ಕಾಂತಾರ ಚಿತ್ರದ ಪ್ರಸಿದ್ಧ ಕೋಣ ಅಪ್ಪು ಇನ್ನಿಲ್ಲ

Kantara kambala : ಕಾಂತಾರ ಚಿತ್ರದ ಪ್ರಸಿದ್ಧ ಕೋಣ ‘ಅಪ್ಪು’ ಇನ್ನಿಲ್ಲ

ಕಾಂತಾರ ಚಿತ್ರದ ಕಂಬಳದಲ್ಲಿ ರಿಷಬ್​ ಶೆಟ್ಟಿ ಓಡಿಸಿದ್ದ ಎರಡು ಕೋಣಗಳಲ್ಲಿ ಅಪ್ಪು ಎಂಬ ಒಂದು ಕೋಣ ಇಂದು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದೆ.

ಕಾಂತಾರ ಚಿತ್ರವು ಬಿಡುಗಡೆಯಾದ ನಂತರ, ಸಿನಿಮಾದ ಕಂಬಳ ದೃಶ್ಯಗಳು ಮತ್ತು ಅದರಲ್ಲಿ ಭಾಗಿಯಾಗಿದ್ದ ಕೋಣಗಳು ಸಹ ಹೆಚ್ಚು ಗಮನ ಸೆಳೆದಿದ್ದವು. ರಿಷಬ್​ ಶೆಟ್ಟಿ ಸಹ ಚಿತ್ರೀಕರಣಕ್ಕೆಂದು  ಈ ಕೋಣಗಳನ್ನು ಓಡಿಸಲು ಕಂಬಳ ಓಡಿಸುವ ತರಬೇತಿಯನ್ನು ಸಹ ಪಡೆದಿದ್ದರು. ಅಪ್ಪು ಮತ್ತು ಕಾಲಾ ಎಂಬ ಹೆಸರಿನ ಈ ಎರಡು ಕೋಣಗಳು ಹಲವು ಕಂಬಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿಗಳನ್ನು ಗಳಿಸಿದ್ದವು.

ಬೈಂದೂರಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಈ ಕೋಣಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಿದ್ದರು. ಈಗ ಅಪ್ಪು ನಿಧನದಿಂದ ಅವರು ಮತ್ತು ಕಂಬಳ ಪ್ರಿಯರು ಕಂಬಳ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

Kantara kambala
Kantara kambala

 

Leave a Comment