metro station : ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಹಚ್ಚಿಕೊಂಡು ಓಡಾಡಿದ ವ್ಯಕ್ತಿ | ಭಯಾನಕ ವಿಡಿಯೋ ವೈರಲ್
ಬ್ರೆಜಿಲ್ನ ಸಾವೊ ಪೌಲೋನ ಸಾವೋ ಬೆಂಟೋ ಮೆಟ್ರೋ ನಿಲ್ದಾಣದಲ್ಲಿ 74 ವರ್ಷದ ವ್ಯಕ್ತಿಯೊಬ್ಬರು ತನಗೆ ತಾನೇ ಬೆಂಕಿ ಹಚ್ಚಿಕೊಂಡು ಒಡಾಡುತ್ತಿರುವ ಘಟನೆ ನಡೆದಿದೆ. ಸದ್ಯ ಈ ಆಘಾತಕಾರಿ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

🇧🇷 Brasil 🇧🇷
Um homem pega fogo no próprio corpo na estação São Bento, metro de São Paulo.
Funcionários usaram cinco extintores para apagar o fogo.
Um reflexo da sociedade, um reflexo de que o Lula o está a fazer muito bem…
pic.twitter.com/VZlZy7daYD— Cianurosex (@cianurosex) May 30, 2025
metro station : ವೀಡಿಯೊ ದಲ್ಲಿರುವಂತೆ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಮೆಟ್ರೋ ನಿಲ್ದಾಣದಲ್ಲಿ ನೋವಿನಿಂದ ಓಡಾಡುವುದನ್ನು ನೋಡಬಹುದು. ನಂತರ ಸ್ಥಳೀಯರು ಮತ್ತು ಮೆಟ್ರೋ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ವ್ಯಕ್ತಿಯ ಈ ರೀತಿ ಬೆಂಕಿ ಹಚ್ಚಿಕೊಳ್ಳಲು ಕಾರಣವೇನು ಎಂಬುದು ನಿಖರ ಮಾಹಿತಿ ತಿಳಿದಿಲ್ಲ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಘಟನೆ ನಂತರ ವ್ಯಕ್ತಿಯು ಬದುಕಿದ್ದಾನೆಯೋ ಅಥವಾ ಸುಟ್ಟು ಮರಣ ಹೊಂದಿದ್ದಾನೆಯೋ ಎಂಬುದು ತಿಳಿದಿಲ್ಲ.
