SHIVAMOGGA NEWS TODAY

ಶಿವಮೊಗ್ಗ: ಜನರ ಬ್ಯಾಂಕ್​​ ಖಾತೆಗಳನ್ನು ಪಡೆದು ಈ ಮೂವರ ಏನ್​​ ಮಾಡ್ತಿದ್ರು ಗೊತ್ತಾ?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಸೈಬರ್ ಕ್ರೈಂ ಜಾಲವನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಕಮಿಷನ್ ಆಮಿಷವೊಡ್ಡಿ ಸಾರ್ವಜನಿಕರ ಹೆಸರಿನಲ್ಲಿ ಮ್ಯೂಲ್ ಅಕೌಂಟ್‌ಗಳನ್ನು ತೆರೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

Shimogga Police ಘಟನೆ ವಿವರ

ಫೆ.09 2026  ರಂದು ವಿಲ್ಸನ್ ವಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿತ್ತು. ಆರೋಪಿ ಜಗದೀಶ್ ಎಂಬಾತ ಬ್ಯಾಂಕ್ ಖಾತೆ ತೆರೆದುಕೊಟ್ಟರೆ ಕಮಿಷನ್ ನೀಡುವುದಾಗಿ ನಂಬಿಸಿ ವಿಲ್ಸನ್ ಅವರ ಹೆಸರಿನಲ್ಲಿ ಖಾತೆ ಪಡೆದುಕೊಂಡಿದ್ದನು. ನಂತರ ವಿಲ್ಸನ್ ಅವರಂತೆ ನಟಿಸಿ, ಆ ಖಾತೆಯನ್ನು ಲಕ್ಷಾಂತರ ರೂಪಾಯಿ ವಂಚನೆಯ ಹಣ ವರ್ಗಾವಣೆಗೆ ಬಳಸಿಕೊಂಡಿದ್ದನು. ಈ ಸಂಬಂಧ ಐಟಿ ಆಕ್ಟ್ ಮತ್ತು ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು,

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖೀಲ್ ಬಿ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ವಿಶೇಷ ತಂಡವು ಆರೋಪಿಗಳನ್ನು ಪತ್ತೆಹಚ್ಚಿತು. ತನಿಖಾ ತಂಡವು ಶಿವಮೊಗ್ಗದ ಜಗದೀಶ್ ಆರ್. ಸಿ (43), ಚಿಕ್ಕಮಗಳೂರಿನ ಅರ್ಷಾದ್ (39) ಮತ್ತು ಶಿವಮೊಗ್ಗದ ಅನಂತ ಟಿ (34) ಎಂಬುವವರನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದೆ. 

ಆರೋಪಿಗಳ ಬಳಿ ವಿವಿಧ ಹೆಸರುಗಳಲ್ಲಿದ್ದ ಒಟ್ಟು 15 ಮ್ಯೂಲ್ ಅಕೌಂಟ್‌ಗಳು ಪತ್ತೆಯಾಗಿದ್ದು, ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352ಕ್ಕೂ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಹೊರಬಂದಿದೆ. ಈ ಜಾಲದ ಮೂಲಕ ಸುಮಾರು 82 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಯಾಗಿದ್ದು, ಆರೋಪಿಗಳು ಬಳಸುತ್ತಿದ್ದ 15 ಖಾತೆಗಳಲ್ಲೇ ಅಂದಾಜು 14.71 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ. ಸದ್ಯ ಆರೋಪಿಗಳಿಂದ 2 ಮೊಬೈಲ್, 11 ಎಟಿಎಂ ಕಾರ್ಡ್, 9 ಕ್ಯೂಆರ್ ಕೋಡ್ ಸ್ಕ್ಯಾನರ್ ಹಾಗೂ 15 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Shimogga Police Bust 82 Crore Cyber Fraud Racket

Shimogga Police Bust 82 Crore Cyber Fraud Racket
Shimogga Police Bust 82 Crore Cyber Fraud Racket
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.