ವಿವಿಧ ಪ್ರದೇಶಗಳಲ್ಲಿ ಇಂದು ಕರೆಂಟ್ ಇರಲ್ಲ : ಮೆಸ್ಕಾಂ ಪ್ರಕಟಣೆ

ಹಂಚಿಕೊಳ್ಳಿ
WhatsApp Facebook X Telegram
Power Outage Today symbolic image
Power Outage Today symbolic image

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮೇ 26ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಭದ್ರಾವತಿ ನಗರ ಹಾಗೂ ಗ್ರಾಮೀಣ ಭಾಗದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಮೆಸ್ಕಾಂ ಪ್ರಕಟಣೆ

ನಿರ್ವಹಣಾ ಕಾಮಗಾರಿಯ ಕಾರಣದಿಂದಾಗಿ ನಗರ ಪ್ರದೇಶಗಳಾದ ನ್ಯೂಟೌನ್, ನ್ಯೂ ಕಾಲೊನಿ, ವಿದ್ಯಾ ಮಂದಿರ, ಅಂಜನೇಯ ಆಗ್ರಹಾರ, ಬುಳ್ಳಾಪುರ, ಹುಡೋ ಕಾಲೊನಿ ಹಾಗೂ ಜನ್ನಾಪುರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಂಪೂರ್ಣ ಅಡಚಣೆಯಾಗಲಿದೆ. ಈ ಭಾಗದ ನಿವಾಸಿಗಳು ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಇಲಾಖೆ ತಿಳಿಸಿದೆ.

ಇದರ ಜೊತೆಗೆ ಭದ್ರಾವತಿ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲೂ ವಿದ್ಯುತ್ ಕಡಿತವಾಗಲಿದ್ದು, ಜೇಡಿಕಟ್ಟೆ, ಡೇರಿ ವೃತ್ತ, ಹೊನ್ನವಿಲೆ, ಮಜ್ಜಿಗೇನಹಳ್ಳಿ, ಕಲ್ಲಹಳ್ಳಿ, ಶಿವರಾಮನಗರ, ವಿಶ್ವೇಶ್ವರಯ್ಯ ನಗರ, ಜಯಂತಿ ಗ್ರಾಮ, ವೀರಾಪುರ, ಹುಲಿ ರಾಮನಕೊಪ್ಪ, ಹಾಗಲಮನೆ, ಸಂಕ್ಷಿಪುರ, ಸಿರಿಯೂರು, ಸಿರಿಯೂರು ತಾಂಡಾ, ಮತಿಘಟ್ಟ, ಹಾಕಿಕಟ್ಟೆ ಹಾಗೂ ಈ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor