ಗ್ರಾಮದ ಹೊರವಲಯದಲ್ಲಿ ಜೂಜಾಟದಲ್ಲಿ ತೊಡಗಿದ್ದ 19 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಅದೇ ಗ್ರಾಮಾಂತರ ಪೊಲೀಸ್ ಸರಹದ್ದಿನ ಗ್ರಾಮದ ಹೊರವಲಯದಲ್ಲಿ ಡೋನ್ ಮೂಲಕ ಪರಿಶೀಲನೆ ನಡೆಸಿದಾಗ ಸಾರ್ವಜನಿಕ ಪ್ರದೇಶದಲ್ಲಿ ಮದ್ಯಸೇವನೆ ಮಾಡುತ್ತಿದ್ದವರ ವಿರುದ್ಧ ಅಬಕಾರಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕ್ರಮ ವಹಿಸಲಾಗಿದೆ.

ಇದಲ್ಲದೆ. ಜನವರಿ 1 ರಿಂದ ಇಲ್ಲಿಯವರೆಗೆ ನ್ಯಾಯಾಲಯದಲ್ಲಿ 27 ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

156 ಮಂದಿ ಮೇಲೆ ಪಿಟ್ಟಿ ಕೇಸ್‌ : ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ಕ್ವಿಕ್ ಆಕ್ಷನ್!  Shivamogga Police Register 156 Petty Cases, Akka Pade and Drone Operations Active.
156 ಮಂದಿ ಮೇಲೆ ಪಿಟ್ಟಿ ಕೇಸ್‌ : ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ಕ್ವಿಕ್ ಆಕ್ಷನ್! Shivamogga Police Register 156 Petty Cases, Akka Pade and Drone Operations Active.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor