Rasi Bhavishya Details /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವಾಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು ಫಾಲ್ಗುಣ ಮಾಸದ ಇಂದಿನ ಪಂಚಾಂಗದ ಪ್ರಕಾರ, ಶುಕ್ಲ ಪಕ್ಷದ ತದಿಗೆ ತಿಥಿಯು ಮಧ್ಯಾಹ್ನ 3.38 ರವರೆಗೆ ಇರಲಿದ್ದು, ತದನಂತರ ಚೌತಿ ಆರಂಭವಾಗಲಿದೆ. ರಾತ್ರಿ 9.20 ರವರೆಗೆ ಉತ್ತರಾಭಾದ್ರ ನಕ್ಷತ್ರವಿದ್ದು, ಆ ಬಳಿಕ ರೇವತಿ ನಕ್ಷತ್ರ ಕೂಡಿಬರಲಿದೆ. ಸಂಜೆ 4.31 ರಿಂದ 6.06 ರವರೆಗೆ ಅಮೃತ ಘಳಿಗೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ರಾಹುಕಾಲವಿ, ಮಧ್ಯಾಹ್ನ 3.00 ರಿಂದ 4.30 ರವರೆಗೆ ಯಮಗಂಡ ಕಾಲವಿರಲಿದೆ.

ಇಂದಿನ ರಾಶಿಫಲ/Rasi Bhavishya Details
ಮೇಷ / ಅಂದುಕೊಂಡ ಕೆಲಸ ನಡೆಯಲಿದೆ. ಕೆಲವೊಂದು ವಿಷಯ ಮುಂದೂಡಲ್ಪಡುವ ಸಾಧ್ಯತೆಯಿದೆ. ಭಿನ್ನಾಭಿಪ್ರಾಯ , ಅನಗತ್ಯ ಖರ್ಚು. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ, ವ್ಯವಹಾರದಲ್ಲಿ ಒತ್ತಡದ ವಾತಾವರಣ. ವೃಷಭ /ಮಾತುಕತೆ ಯಶಸ್ವಿಯಾಗಲಿದ್ದು, ಅನಿರೀಕ್ಷಿತ ಧನಲಾಭ. ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗಿಗಳಿಗೆ ವೇತನ ಸಂಬಂಧಿ ಶುಭಸುದ್ದಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು
ಮಿಥುನ / ಹೊಸ ವ್ಯಕ್ತಿಗಳ ಪರಿಚಯ, ಶುಭ ಸುದ್ದಿ. ಆರ್ಥಿಕವಾಗಿ ಪ್ರಗತಿ ಹಾಗೂ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಕೈಗೊಂಡ ಕೆಲಸ ಸುಗಮವಾಗಿ ನೆರವೇರಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಕರ್ಕಾಟಕ / ಪ್ರಯಾಣದಲ್ಲಿ ಕೆಲವು ಅಡೆತಡೆ, ನಿಗದಿತ ಕೆಲಸ ಮುಂದೂಡುವ ಪರಿಸ್ಥಿತಿ. ವ್ಯಾಪಾರದಲ್ಲಿ ಕೊಂಚ ಹಿನ್ನಡೆ, ಶ್ರಮಕ್ಕೆ ತಕ್ಕ ಪ್ರತಿಫಲ. ನಿರೀಕ್ಷಿಸದ ಖರ್ಚು, ಉದ್ಯೋಗಿಗಳಿಗೆ ಜವಾಬ್ದಾರಿ ಹೆಚ್ಚಾಗಲಿವೆ ಮತ್ತು ವ್ಯಾಪಾರದಲ್ಲಿ ಸವಾಲು ಎದುರಾಗಲಿವೆ.
ಸಿಂಹ / ಆಸ್ತಿ ವಿವಾದ, ಕೆಲಸ ವಿಳಂಬ. ಅತಿಯಾದ ಶ್ರಮ, ವ್ಯಾಪಾರದಲ್ಲಿ ಸಾಮಾನ್ಯ ದಿನ. ಉದ್ಯೋಗಿಗಳಿಗೆ ಕೆಲಸದ ಒತ್ತಡ.

ಕನ್ಯಾ/ ಸಮಾಜದಲ್ಲಿ ಪ್ರಭಾವ ಮತ್ತು ಗೌರವ ಹೆಚ್ಚಾಗಲಿದ್ದು, ಆಪ್ತರೊಂದಿಗೆ ಬಾಂಧವ್ಯ ವೃದ್. ಬೆಲೆಬಾಳುವ ವಸ್ತು ಖರೀದಿ, ವ್ಯಾಪಾರದಲ್ಲಿ ಗಮನಾರ್ಹ ಪ್ರಗತಿ. ದೈವ ದರ್ಶನ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಿಸುವಿರಿ.
ತುಲಾ / ಬಾಕಿ ಹಣ ಇಂದು ಕೈಸೇರಲಿದೆ. ಹಳೆಯ ನೆನಪು ಮರುಕಳಿಸಲಿದ್ದು, ಪ್ರಮುಖ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ವಿವಾಹ ಪ್ರಯತ್ನಗಳಿಗೆ ಫಲ ಸಿಗಲಿದ್ದು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಗುರಿಗಳನ್ನು ಯಶಸ್ವಿಯಾಗಿ ತಲುಪುವಿರಿ.
ವೃಶ್ಚಿಕ / ಕೆಲಸಗಳಲ್ಲಿ ವಿಘ್ನ ಎದುರಿಸಬೇಕಾಗಬಹುದು ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಸಾಲಕ್ಕಾಗಿ ಪ್ರಯತ್ನ, ಉದ್ಯೋಗಸ್ಥರಿಗೆ ಒತ್ತಡ. ಅನಿರೀಕ್ಷಿತ ಪ್ರಯಾಣ.
ಧನುಸ್ಸು / ಕೆಲಸ ಮುಂದೂಡಲ್ಪಡಲಿವೆ. ಶ್ರಮ ಹೆಚ್ಚಾಗಲಿದ್ದು, ವ್ಯಾಪಾರದಲ್ಲಿ ಅಂದುಕೊಂಡ ಮಟ್ಟದ ಲಾಭ ಸಿಗದಿರಬಹುದು, ಕುಟುಂಬದ ಸದಸ್ಯರೊಂದಿಗೆ ವಾಗ್ವಾದ, ದಿಢೀರ್ ಪ್ರಯಾಣ. ಆದಾಯಕ್ಕಿಂತ ಖರ್ಚು ಜಾಸ್ತಿ.
ಮಕರ / ಹೊಸದಾಗಿ ಆರಂಭಿಸಿದ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವರು. ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗ. ಶುಭ ಕಾರ್ಯಗಳಿಗೆ ಆಹ್ವಾನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಯಶಸ್ಸು ಗಳಿಸುವಿರಿ.

ಕುಂಭ / ಸಣ್ಣಪುಟ್ಟ ಕಿರಿಕಿರಿ, ಹಣಕಾಸಿನ ನಷ್ಟ. ದೂರದ ಊರುಗಳಿಗೆ ಪ್ರಯಾಣ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಖರ್ಚು, ಶ್ರಮ ತಪ್ಪಿದ್ದಲ್ಲ.
ಮೀನ / ಒತ್ತಡಗಳಿಂದ ಮುಕ್ತರಾಗಲಿದ್ದಾರೆ. ದಿಢೀರ್ ಧನಲಾಭ, ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸಂಭ್ರಮಿಸುವಿರಿ. ಸಂಪರ್ಕ ವಲಯ ವಿಸ್ತಾರವಾಗಲಿದ್ದು, ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಎದುರಾಗಿದ್ದ ಅಡೆತಡೆ ನಿವಾರಣೆಯಾಗಲಿವೆ.
ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
