Chikkamagaluru, malenadu today news : ಆಸ್ಪತ್ರೆಗೆ ಚಿಕಿತ್ಸೆಗೆ ಅಂತಾ ಬಂದ ರೋಗಿಯೊಬ್ಬ ನರ್ಸ್ವೊಬ್ಬರ ಮೊಬೈಲ್ನ್ನೆ ಕದ್ದು ಪರಾರಿಯಾದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕಿತ್ಸೆ ಪಡೆಯುವ ನೆಪದಲ್ಲಿ ಆಸ್ಪತ್ರೆಗೆ ಬಂದಿದ್ದ ಈ ವ್ಯಕ್ತಿ, ತನಗಾಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ ನರ್ಸ್‌ಗೆ ಇಂಜೆಕ್ಷನ್ ನೀಡುವಂತೆ ಕೇಳಿಕೊಂಡಿದ್ದಾನೆ. ನರ್ಸ್ ಔಷಧಿಯನ್ನು ತರಲು ಹೋದಾಗ, ಅಲ್ಲಿಯೇ ಟೇಬಲ್ ಮೇಲೆ ಇಟ್ಟಿದ್ದ ನರ್ಸ್ನ ಮೊಬೈಲನ್ನು ಕದ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ.ಈ ಸಂಬಂದ ಆಲ್ದೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

View this post on Instagram