ಈದ್​ ಮಿಲಾದ್​ ಮತ್ತು ಗಣಪತಿ ಹಬ್ಬ! ಒಂದೆ ದಿನ ಬರುತ್ತಾ ಮೆರವಣಿಗೆ ? ಶಾಂತಿ ಸಭೆಯಲ್ಲಿ ಎಸ್​ಪಿಯಿಂದ 5 ಪ್ರಮುಖ ಸೂಚನೆ

This Article Written by / Malenadu Today / ಆಗಷ್ಟ್ 9, 2023

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS

ಈದ್ ಮಿಲಾದ್ ಮತ್ತು ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ  ದಿನಾಂಕಃ 09-08-2023  ರಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಎಸ್​ಪಿ ಮಿಥುನ್ ಕುಮಾರ್ ಜಿ. ಕೆ.  ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದರು. ಈ ವೇಳೇ ಐದು ಪ್ರಮುಖ ಸಲಹೆಗಳನ್ನ ನೀಡಿದ್ದಾರೆ.  

1) ಎಲ್ಲಾ ಹಬ್ಬಗಳೂ ಅದರದೇ ಆದ  ಪ್ರಾಮುಖ್ಯತೆಯನ್ನು ಹೊಂದಿದ್ದು, ಪ್ರತಿ ಹಬ್ಬವೂ ವಿಶೇಷವಾಗಿರುತ್ತದೆ. ಈ ವರ್ಷ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆ ಒಂದೇ ದಿನ ಬಂದಿದ್ದು, ಪೂರ್ವ ಭಾವಿಯಾಗಿ ಈ ಸಭೆಯನ್ನು ಕರೆಯಲಾಗಿರುತ್ತದೆ. 

2) ಹಬ್ಬದ ಆಚರಣೆಯು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ನಡೆಯುವುದರಿಂದ, ಮೆರವಣಿಗೆಯು ಯಾವ ದಿನ ನಡೆಯಬೇಕು ಮತ್ತು ಮೆರವಣಿಗೆ ಯಾವ ಮಾರ್ಗದಲ್ಲಿ ಹಾದು ಹೋಗಬೇಕು  ಹಾಗೂ ಹಬ್ಬದ ಅಲಂಕಾರವನ್ನು ಎಲ್ಲೆಲ್ಲಿ ಮಾಡಬೇಕು ಎಂಬ ಬಗ್ಗೆ ಜಿಲ್ಲೆಯ ಎಲ್ಲಾ ಮುಖಂಡರುಗಳು ಚರ್ಚಿಸಿ ಮುಂದಿನ ಸಭೆಯಲ್ಲಿ ತಿಳಿಸುವುದು. 

3) ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಲ್ಲಿ ನಿಮ್ಮಗಳ ಸಹಕಾರವು ಪ್ರಮುಖವಾಗಿರುತ್ತದೆ. ಇದರಲ್ಲಿ ಮುಖಂಡರುಗಳ ಪಾತ್ರವು ಸಹಾ ಪ್ರಮುಖ ವಾಗಿದ್ದು, ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ತಿಳಿಸಿದರು.

4) ಎರಡೂ ಹಬ್ಬಗಳು ಪವಿತ್ರ ಹಬ್ಬಗಳಾಗಿದ್ದು, ಪ್ರತೀ ಹಬ್ಬಗಳು ಅದರದ್ದೇ ಆದ ವಿಶೇಷ ಇತಿಹಾಸವನ್ನು ಹೊಂದಿರುತ್ತವೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖಾ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗುವುದು. 

5) ಸಾರ್ವಜನಿಕ ಉಪದ್ರವ ನೀಡುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾನೂನು  ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

ಮುಂದಿನ ಸುದ್ದಿ ಒದಿ

Leave a Comment