ಶಿವಮೊಗ್ಗ | 19-20ಕ್ಕೆ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನ! ಭಕ್ತ ಮಹಾಶಯರಿಗಾಗಿ ಈ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
holy Somnath Jyotirlinga

holy Somnath Jyotirlinga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಆರ್ಟ್ ಲಿವಿಂಗ್ ಜ್ಞಾನಕ್ಷೇತ್ರ ಮತ್ತು ಶ್ರೀರವಿಶಂಕರ್‌ವಿದ್ಯಾಮಂದಿರ ವತಿಯಿಂದ ಇದೇ ಜುಲೈ 19 ಮತ್ತು 20 ರಂದು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಏರ್ಪಡಿಸಲಾಗಿದೆ

ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ ಎಂದರೆ ಚಂದ್ರನು ಪತ್ರಿಷ್ಠಾಪಿಸಿದ್ದಾನೆ ಎಂದೇ ನಂಬಲಾಗುತ್ತದೆ. ಈ ಜ್ಯೋತಿರ್ಲಿಂಗದ ಸ್ಥಿರ ಪ್ರತಿಷ್ಠಾಪನೆಗೂ ಮೊದಲು ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ಈ ಸಂಬಂಧ ಜುಲೈ 19 ರಂದು ಬೆಳಗ್ಗೆ 9.30 ರಿಂದ 1.30 ಹಾಗೂ ಸಂಜೆ 4 ರಿಂದ 8ರ ವರೆಗೆ ನವುಲೆಯ ನವ ನಗರದಲ್ಲಿರುವ ಆರ್ಟ್ ಆಫ್ ಲಿವಿಂಗ್‌ನ ಜ್ಞಾನಕ್ಷೇತ್ರದಲ್ಲಿ ಹಾಗೆಯೇ 20 ರಂದು ಬೆಳಗ್ಗೆ 9.30 ರಿಂದ 1ರ ವರೆಗೆ ಜೆಎಚ್ ಪಟೇಲ್ ಬಡಾವಣೆಯಲ್ಲಿರುವ ಶ್ರೀ ರವಿಶಂಕರ ವಿದ್ಯಾಮಂದಿರಲ್ಲಿ ಹಾಗೂ ಭದ್ರಾವತಿಯ ಶ್ರೀ ಮಂಜುನಾಥ ಕಲ್ಯಾಣ ಮಂದಿರಲ್ಲಿ ಸಂಜೆ 4.30 ರಿಂದ 8.30 ರವರೆಗೆ ಪವಿತ್ರ ಮೂಲ ಜ್ಯೋತಿರ್ಲಿಂಗ ದರ್ಶನ ಮತ್ತು ರುದ್ರಪೂಜೆ ಹಾಗೂ ದಿವ್ಯ ಸತ್ತಂಗ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ರಾಜ್ಯ ಸಂಚಾಲಕ ಬಿ. ಮೂರ್ತಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor