shivamogga lokayukta raid / ಮೆಗ್ಗಾನ್​ನಲ್ಲಿ ₹3.5 ಲಕ್ಷದ ಮೆಡಿಸಿನ್ ಅಕ್ರಮ ಪತ್ತೆ ಮಾಡಿತೆ ಲೋಕಾಯುಕ್ತಾ?​

ಹಂಚಿಕೊಳ್ಳಿ
WhatsApp Facebook X Telegram
shivamogga lokayukta raid
shivamogga lokayukta raid

shivamogga lokayukta raid  ಶಿವಮೊಗ್ಗ ಲೋಕಾಯುಕ್ತ ಪೊಲೀಸರು ನಿನ್ನೆ ದಿನ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಔಷಧಾಲಯ ವಿಭಾಗದಲ್ಲಿ 3.5 ಲಕ್ಷ ರೂಪಾಯಿ ಮೌಲ್ಯದ ಅನಧಿಕೃತವಾಗಿ ಸಂಗ್ರಹಿಸಲಾದ ಔಷಧಗಳನ್ನು ಪತ್ತೆಹಚ್ಚಿದ್ದಾರೆ.ಇವುಗಳು ಆಸ್ಪತ್ರೆಯ ಕ್ಷ-ಕಿರಣ ಘಟಕದ ಪಕ್ಕದ ಕೋಣೆಯಲ್ಲಿ ಇಡಲಾಗಿತ್ತು. ಅಲ್ಲದೆ ಪ್ರಕರಣ ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ. 

shivamogga lokayukta raid  ಮೆಗ್ಗಾನ್ ಆಸ್ಪತ್ರೆಯಲ್ಲಿ 3.5 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಔಷಧ ದಾಸ್ತಾನು ಬಹಿರಂಗ  

ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಂ.ಎಚ್. ಮಂಜುನಾಥ್ ಚೌದರಿ ನೇತೃತ್ವದ ತಂಡವು ಸೋಮವಾರ ಸಂಜೆ ಆಸ್ಪತ್ರೆಯ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿತ್ತಷ್ಟೆ ಅಲ್ಲದೆ ಮೆಡಿಸನ್​ ಸ್ಟಾಕ್​ಗಳನ್ನು ಪರಿಶೀಲಿಸಿದೆ. ಅಲ್ಲದೆ ಈ ಸಂಬಂಧ ಔಷಧಿಗೆ ಸಂಬಂಧಿಸಿದ ದಾಖಲಾತಿ ವಿವರಗಳನ್ನು ಗಮನಿಸಿದೆ.  ತನಿಖೆಯ ಸಮಯದಲ್ಲಿ, ಆಸ್ಪತ್ರೆಯ ಫಾರ್ಮಸಿ ವಿಭಾಗದ ಅಧಿಕಾರಿಯಿಂದ ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದಾಗ ಅಕ್ರಮ ದಾಸ್ತಾನು ಪತ್ತೆಯಾಗಿದೆ ಎನ್ನಲಾಗಿದೆ. ಸಾಮಾನ್ಯವಾಗಿ, ಸರ್ಕಾರಿ ಆಸ್ಪತ್ರೆಯ ಎಲ್ಲಾ ಔಷಧಗಳ ಮೇಲೆ “ನಾಟ್ ಫಾರ್ ಸೇಲ್” (ಮಾರಾಟಕ್ಕಿಲ್ಲ) ಎಂಬ ಟ್ಯಾಗ್ ಇರುತ್ತದೆ. ಆದರೆ, ಈ ಅಕ್ರಮವಾಗಿ ಸಂಗ್ರಹಿಸಲಾದ ಔಷಧಗಳ ಮೇಲೆ ಅಂತಹ ಗುರುತುಗಳು ಇರಲಿಲ್ಲ. ಹೀಗಾಗಿ ಅಧಿಕಾರಿಗಳು ಈ ವಿಚಾರದಲ್ಲಿ ಗಂಭೀರ ತನಿಖೆ ಆರಂಭಿಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor