ಕೋರ್ಟ್ ಆದೇಶ | ಶಿವಮೊಗ್ಗದಲ್ಲಿ ಕೆ.ಎಸ್​.ಈಶ್ವರಪ್ಪರ ನಾಲ್ಕು ಮಾತು

SHIVAMOGGA|  Dec 14, 2023  |    ಕೃಷ್ಣಜನ್ಮಭೂಮಿ ಮಥುರಾದ ಜ್ಞಾನವ್ಯಾಪಿ ಮಸೀದಿ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೆ ಶಿವಮೊಗ್ಗದಲ್ಲಿ ಕೆ.ಎಸ್​. ಈಶ್ವರಪ್ಪ ಮಾತನಾಡಿದ್ದಾರೆ.  ಹಿಂದುಸ್ತಾನಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ನಂತರ  ಭಾರತೀಯ ಸಂಸ್ಕೃತಿಗೆ ಗೌರವ ಬರುತ್ತಿದೆ ಎಂದಿದ್ದಾರೆ. 

ಆಯೋಧ್ಯ ರಾಮ ಮಂದಿರ‌ ಜನವರಿಯಲ್ಲಿ ಉದ್ಘಾಟನೆ ಆಗ್ತಿದೆ. ಕಾನೂನುಬದ್ದವಾಗಿ ರಾಮ ಮಂದಿರ ಕಟ್ಟಿದ್ದೇವೆ ಹಿಂದುಗಳಿಗೆ ಇದು ಸಂತೋಷದ ವಿಚಾರ.  ಕಾಶಿ ವಿಶ್ವನಾಥನ ದೇವಾಲಯ ಸರ್ವೇ ಮಾಡಬೇಕು ಅಂತಾ ಕೋರ್ಟ್ ಆದೇಶ ನೀಡಿದೆ. ಮಥುರಾದ ಕೃಷ್ಣ ದೇವಸ್ಥಾನ ಸರ್ವೇ ಆಗಬೇಕು ಅಂತಾ ಕೋರ್ಟ್ ಆದೇಶ‌ ನೀಡಿದೆ.  ಕೋರ್ಟ್ ಆದೇಶ ಪ್ರಪಂಚದ ಹಿಂದುಗಳಿಗೆ ಸಂತೋಷ ನೀಡಿದೆ ಎಂದಿದ್ದಾರೆ.  

ಇದೀಗ ಗುಲಾಮಗಿರಿಯ ಬಾಬರ್ ಕಟ್ಟಡ ಧ್ವಂಸ ಆಗಿ ರಾಮ ಮಂದಿರ ಆಗ್ತಿದೆ ಹಿಂದು ಸಮಾಜ ಸ್ವಾಗತ ಮಾಡ್ತದೆ ಎಂದಿದ್ದಾರೆ. ಮುಸ್ಲಿಂರು, ಕ್ರಿಶ್ಚಿಯನ್ನರು ಸಹ ‌ಇದನ್ನು ಸ್ವಾಗತ ಮಾಡ್ತಾರೆ ಎಂದ ಈಶ್ವರಪ್ಪ ಆರ್ಟಿಕಲ್ 370 ರದ್ದು ಮಾಡಿ ಜಮ್ಮು ಕಾಶ್ಮೀರಕ್ಕೆ ಮಾನ್ಯತೆ ದೊರೆತಿದೆ. ಇಂದಲ್ಲಾ ನಾಳೆ ಅಖಂಡ ಭಾರತ ನಿರ್ಮಾಣ ಆಗ್ತದೆ ಎಂದರು. 

READ : ಭದ್ರಾವತಿ ಬಡಿದಾಟ | ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರಕ್ಕೆ ಟ್ವಿಸ್ಟ್ ನೀಡಿದ ಆಯನೂರು ಮಂಜುನಾಥ್

ಇಂದಲ್ಲಾ ನಾಳೆ ಪಾಕಿಸ್ತಾನ ಭಾರತದ ಜೊತೆ ಸೇರುತ್ತದೆ ಎಂದ ಅವರು ಮಥುರಾ ವಿಷಯದಲ್ಲಿ ಕೋರ್ಟ್ ತೀರ್ಪು  ಸ್ವಾಗತ ಮಾಡ್ತೇನೆ ಎಂದಿದ್ದಾರೆ.  ಪಾಕಿಸ್ತಾನದಲ್ಲಿ ಮುಸ್ಲಿಂ ಆಡಳಿತ ಇದ್ದರೂ ಅನ್ನ ನೀರು ಕೊಡಲು ಆಗ್ತಿಲ್ಲ ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿಶ್ವದಲ್ಲೇ ಭಾರತ ಮೊದಲನೇ ಸ್ಥಾನಕ್ಕೆ ಹೋಗ್ತಿದೆ ಎಂದರು 

ಇನ್ನೂ ಇದೇ ವೇಳೆ  ಪಾರ್ಲಿಮೆಂಟ್ ನಲ್ಲಿ ಭದ್ರತಾ ವೈಫಲ್ಯ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ ಪಾರ್ಲಿಮೆಂಟ್ ಒಳಗಡೆ ಆಗಿರುವ ದುಷ್ಕೃತ್ಯ ನೋಡಿದಾಗ  ಬಿಗಿ ವ್ಯವಸ್ಥೆ ಆಗಬೇಕು ಎಂದು ಎನಿಸುತ್ತದೆ.  ಮುಂದಿನ ದಿನಗಳಲ್ಲಿ ಬಿಗಿ ವ್ಯವಸ್ಥೆ ಆಗುತ್ತದೆ ಎಂದಿದ್ದಾರೆ. ಅಲ್ಲದೆ  ಸಂಸದ ಪ್ರತಾಪ ಸಿಂಹ ವಿರುದ್ದ ಕಾಂಗ್ರೆಸ್ ಆರೋಪ ವಿಚಾರ ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ಹಿಂದುತ್ವವಾದಿ ಕಾಂಗ್ರೆಸ್ ‌ನವರಿಗೆ ಬೇರೆ‌ ಉದ್ಯೋಗ ಇಲ್ಲ. ಹೀಗಾಗಿ ಏನೇನೋ ಆರೋಪ ಮಾಡ್ತಿದ್ದಾರೆ. ವಿಧಾನಸಭೆಯಲ್ಲಿ‌ ಒಬ್ಬ ಯಜಮಾನ ಮನುಷ್ಯ ಒಬ್ಬ ಹೋಗಿ ಕುಳಿತಿದ್ದ ಆವಾಗ ಏನು ಮಾಡಿದ್ರು ಕಾಂಗ್ರೆಸ್​ನವರು ಎಂದು ಪ್ರಶ್ನಿಸಿದ್ದಾರೆ  ಇ


 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು