ಮಹಾರಾಜ ಶಿವಮೊಗ್ಗ ಯೋಧಾಸ್​ಗೆ ಅದ್ಧೂರಿ ಸ್ವಾಗತ! ವಿಜಯೋತ್ಸವದ ಸುದ್ದಿ!

ಹಂಚಿಕೊಳ್ಳಿ
WhatsApp Facebook X Telegram
Shivamogga Yodhas

Shivamogga Yodhas ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ KSCA ಟಿ20–2026ರ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡವು ರೋಚಕ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಶಿವಮೊಗ್ಗ ವಲಯ ವತಿಯಿಂದ ಅದ್ದೂರಿ ವಿಜಯೋತ್ಸವ ರ್ಯಾಲಿ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಪ್​ ಗೆದ್ದ ತಂಢವನ್ನು ಶಿವಮೊಗ್ಗದ ಬೆಕ್ಕಿನಕಲ್ಮಠದಿಂದ KSCA ಕ್ರೀಡಾಂಗಣದವರೆಗೆ ನಡೆದ ವಿಜಯೋತ್ಸವ ಮೆರವಣಿಗೆ ಮೂಲಕ ಕರೆತರಲಾಯಿತು. ಇದಕ್ಕೂ ಮೊದಲು ವಿಜೇತ ತಂಡಕ್ಕೆ ವಿಧಾನ ಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಹಾಗೂ KSCA ಶಿವಮೊಗ್ಗ ವಲಯ ಸಂಚಾಲಕರಾದ ಡಿ. ಎಸ್. ಅರುಣ್ ಅವರು ಆತ್ಮೀಯ ಸ್ವಾಗತ ಕೋರಿದರು. ಬಳಿಕ ಶಿವಮೊಗ್ಗ ಯೋಧಾಸ್ ತಂಡದ ಆಟಗಾರರು, ತರಬೇತುದಾರರು ಹಾಗೂ ತಂಡದ ಸದಸ್ಯರನ್ನು KSCA ಕ್ರೀಡಾಂಗಣದಲ್ಲಿ ಶಿವಮೊಗ್ಗ ವಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಭಾ.ಆ.ಸೇ., ಶಿವಮೊಗ್ಗ ಯೋಧಾಸ್ ತಂಡದ ಮಾಲೀಕರಾದ ಮಿಥುನ್, ಸೂಡ ಅಧ್ಯಕ್ಷರಾದ ಸುಂದರೇಶ್, ವಿನೋಬನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಸಂತೋಷ್ ಕುಮಾರ್, ಕ್ರೀಡಾಪಟುಗಳು, ಶಿವಮೊಗ್ಗ ಯೋಧಾಸ್ ತಂಡದ ಆಟಗಾರರು, ಕ್ರಿಕೆಟ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ, ಇತ್ತೀಚೆಗೆ ನಿಧನರಾದ ರಣಜಿ ಕ್ರಿಕೆಟ್ ಆಟಗಾರ ಹಾಗೂ ಶಿವಮೊಗ್ಗದ ಹೆಮ್ಮೆಯ ಪ್ರತಿಭೆ ಅಕ್ಷಯ್ ಅವರ ಕುಟುಂಬಕ್ಕೆ ಶಿವಮೊಗ್ಗ ಯೋಧಾಸ್ ತಂಡದ ಮಾಲೀಕರಾದ ಮಿಥುನ್ ಅವರು ₹5 ಲಕ್ಷಗಳ ಆರ್ಥಿಕ ನೆರವಿನ ಚೆಕ್ ಅನ್ನು ಹಸ್ತಾಂತರಿಸಿದರು. ಅಕ್ಷಯ್ ಅವರ ಕ್ರಿಕೆಟ್ ಸಾಧನೆಯನ್ನು ಸ್ಮರಿಸಿ, ಅವರ ಕುಟುಂಬದೊಂದಿಗೆ ಎಲ್ಲರೂ ತಮ್ಮ ಸಂತಾಪವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ KSCA ಶಿವಮೊಗ್ಗ ವಲಯ ಅಧ್ಯಕ್ಷರಾದ ನಾಗೇಂದ್ರ ಪಂಡಿತ್, ಮಾಜಿ ವಲಯ ಸಂಚಾಲಕರಾದ ಸದಾನಂದ್, ಡಿ.ಆರ್. ನಾಗರಾಜ್ ಹಾಗೂ ರಾಜೇಂದ್ರ ಕಾಮತ್, ಸುಬ್ರಮಣ್ಯ,ಸುಕುಮಾರ್ ಪಟೇಲ್, ಐಡಿಯಲ್ ಗೋಪಿ, ಅನಿಲ್ ಉತ್ತಿ,ಯಶವಂತ್, ಸಂಜಯ್ ಹಾಗೂ ಇತರರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor