ಅಧಿಕಾರಿಗಳ ಜೊತೆ ಸಂಸದ ರಾಘವೇಂದ್ರರ ಮಿಟಿಂಗ್​/ ಶಿವಮೊಗ್ಗದ ರೈಲ್ವೆ ಓವರ್​​ ಬ್ರಿಡ್ಜ್​ ಕಾಮಗಾರಿ ಸೇರಿ ಮೂರು ಮುಖ್ಯ ವಿಚಾರಕ್ಕೆ ಕೊಟ್ಟರು ಸೂಚನೆ/ ವಿವರ ಇಲ್ಲಿದೆ

This Article Written by / Malenadu Today / ಡಿಸೆಂಬರ್ 27, 2022

ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಅನುಕೂಲವಾಗುವ ಬದಲಿ ರಸ್ತೆ ಮಾರ್ಗವನ್ನು ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದ್ಧಾರೆ.
ಇವತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೇಲ್ವಕುಮಾರ್, ಜಿಲ್ಲಾಧಿಕಾರಿ ಡಾ ಸೆಲ್ವಮಣಿ ಅವರು, ರಕ್ಷಣಾಧಿಕಾರಿ ಮಿಥುನ್ ಕುಮಾರ್, ರೈಲ್ವೇ ಅಧಿಕಾರಿ ಶ್ರೀಧರ ಮೂರ್ತಿ, ಬಸವರಾಜ್ ರಾಜಕುಮಾರ್ , ನ್ಯಾಷನಲ್ ಹೈವೆಯ ಪೀರ್ ಪಾಷಾ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಚಿದಾನಂದ ವಟಾರೆ, ಕಮಿಷನರ್ ಮಾಯಣ್ಣ ಗೌಡ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದ ರಾಘವೇಂದ್ರ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ಹೊಸ ವರ್ಷಾಚರಣೆ ರಜಾ ದಿನಗಳು ಹೆಚ್ಚಿರುವುದರಿಂದ ಪ್ರವಾಸಿಗರು ಶಿವಮೊಗ್ಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆಯಾಗಲಿದೆ ಜೊತೆಗೆ ನ್ಯಾಷನಲ್ ಹೈವೇ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದರಿಂದ ಅವುಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ಧಾರೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

#ShimogaNews,#ShivamoggaNews,HosanagarA Today News,kA,Male Nadu Today News. Com,Malnad Live,Malnad News Today,Malnad Report,Malnad Stories,News Sagar,Sagar Today News,Shikaripura Today News,Shimoga District Report,Shimoga Local News,Shimoga Times Today,Shimoga Today Details,shimoga today news,Shimoga Today Report,SHIVAMOGGA,shivamogga latest news,shivamogga live,Shivamogga Today Live News,shivamogga today news,Shivamogga Today Video,Soraba Today News,Thirthahalli Today News

ಮುಂದಿನ ಸುದ್ದಿ ಒದಿ

Leave a Comment