ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆ ಈಗ ಪೊಲೀಸ್ ಡ್ರೋಣ್ ಕಣ್ಗಾವಲ್ಲಿದೆ. ವಿಶೇಷವಾಗಿ ಏರಿಯಾಗಳ ಸಂದು ಮೂಲೆಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನ ಈ ಪೊಲೀಸರು ಡ್ರೋಣ್ ಫೋಟೋ ಕಾಪಿ ಸಮೇತ ಎಸ್ಪಿ ಆಪೀಸ್ಗೆ ಕಳಿಸ್ತಿದೆ. ಇದರಿಂದಾಗಿ ಕೆಲವರಿಗೆ ಚುಟುಚುಟು ಶುರುವಾಗಿದ್ದು, ಎಲ್ಲಿ ಕೇಸ್ ಬಿಳುತ್ತೋ ಎನ್ನುವ ಭಯದಲ್ಲಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಏರಿಯಾ ಡಾಮಿನೇಷನ್ ಮತ್ತು ಪೂಟ್ ಪೆಟ್ರೋಲಿಂಗ್ನ ಮೂಲಕ ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳ ಮೇಲೆ ಸದಾ ಕಣ್ಣಿಡುತ್ತಿದ್ದರು. ಅವರ ನಂತರ ಬಂದಿರುವ ಎಸ್ಪಿ ನಿಖಿಲ್ ಬಿ, ಡ್ರೋಣ್ ಕಣ್ಗಾವಲಿನ ಮೊರೆ ಹೋಗಿದ್ದಾರೆ. ಮನೆ ಮನೆ ಪೊಲೀಸ್ ಬೆನ್ನಲ್ಲೆ ಡ್ರೋನ್ ಮೂಲಕವೇ ಸೂಕ್ಷ್ಮ ಪ್ರದೇಶಗಳ ವಿಶ್ಲೇಶಷಣೆ ಮಾಡಲಾಗುತ್ತಿದೆ. ಮತ್ತೆ ವಿಶೇಷ ಅಂದರೆ, ಈ ಡ್ರೋಣ್ಗಳು ಫಲಿತಾಂಶ ನೀಡಲು ಪ್ರಾರಂಭಿಸಿದೆ.
ನೀವು ಪೊಲೀಸ್ ಕಣ್ಗಾವಲಿನಲ್ಲಿ ಇದ್ದೀರಿ
ಡ್ರೋನ್ ಕಾರ್ಯಾಚರಣೆಗಾಗಿಯೇ 6 ಸಿಬ್ಬಂದಿಯಿದ್ದು, ತಂಡದಲ್ಲಿ 1 ಇನ್ಸ್‌ಪೆಕ್ಟರ್, 1 ಸಬ್-ಇನ್ಸ್‌ಪೆಕ್ಟರ್ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 4 ಸಿಬ್ಬಂದಿ ಸೇರಿದ್ದಾರೆ. ಇವರೆಲ್ಲರೂ ನುರಿತ ಡ್ರೋನ್ ಪೈಲೆಟ್ಗಳಾಗಿದ್ದಾರೆ. ಇನ್ನೂ ಒಟ್ಟು 4 ಡ್ರೋನ್‌ಗಳ ಪೈಕಿ ಸದ್ಯಕ್ಕೆ 2 ಡ್ರೋನ್‌ಗಳನ್ನು ಬಳಸಲಾಗುತ್ತಿದೆ. 112 ಸೇರಿದಂತೆ , ಸ್ಥಳೀಯರು ನೀಡುವ ದೂರಿನನ್ವಯ ಡ್ರೋರ್ಣ ಆಪರೇಷನ್ ನಡೆಯಲಿದೆ.
ಇನ್ನೊಂದು ವಿಶೇಷ ಅಂದರೆ, ಈ ಡ್ರೋಣ್ ಕಾರ್ಯಾಚರಣೆಯಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವುದು ಕಷ್ಟ ಎಕೇಂದರೆ ಆಗಸದಿಂದಲೇ, ಆರೋಪಿಯ ಚಹರೆಯನ್ನ ಕ್ಲಿಯರ್ ಆಗಿ ಕ್ಯಾಪ್ಚರ್ ಮಾಡುವ ಡ್ರೋಣ್, ಸರಿರಾತ್ರಿಯಲ್ಲಿಯು ಹೈ ಕ್ಲಾರಿಟಿ ಇಮೇಜ್ ನೀಡುತ್ತಿದೆ. ಹೀಗಾಗಿ ನಾನವನಲ್ಲ ಎನ್ನಲು ಸಾಧ್ಯವೆ ಇಲ್ಲ. ಒಟ್ಟಾರೆ, ಪೊಲೀಸ್ ಡ್ರೋಣ್ ವ್ಯವಸ್ಥೆ ಈಗ ಇಡೀ ಶಿವಮೊಗ್ಗದ ಮೇಲೆ ಕಣ್ಣಿಟ್ಟಿದ್ದು ಸೂಕ್ಷ್ಮ ಪ್ರದೇಶಗಳು ಸೂಕ್ಷ್ಮ ಚಟುವಟಿಕೆಗಳ ಮೇಲೆ ಸದಾ ನಿಗಾ ಇರಲಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
