ವಿವಿಧೆಡೆ ಸೆ.2ರಿಂದ 4ರವರೆಗೆ ವಿದ್ಯುತ್ ವ್ಯತ್ಯಯ : ಸಾರ್ವಜನಿಕರಿಗಾಗಿ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
Power Cut Alert Mescom power cut Mescom No Online Services for 2 days  power cut tomorrow shivamogga
Power Cut Alert Mescom power cut power cut tomorrow shivamogga

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಮೆಸ್ಕಾಂ ಉಪವಿಭಾಗದ ವ್ಯಾಪ್ತಿಯ ವಿದ್ಯುತ್ ಮಾರ್ಗಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಭದ್ರಾವತಿಯ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 2ರಿಂದ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ (Power Cut in Several Bhadravati Areas) ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. ಪೂರ್ಣ ಮಾಹಿತಿ ಕೆಳಗಿದೆ.

ಮೆಸ್ಕಾಂ ನೀಡಿರುವ ಮಾಹಿತಿಯಂತೆ ಗಮನಿಸುವುದಾದರೆ, ಸೆಪ್ಟೆಂಬರ್ 2ರಿಂದ 4ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಜಟ್ ಪಟ್ ನಗರ, ಖಲಂದರೀಯ ನಗರ, ಮೊಮಿನ್ ಮೊಹಲ್ಲಾ, ಅನ್ವರ್ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ .

ಮೇಲಾಗಿ ಬೊಮ್ಮನಕಟ್ಟೆ, ತಿಮ್ಮಾಪುರ, ಮೂಲೆಕಟ್ಟೆ, ಹೊಸ ಬುಳ್ಳಾಪುರ, ಹಳೇ ಬುಳ್ಳಾಪುರ, ಬೈಪಾಸ್ ರಸ್ತೆ, ಮಿಲಿಟರಿ ಕ್ಯಾಂಪ್, ಹುಡ್ಕೊ ಕಾಲೊನಿ, ನ್ಯೂ ಟೌನ್, ನ್ಯೂ ಕಾಲೊನಿ, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಗಣೇಶ ಕಾಲೊನಿ, ಜನ್ನಾಪುರ, ಕಿತ್ತೂರು ಚೆನ್ನಮ್ಮ ಬಡಾವಣೆ, ರಾಜಪ್ಪ ಲೇಔಟ್ ಮತ್ತು ಆನೆಕೊಪ್ಪ ಪಂಪ್‌ಹೌಸ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹಿರಿಯೂರು, ಅರಳಿಕೊಪ್ಪ, ರಬ್ಬರ್ ಕಾಡು, ಬಾಳೆಮಾರನಹಳ್ಳಿ, ಸುಲ್ತಾನ್ ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕ ಗೊಪ್ಪೇನಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor