ಗಿಳಾಲಗುಂಡಿಯಲ್ಲಿ ಈಗ ಕ್ಯಾನ್ಸರ್​ ರೋಗಿಗಳು ಪರದಾಡುವ ಹಾಗೆ ಇಲ್ಲ. ಇದಕ್ಕೆ ಕಾರಣ ಯಾರು ಗೊತ್ತಾ

Narayana Murthy’s ನಾಟಿ ವೈದ್ಯರನ್ನು ಅನುಮಾನದ ದೃಷ್ಟಿಯಿಂದ ನೋಡುವ ವೈದ್ಯಲೋಕಕ್ಕೆ  ಸವಾಲು ಒಡ್ಡಿದ ವೈದ್ಯ ನಾರಾಯಣ ಮೂರ್ತಿ  ಈಗ ನೆನಪು ಮಾತ್ರ. ಸರತಿ ಸಾಲಿನಲ್ಲಿ ಅಹೋರಾತ್ರಿ ನಿಂತು ಔಷಧಿ ಪಡೆಯುತ್ತಿದ್ದ ಕ್ಯಾನ್ಸರ್ ಪೀಡಿತ ರೋಗಿಗಳು ಈಗ ಪರದಾಡುವಂತ ಸ್ಥಿತಿಯಲ್ಲಿಲ್ಲ. ಹೌದು ಈಗ ನಾರಾಯಣ ಮೂರ್ತಿಯವರ ಕಾಯಕವನ್ನು ಪುತ್ರ ರಘು ಹಾಗು ಶುಭಾ ನಾರಾಯಣಮೂರ್ತಿ ಮುಂದುವರೆಸಿದ್ದಾರೆ. ವಿಶಾಲವಾದ ಜಾಗದಲ್ಲಿ ಈಗ ಔಷಧಿ ನೀಡಲಾಗುತ್ತಿದ್ದು, ರೋಗಿಗಳು ಕಾಯುವ ಪ್ರಮಯವೇ ಇಲ್ಲ. ಇದಕ್ಕೆ ಕಾರಣ ಶುಭಾ ನಾರಾಯಣಮೂರ್ತಿ ಯವರ ಶ್ರಮ. ಈ ಕುರಿತ ವರದಿ ಇಲ್ಲಿದೆ.

Narayana Murthy’s ಕ್ಯಾನ್ಸರ್ ರೋಗಿಗಳ ಪಾಲಿನ ದೇವರು. ಇವರತ್ತ ಸಾಗಿಬರುವ ರೋಗಿಗಳು ಸಾವಿರಾರು.

ಅಲೋಪತಿ ಕ್ಯಾನ್ಸರ್ ಟ್ರೀಟ್ ಮೆಂಟ್ ಗೆ ಪರ್ಯಾಯವಾಗಿ ನಾಟಿ ವೈದ್ಯ ಪದ್ಧತಿ ಮೂಲಕ ಔಷಧಿ ನೀಡುತ್ತಾ..ವೈದ್ಯಲೋಕ ನಿಬ್ಬೆರರಾಗುವಂತೆ ಮಾಡಿದ ಈ ವೈದ್ಯನ ಹೆಸರು ನರಸೀಪುರ ನಾರಾಯಣಮೂರ್ತಿ. ಇವರ ಸಾವಿನ ನಂತರ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಪರದಾಡುವಂತಾದಾಗ, ಮಕ್ಕಳು ತಂದೆಯ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಶಿವಮೊಗ್ಗ ಚೋರಡಿ ಸಮೀಪವಿರುವ ಗಿಳಾಲಗುಂಡಿಯಲ್ಲಿ ಈಗ ವೈದ್ಯ ನಾರಾಯಾಣ ಮೂರ್ತಿಯವರ ನೆನಪಿನನಲ್ಲಿ ಮಕ್ಕಳು ರೋಗಿಗಳಿಗೆ ಚಿಕಿತ್ಸೆ ಮದ್ದು ನೀಡುತ್ತಾ ಬಂದಿದ್ದಾರೆ. ಶಿವಮೊಗ್ಗದಿಂದ ಆಯನೂರು ಚೋರಡಿ ಗ್ರಾಮದ ನಂತರ ಸಿಗುವುದೇ ಗಿಳಾಲಗುಂಡಿ ಎಂಬ ಪುಟ್ಟ ಗ್ರಾಮ. ಈ ಗ್ರಾಮಕ್ಕೆ ಹೋಗಬೇಕಾದರೆ ಅನಂದಪುರಕ್ಕೆ ಹೋಗುವ ಪ್ರಮಯವೇ ಬರುವುದಿಲ್ಲ. ಶಿವಮೊಗ್ಗದಿಂದ ಬಸ್ ಹತ್ತಿದರೆ ಸೀದಾ ಬಸ್ ಗಿಳಾಲಗುಂಡಿ ಔಷಧಿ ನೀಡುವ ಮನೆ ಎದುರೇ ನಿಲ್ಲುತ್ತದೆ. ಈ ಹಿಂದೆ ವೈದ್ಯ ನಾರಾಯಣ ಮೂರ್ತಿಯವರಿದ್ದ ಕಾಲದಲ್ಲಿ ನರಸೀಪುರದ ಹಳ್ಳಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ರೋಗಿಗಳ ಹಿತದೃಷ್ಟಿಯಿಂದ ಗಿಳಾಲಗುಂಡಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಮಕ್ಕಳ ಜಮೀನು ಖರೀದಿಸಿ ಔಷಧಿ ಕೊಡುವ ಕಾಯಕ ಮುಂದುವರೆಸಿದ್ದಾರೆ. 

ಕ್ಯಾನ್ಸರ್ ರೋಗಿಗಳೇ ಹೆಚ್ಚು,

ನಾರಾಯಣ ಮೂರ್ತಿ ಬಳಿ ಬರುವವರಲ್ಲಿ ಬಹುತೇಕ ಮಂದಿ ಕ್ಯಾನ್ಸರ್ ರೋಗ ಪೀಡಿತರು.ಥ್ರೋಟ್ ಕ್ಯಾನ್ಸರ್,ಬ್ಲಡ್ ಕ್ಯಾನ್ಸರ್ (ಲ್ಯುಕೇಮಿಯಾ),ಅನ್ನನಾಳದ ಕ್ಯಾನ್ಸರ್,ಬ್ರೆಸ್ಟ್ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿ ಅರ್ಬುಜ ರೋಗದಿಂದ ಬಳಲುವ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ,ಸರಣಿ ರೂಪದಲ್ಲಿ ಚಿಕಿತ್ಸೆ ಪಡೆಯುತ್ತಾರೆ.ಇದಲ್ಲದೆ ಡೈಯಾಬಿಟಿಕ್,ಹೃದಯ ಸಂಬಂಧಿ ಕಾಯಿಲೆ.ಅಸ್ತಮ,ಅರ್ಥ್ರೈಟಿಸ್ ತೊಂದರೆ,ಗರ್ಭಕೋಶದ ತೊಂದರೆ,ಕಿಡ್ನಿಯಲ್ಲಿ ಕಲ್ಲು ಸೇರಿಕೊಂಡಿದ್ದರೆ ನಾರಾಯಣ ಮೂರ್ತಿ ಚೆಕ್ಕೆ ಮಿಶ್ರಣ ಔಷಧಿಯನ್ನು ನೀಡುತ್ತಿದ್ದರು..ರಾಜ್ಯ ದೇಶ ವಿದೇಶಗಳಿಂದ ಅಂದರೆ ಅಮೇರಿಕಾ,ಇಂಗ್ಲೇಂಡ್,ನಂತ ಪಾಶ್ಚಿಮಾತ್ಯ ರಾಷ್ಟ್ರಗಳಿಂದಲೂ ರೋಗಿಗಳು ಬಂದು ಕ್ಯಾನ್ಸರ್ ಮತ್ತು ಗರ್ಭಕೋಶದ ತೊಂದರೆ ಖಾಯಿಲೆಗೆ ಚಿಕಿತ್ಸೆ ಪಡೆದಿದ್ದಾರೆ.ಇವರಲ್ಲಿ ಚಿಕಿತ್ಸೆ ಪಡೆದವರಲ್ಲಿ ಶೇಕಡಾ 80 ರಷ್ಟು ಕ್ಯಾನ್ಸರ್ ರೋಗಿಗಳು ಗುಣಮುಖರಾಗಿದ್ದಾರೆ.

ಈಗ ರೋಗಿಗಳು ಪರದಾಡುವ ಸ್ಥಿತಿಯಿಲ್ಲ.

ಹಿಂದೆ ನರಸೀಪುರದ ಗ್ರಾಮದಲ್ಲಿ ಪ್ರತಿ ಗುರುವಾರ ಮತ್ತು ಭಾನುವಾರ ಬಂತೆದರೆ ಗ್ರಾಮಸ್ಥರಿಗೂ ಹೊರ ರೋಗಿಗಳಿಗೂ ಕಿರಿಕಿರಿಯಾಗುತ್ತಿತ್ತು. ಶೌಚಾಲಯದ ವ್ಯವಸ್ಥೆಗೂ ತೊಂದರೆಯಾಗುತ್ತಿತ್ತು ಆದರೆ ಈಗ ಅಂತಹ ಎಲ್ಲಾ ಸಮಸ್ಯೆಗಳಿಗೂ ಪುತ್ರಿ ಶುಭಾ ನಾರಾಯಣಮೂರ್ತಿ ತಿಲಾಂಜಲಿ ಇಟ್ಟಿದ್ದಾರೆ. ವಿಶಾಲವಾದ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದಾರೆ. 20 ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಎರಡು ಎಕರೆ ಜಾಗದಲ್ಲಿ ಕಾರು ಪಾರ್ಕಿಂಗ್ ವ್ಯವಸ್ಥೆ ಇದೆ. ಕೇವಲ ಒಂದು ಗಂಟೆಯಲ್ಲಿ ಮುನ್ನೂರೂ ರೋಗಿಗಳಿಗೆ ಚಿಕಿತ್ಸೆ ನೀಡುವಂತ ಟೋಕನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಗಿಡಮೂಲಕಿ ಔಷದಿಯ ಗುಣಮಟ್ಟದಲ್ಲಿ ಶುಭಾ ನರಸೀಪುರ ರಾಜಿನೇ ಮಾಡಿಕೊಳ್ಳುವುದಿಲ್ಲ. ಬೆಳಗ್ಗೆ ಐದು ಗಂಟೆಯಿಂದ ಪ್ರಾರಂಭವಾಗುವ ಔಷಧಿ ನೀಡುವ ಕಾಯಕಕ್ಕೆ ತಾವೇ ಖುದ್ದು ಮುಂದೆ ನಿಲ್ಲುತ್ತಾರೆ. 

ರೋಗಿಗಳಿಗೆ ಕಾಯುವ ಗೋಜಿಗೆ ಹೋಗುವ ಪ್ರಮೆಯವಿಲ್ಲದಂತೆ ಹೈಟೆಕ್ ಸ್ಪರ್ಷ 

ನೀಡಿದ್ದಾರೆ.ಅಹೋರಾತ್ರಿ ಔಷಧಿಗಾಗಿ ಮುಗಿಬೀಳುತ್ತಿದ್ದ ಜನರು ಈಗ ಅನಾಯಾಸವಾಗಿ ಔಷಧಿಯನ್ನು ಸಾಲಿನಲ್ಲಿ ನಿಂತು ಪಡೆಯಬಹುದಾದ ವ್ಯವಸ್ಥೆಗೆ ಶುಭ ನಾರಾಯಣಮೂರ್ತಿ ಮುನ್ನುಡಿ ಬರೆದಿದ್ದಾರೆ. ಸಹೋದರ ಔಷಧಿ ಕೊಡುವ ಕಾಯಕ ಮಾಡಿದರೆ, ಶುಭಾ ನಾರಾಯಣಮೂರ್ತಿ  ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇಲ್ಲಿನ ವ್ಯವಸ್ಥೆಗೆ ರೋಗಿಗಳು ಕೂಡ ಖುಷಿ ಪಡುತ್ತಾರೆ. ಪ್ಲೈಟ್ ನಲ್ಲಿ ಬಂದವರಿಗೆ ಅವರ ರಿಟರ್ನ್ ಟಿಕೇಟ್ ಬುಕ್ ಅದಾ ಅದೇ ದಿನವೇ ಪುನಃ ತೆರಳುವಂತ ತ್ವರಿತ ವ್ಯವಸ್ಥೆಯನ್ನು ಶುಭಾ ನಾರಾಯಣಮೂರ್ತಿ  ಮಾಡಿದ್ದಾರೆ. ತಂದೆ ನಾರಾಯಣ ಮೂರ್ತಿಯವರ ಹೆಸರಿನಲ್ಲಿ ನಕಲಿ ಔಷಧಿ ನೀಡುತ್ತಿದ್ದ ಜಾಲಕ್ಕೆ ಬ್ರೇಕ್ ಹಾಕಿದ್ದಾರೆ. ತಮ್ಮದೇ ಒಡೆತನದ ವೆಬ್ ಸೈಟ್ ಮಾಡಿ ಆನ್ ಲೈನ್ ನಲ್ಲಿಯೂ ಸರ್ವಿಸ್ ನೀಡುತ್ತಾ ಬಂದಿದ್ದಾರೆ. ಒಬ್ಬ ಮಹಿಳೆ ಸಾವಿರಾರು ಮಂದಿಯನ್ನು ಕೆಲವೇ ಗಂಟೆಗಳಲ್ಲಿ ಔಷಧಿ ಕೊಟ್ಟು ವಾಪಾಸ್ಸು ಕಳಿಸುವಂತ ವ್ಯವಸ್ಥೆ ಮಾಡಿದ್ದಾರೆಂದರೆ ಇದು ಹೆಮ್ಮೆಯ ಸಂಗತಿಯೇ ಸರಿ. ಇವರ ಸಾಧನೆಯನ್ನು ಮೆಚ್ಚಿ ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸುತ್ತಿದೆ.

ವೈದ್ಯ ಎನ್​ ಎಸ್​ ನಾರಾಯಣ ಮೂರ್ತಿ ಸೆಂಟರ್​ನ ಸಂಪೂರ್ಣ ವಿಳಾಸ ಹಾಗೂ ಪೋನ್​​ ನಂಬರ್ ಹೀಗಿದೆ

Vaidhya N S NarayanaMurthy Center. Gilalgundi Gilalgundi post, Shimogia District, karnataka state

Phone number 917411398335. Shimogia to sagar road. NH 69

Narayana Murthy’s Cancer Medicine Continues

Narayana Murthy's Cancer Medicine ಚಿಕಿತ್ಸೆಗಾಗಿ ಸಾಲಿನಲ್ಲಿ ನಿಂತಿರುವ ಜನ
Narayana Murthy’s Cancer Medicine ಚಿಕಿತ್ಸೆಗಾಗಿ ಸಾಲಿನಲ್ಲಿ ನಿಂತಿರುವ ಜನ
Narayana Murthy's Cancer Medicine ಚಿಕಿತ್ಸೆಗಾಗಿ ಸಾಲಿನಲ್ಲಿ ನಿಂತಿರುವ ಜನ
Narayana Murthy’s Cancer Medicine ಚಿಕಿತ್ಸೆಗಾಗಿ ಸಾಲಿನಲ್ಲಿ ನಿಂತಿರುವ ಜನ