ಶಿವಮೊಗ್ಗ: ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಹಾಗೂ ನಗದನ್ನು ಬಸ್​​​ನಲ್ಲೇ ಬಿಟ್ಟು ಇಳಿದ ಹೋದ ಮಹಿಳೆ, ಆಮೇಲೆ ಏನಾಯ್ತು?

ಹಂಚಿಕೊಳ್ಳಿ
WhatsApp Facebook X Telegram
ಕಳೆದುಹೋದ ನಗದು ಹಾಗೂ ಬಂಗಾರವನ್ನು ಮರಳಿಸಿದ ಪೊಲೀಸರು
ಕಳೆದುಹೋದ ನಗದು ಹಾಗೂ ಬಂಗಾರವನ್ನು ಮರಳಿಸಿದ ಪೊಲೀಸರು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಅಲಸೂರು ಗೇಟ್ ಮೂಲದ ಮಹಿಳೆಯೊಬ್ಬರು ಶಿವಮೊಗ್ಗದಿಂದ ತರಿಕೆರೆಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಾಗ, ಬಸ್‌ನಲ್ಲಿಯೇ ತಮ್ಮ ಬ್ಯಾಗ್ ಅನ್ನು ಮರೆತು ಇಳಿದಿದ್ದರು. ಬ್ಯಾಗ್‌ನಲ್ಲಿ ಸುಮಾರು 2 ಲಕ್ಷ ಮೌಲ್ಯದ ಬಂಗಾರದ ಒಡವೆಗಳು, 60,000 ನಗದು ಹಣ ಹಾಗೂ ಒಂದು ಮೊಬೈಲ್ ಫೋನ್ ಇತ್ತು.

ಬ್ಯಾಗ್ ಕಳೆದುಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಕಂಗಾಲಾದ ಮಹಿಳೆಯು ತಕ್ಷಣವೇ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ನೆರವು ಕೋರಿದ್ದರು.

ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಮಂಜಪ್ಪ ಚಂದ್ರನಾಯ್ಕ ರವರು ತಕ್ಷಣವೇ ಖಾಸಗಿ ಬಸ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್‌ನಲ್ಲಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ವಶಕ್ಕೆ ಪಡೆದ ಪೊಲೀಸರು, ಸಂಪೂರ್ಣ ನಗದು ಹಾಗೂ ಒಡವೆಗಳೊಂದಿಗೆ ಅದನ್ನು ವಾರಸುದಾರ ಮಹಿಳೆಗೆ ಯಶಸ್ವಿಯಾಗಿ ಹಸ್ತಾಂತರಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor