ಕಾಂತಾರ 01 ರ ಹೊಸ ಕ್ಯಾರೆಕ್ಟರ್​ ರಿವೀಲ್​ : ಕುಲಶೇಖರ ಪಾತ್ರದ ನಟ ಯಾರು ಗೊತ್ತಾ.?

This Article Written by / Prathapa thirthahalli / ಆಗಷ್ಟ್ 19, 2025

Kanthara character

Kanthara character : ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಇದರ ಮಧ್ಯೆ ಚಿತ್ರತಂಡವು ಪ್ರಮುಖ ಪಾತ್ರಗಳನ್ನು ಒಂದೊಂದಾಗಿ ಬಹಿರಂಗಪಡಿಸುತ್ತಿದೆ. ಇತ್ತೀಚೆಗೆ ‘ಕನಕವತಿ’ ಪಾತ್ರವನ್ನು ಪರಿಚಯಿಸಿದ್ದ ಚಿತ್ರತಂಡ, ಈಗ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಅವರ ಪಾತ್ರವನ್ನು ರಿವೀಲ್ ಮಾಡಿದೆ.

ಹೌದು ಚಿತ್ರತಂಡ ಈಗ ರಿಲೀಸ್​ ಆಗಿರುವ ಪೋಸ್ಟರ್​ನಲ್ಲಿ  ಗುಲ್ಶನ್ ದೇವಯ್ಯ ‘ಕುಲಶೇಖರ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಬೆಂಗಳೂರಿನವರಾದ ಗುಲ್ಶನ್, ಈ ಹಿಂದೆ ‘ಸೈತಾನ್’ ಹಂಟರ್’ ಮತ್ತು ‘ಕಮಾಂಡೋ 3’ ಸೇರಿದಂತೆ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ಕಾಂತಾರ ಚಾಪ್ಟರ್ 1’ ಮೂಲಕ ಸ್ಯಾಂಡಲ್‌ವುಡ್​ಗೆ ಪ್ರವೇಶಿಸುತ್ತಿದ್ದಾರೆ.

 ಗುಲ್ಶನ್ ದೇವಯ್ಯ
ಗುಲ್ಶನ್ ದೇವಯ್ಯ

ಪೋಸ್ಟರ್​ನಲ್ಲಿ ಗುಲ್ಶನ್ ದೇವಯ್ಯ ಅವರ ರಾಜನ ವೇಷಭೂಷಣ ಗಮನ ಸೆಳೆಯುತ್ತಿದೆ. ಇದು ಒಂದು ಸಂಸ್ಥಾನದ ರಾಜನ ಪಾತ್ರವಿರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ ಚಿತ್ರತಂಡವು ಈ ಸಿನಿಮಾ ಕದಂಬರ ಕಾಲದ ಕಥೆಯನ್ನು ಆಧರಿಸಿದೆ ಎಂದು ಹೇಳಿತ್ತು. ರುಕ್ಮಿಣಿ ವಸಂತ್ ಅವರ ‘ಕನಕವತಿ’ ಪಾತ್ರವನ್ನೂ ರಾಣಿಯಂತೆ ಪರಿಚಯಿಸಲಾಗಿತ್ತು. ಇದೀಗ ‘ಕುಲಶೇಖರ’ನ ಪಾತ್ರವನ್ನೂ ರಾಜನಾಗಿ ತೋರಿಸಿರುವುದು ಕುತೂಹಲ ಮೂಡಿಸಿದೆ.

‘ಕಾಂತಾರ ಚಾಪ್ಟರ್ 1’ ಅಕ್ಟೋಬರ್ 2ರಂದು ವಿಶ್ವಾದ್ಯಂತ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Kanthara character 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment