KARNATAKA NEWS/ ONLINE / Malenadu today/ May 10, 2023 GOOGLE NEWS
ಶಿವಮೊಗ್ಗ/ ವಿಧಾನಸಭಾ ಚುನಾವಣೆಯ ಮತದಾನದ ವೇಳೇ ಕೆಲವೊಂದು ಘಟನೆಗಳು ಸಹ ನಡೆದಿವೆ. ಪೂರಕವಾಗಿ ಹೇಳುವುದಾದರೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮತಗಟ್ಟೆಯೊಂದಕ್ಕೆ ಬಂದು ವರನೊಬ್ಬ ಮತ ಚಲಾಯಿಸಿದ್ಧಾರೆ.
ಇಲ್ಲಿನ ಶಿವಪ್ಪನಗರ ಬಡಾವಣೆಯ ನಾರಾಯಣ್ ಅವರ ಪುತ್ರ ವಿನೋದ್ ಕುಮಾರ್ ರವರು ಮದುವೆ ಮಂಟಪಕ್ಕೆ ಹೋಗುವುದಕ್ಕೂ ಮೊದಲು ಬಂದು ಮತ ಚಲಾಯಿಸಿದ್ದಾರೆ. ವಿನೋದ್ ಅವರ ವಿವಾಹ ರಿಪ್ಪನ್ ಪೇಟೆಯಲ್ಲಿ ಪಲ್ಲವಿ ಎಂಬವರೊಂದಿಗೆ ಇಂದು ನಿಶ್ಚಯವಾಗಿತ್ತು. ಚುನಾವಣೆಯ ದಿನಾಂಕ ನಿಗದಿಗೂ ಮುನ್ನವೇ ವಿವಾಹದ ದಿನಾಂಕ ನಿಶ್ಚಯವಾಗಿತ್ತು.
ಮದುವೆಯ ದಿನವೇ ಚುನಾವಣೆ ಎಂದು ತಿಳಿದು ಆರಂಭದಲ್ಲಿ ಬೇಸರವಾಗಿತ್ತು. ಆದರೆ ನಾನು ನನ್ನ ಕುಟುಂಬದ ಎಲ್ಲಾ ಸದಸ್ಯರು ಬೆಳಗ್ಗೆ ಮತ ಚಲಾವಣೆ ಮಾಡಿ ಮದುವೆಗೆ ಹೊರಟಿದ್ದೇವೆ. ನಮ್ಮ ಹಕ್ಕನ್ನು ನಾವು ಮರೆಯಬಾರದು ಎಂದು ವಿನೋದ್ ತಿಳಿಸಿದ್ದಾರೆ
ತೀರ್ಥಹಳ್ಳಿಯಲ್ಲಿ ಕೈಕೊಟ್ಟ ಮತಯಂತ್ರ
ಇನ್ನೂ ಇತ್ತ ತೀರ್ಥಹಳ್ಳಿಯ ಮತಗಟ್ಟೆ ಸಂಖ್ಯೆ 143 ರಲ್ಲಿ ಮತಯಂತ್ರ ಕೈಕೊಟ್ಟಿರುವ ಬಗ್ಗೆ ವರದಿಯಾಗಿದೆ. ತಾಂತ್ರಿಕ ದೋಷದಿಂದ ಸುಮಾರು ಒಂದು ಗಂಟೆ ಕಾಲ ಮತದಾನ ನಡೆದಿರಲಿಲ್ಲ. ಹೋದಲ ಗ್ರಾಮದಲ್ಲಿರುವ ಮತಗಟ್ಟೆಯಲ್ಲಿ ತೊಂದರೆ ಬಗ್ಗೆ ಅಧಿಕಾರಿಗಳು ಗಮನಿಸಿದರೆ, ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.
Karnataka election / ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಮತದಾನವಾಗಿದೆ! ಯಾವ್ಯಾ ವ ಕ್ಷೇತ್ರದಲ್ಲಿ ಆದ ಶೇಕಡಾವಾರು ಮತಗಳೆಷ್ಟು? 11 ಗಂಟೆಗೆ ಲಭ್ಯವಾದ ಅಂಕಿ ಅಂಶ ಇಲ್ಲಿದೆ
ಶಿವಮೊಗ್ಗ ಜಿಲ್ಲೆಯಲ್ಲಿ ಸುಗಮವಾಗಿ ಸಾಗುತ್ತಿದೆ. ಬಿಎಸ್ ಯಡಿಯೂರಪ್ಪನವರ ಮೊಮ್ಮಗ ತಮ್ಮ ಮೊದಲ ವೋಟನ್ನು ಚಲಾಯಿಸಿದ್ದಾರೆ. ಈ ಬಗ್ಗೆ ತಮ್ಮ ಅನುಭವನ್ನು ಹಂಚಿಕೊಂಡ ಅವರು, ಮೊದಲ ಮತದಾನ ಖುಷಿ ಕೊಡುತ್ತಿದೆ ಎಂದಿದ್ಧಾರೆ.
ಶಿಕಾರಿಪುರದಲ್ಲಿ ಬಿಎಸ್ ವೈ ಹಾಗೂ ಅವರ ಕುಟುಂಬಸ್ಥರು, ಎದುರಾಳಿ ಅಭ್ಯರ್ಥಿ ನಾಗರಾಜ್ ಗೌಡ, ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಸೇರಿದಂತೆ ಹಲವರು ಮತ ಚಲಾಯಿಸಿದ್ದಾರೆ.
11 ಗಂಟೆಗೆ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ ಶಿವಮೊಗ್ಗದಲ್ಲಿ ಶೇಕಡಾ 22.75 ರಷ್ಟು ಮತದಾನವಾಗಿದೆ. ಸಾಗರದಲ್ಲಿ ಅತಿಹೆಚ್ಚು, 26.66% ಮತದಾನವಾಗಿದೆ. ಭದ್ರಾವತಿಯಲ್ಲಿ 21.92% ಶಿಕಾರಿಪುರದಲ್ಲಿ 22.01, ಶಿವಮೊಗ್ಗದಲ್ಲಿ 23.62 ರಷ್ಟು ಮತದಾನವಾಗಿದೆ. ಇನ್ನೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 23.49 , ಸೊರಬದಲ್ಲಿ 21.00 ,ತೀರ್ಥಹಳ್ಳಿಯಲ್ಲಿ 20.00 ರಷ್ಟು ಮತದಾನವಾಗಿದೆ.
Read/ Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Malenadutoday.com Social media