ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಫೋಷಕರು ಹಣ ಕಟ್ಟುವುದು ಬಾಕಿ ಇದ್ದರೆ ಅಥವಾ ತಮ್ಮ ಆಡಳಿತಾತ್ಮಕ ಸಮಸ್ಯೆಯ ಕಾರಣಕ್ಕಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಖಾಸಗಿ ಶಾಲೆಗಳು ಟಿಸಿ ನೀಡುವುದಕ್ಕೆ ಸತಾಯಿಸುತ್ತವೆ.ಈ ಬಗ್ಗೆ ಹಲವಾರು ಕಂಪ್ಲೆಂಟ್ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದರಿಂದಲೇ ಸರ್ಕಾರ, ಟಿಸಿಗೆ ಸಂಬಂಧಿಸಿದಂತೆ ಸುತ್ತೊಲೆಯನ್ನೆ ಹೊರಡಿಸಿದೆ. ಪೋಷಕರು ತಮ್ಮ ಮಕ್ಕಳ ಟಿಸಿಯನ್ನುಕೇಳುವ ಸಂದರ್ಭದಲ್ಲಿ ಖಾಸಗಿ ದರ್ಬಾರ್ಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಮೇಲಾಗಿ ಪ್ರತಿಯೊಬ್ಬ ಪೋಷಕರು ಟಿಸಿ ವಿಚಾರದಲ್ಲಿ ಸರ್ಕಾರದ ಆದೇಶ ಇರುವುದುನ್ನ ಗಮನಿಸುವುದು ಉತ್ತಮ
ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು ಸ್ಟೇಷನ್ನಿಂದ ಬಂತು ಪ್ರಕಟಣೆ! ಸಾಗರದಲ್ಲಿ ಮತ್ತೊಂದು ಮಿಸ್ಸಿಂಗ್ ಕೇಸ್
ವರ್ಗಾವಣೆ ಪ್ರಮಾಣ ಪತ್ರ (Transfer Certificate – TC) ನೀಡುವಲ್ಲಿ ಕಾಲಹರಣ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಪಡಿಸುತ್ತಿರುವ ಗಂಭೀರ ಪ್ರಕರಣಗಳನ್ನು ಪರಿಗಣಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು.
ಸುತ್ತೋಲೆಯ ಪ್ರಕಾರ, ರಾಜ್ಯದ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವರ್ಗಾವಣೆ ಪತ್ರವನ್ನು ಸಕಾಲದಲ್ಲಿ ನೀಡಬೇಕು! ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ, ವರ್ಗಾವಣೆ ಪತ್ರ ವಿತರಣೆಗೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಪರಿಗಣಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಬಯಸಿದಲ್ಲಿ, ಶಾಲಾ ಮುಖ್ಯಸ್ಥರು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್ 5(1)ರ ಉಲ್ಲಂಘನೆಯಾಗದಂತೆ ಜಾಗೃತಿ ವಹಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕಡ್ಡಾಯವಾಗಿ ವರ್ಗಾವಣೆ ಪ್ರಮಾಣ ಪತ್ರವನ್ನು ವಿತರಿಸುವುದು ಶಾಲಾ ಮುಖ್ಯಸ್ಥರ ಪ್ರಥಮ ಕರ್ತವ್ಯವಾಗಿದೆ ಸ್ಪಷ್ಟಪಡಿಸಲಾಗಿದೆ.(Schools Must Issue TC within 15 Days)
20 ಸೆಕೆಂಡ್ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!
ಶಾಲಾ ಮುಖ್ಯಸ್ಥರು ನಿಗದಿತ ಸಮಯದೊಳಗೆ ಟಿಸಿ ನೀಡಲು ವಿಫಲರಾದಲ್ಲಿ, ಪೋಷಕರು ತಕ್ಷಣವೇ ಆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (Block Education Officer ) ಮನವಿ ಸಲ್ಲಿಸಬೇಕು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಡ ಮಾಡದೆ, ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೆ ಮನವಿಯನ್ನು ಇತ್ಯರ್ಥಪಡಿಸಲು ಒಂದು ವಾರಗಳ ಕಾಲಾವಕಾಶ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಈ ಕಾಲಾವಧಿಯಲ್ಲೂ ಸಹ ಟಿಸಿ ವಿತರಿಸಲು ಶಾಲೆಗಳು ವಿಫಲವಾದರೆ, ಸಂಬಂಧಪಟ್ಟ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಹ ಸೂಚಿಸಲಾಗಿದೆ. Schools Must Issue TC within 15 Days
ಶಿವಮೊಗ್ಗ : ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಾವು
ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 106(2)(ಬಿ)ರ ಅಡಿಯಲ್ಲಿ ಕ್ರಮವಹಿಸಲು ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ ನೀಡಲಾಗಿದೆ.
ಫೋಷಕರಿಗೆ ಈ ವಿಷಯ ತಿಳಿದುಕೊಳ್ಳುವುದು ಮಹತ್ವದ ಸಂಗತಿ! ಏಕೆಂದರೆ, ಪ್ರತಿಯೊಬ್ಬ ಪೋಷಕರು ಒಂದಲ್ಲ ಒಂದು ಸಂದರ್ಭದಲ್ಲಿ ಮಕ್ಕಳ ಶಾಲೆಯ ವಿಚಾರದಲ್ಲಿ ತಲೆಬಿಸಿಮಾಡಿಕೊಂಡಿರುತ್ತಾರೆ. ಹಾಗೊಂದು ವೇಳೆ ಟಿಸಿ ಸಮಸ್ಯೆಯಾದರೆ, ಆಯಾ ಶಾಲೆಗಳಿಗೆ ಸರ್ಕಾರ ಸುತ್ತೊಲೆಯ ಬಗ್ಗೆ ತಿಳಿಸಿ. ಇನ್ನಷ್ಟು ಸರ್ಕಾರಿ ಮಾಹಿತಿ ಅಗತ್ಯವಿದ್ದಲ್ಲಿ ಮಲೆನಾಡು ಟುಡೆಗೆ ತಿಳಿಸಿ ಮತ್ತು ಈ ಸುದ್ದಿಯನ್ನು ಇನ್ನಷ್ಟು ಪೋಷಕರಿಗೆ ಫಾರವರ್ಡ್ ಮಾಡಿ ಮಾಹಿತಿ ನೀಡಿ.
ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್ನಲ್ಲಿ ಶಿವಮೊಗ್ಗ ಕೋರ್ಟ್ನ ತೀರ್ಪು!
ಸರ್ಕಾರದ ಸುತ್ತೋಲೆಯ ಫೋಟೋ ಕಾಪಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!






