SHIVAMOGGA NEWS TODAY

ಆಸ್ತಿ ಪಾಲು ಮಾಡಬೇಕು ಅಣ್ಣನನ್ನು ಹುಡುಕಿ ಕೊಡಿ : 43 ವರ್ಷಗಳ ಬಳಿಕ ಕಂಪ್ಲೆಂಟ್​ ಏನಿದು ಪ್ರಕರಣ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

police station ತೀರ್ಥಹಳ್ಳಿ: ತಾಲೂಕಿನ ನಿವಾಸಿಯೊಬ್ಬರು ತಮ್ಮ ಸಹೋದರ ಕಾಣೆಯಾಗಿ 43 ವರ್ಷಗಳ ನಂತರ ಆಸ್ತಿ ಹಂಚಿಕೆಗಾಗಿ ಅವರನ್ನು ಹುಡುಕಿ ಕೊಡಿ ಎಂದು  ತೀರ್ಥಹಳ್ಳಿ ತಾಲೂಕಿನ  ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ. 

police station  ಏನಿದು ಪ್ರಕರಣ

ದೂರುದಾರರಾದ ವ್ಯಕ್ತಿ ದೂರಿನಲ್ಲಿ ಅವರ ತಂದೆ-ತಾಯಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಹಿರಿಯ ಮಗ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ) 1982 ರಲ್ಲಿ ಚಿತ್ರದುರ್ಗದ ಹೊಳಲ್ಕೆರೆ ತಾಲೂಕು     ಒಂದರ ಅನಾಥ ಸೇವಾ ಆಶ್ರಮದ ಹಾಸ್ಟೆಲ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ದೂರುದಾರರು ಕೂಡ ಅದೇ ಸಮಯದಲ್ಲಿ ಅದೇ ಹಾಸ್ಟೆಲ್‌ನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದರು.

1982ರ ಜನವರಿ ತಿಂಗಳಲ್ಲಿ ಒಂದು ವಾರ ರಜೆ ಇದ್ದ ಕಾರಣ ಇಬ್ಬರೂ ಸಹೋದರರು ಮನೆಗೆ ಬಂದಿದ್ದರು. ಆದರೆ, ಜನವರಿ 14, 1982ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸಹೋದರ  ಕಾಲೇಜಿಗೆ ಹಿಂತಿರುಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟವರು ಮತ್ತೆಂದೂ ಹಿಂದಿರುಗಲಿಲ್ಲ. ಅವರು ಕಾಲೇಜನ್ನೂ ತಲುಪಲಿಲ್ಲ, ಹಾಸ್ಟೆಲ್‌ಗೂ ಹೋಗಲಿಲ್ಲ. ಆ ಸಮಯದಲ್ಲಿ ತಮ್ಮ ತಂದೆ-ತಾಯಿಗೆ ಕಾನೂನಿನ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲ. ಹಾಗಾಗಿ ಅಣ್ಣ ಕಾಣೆಯಾದ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಈಗ, ತಾಯಿಯ ಹೆಸರಿನಲ್ಲಿರುವ ಜಮೀನು ಹಂಚಿಕೆ ಮಾಡಿಕೊಳ್ಳಲು ಮತ್ತು ದಾಖಲೆಗಳನ್ನು ಸರಿಪಡಿಸಲು  ಸಹೋದರನ ಅವರ ಅವಶ್ಯಕತೆ ಇರುವುದರಿಂದ, 43 ವರ್ಷಗಳ ನಂತರ ದೂರು ನೀಡಲಾಗಿದೆ. 

ಕಾಣೆಯಾದ ತಮ್ಮ ಸಹೋದರನನ್ನು  ಪತ್ತೆ ಮಾಡಿಕೊಡಬೇಕು ಎಂದು ದೂರುದಾರರು ಪೊಲೀಸರನ್ನು ಕೋರಿದ್ದಾರೆ. ಈ ಕುರಿತು ತೀರ್ಥಹಳ್ಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.