ಇಂದಿನಿಂದ ಶಿವಮೊಗ್ಗ ನಗರದಲ್ಲಿ ಎರಡು ದಿನ ಶ್ರಾವಣ ಸಂಭ್ರಮ–2026

ಹಂಚಿಕೊಳ್ಳಿ
WhatsApp Facebook X Telegram
httpsmalenadutoday.comwp-contentuploads202609Malenadutoday-image-shivamogga-1.webp
httpsmalenadutoday.comwp-contentuploads202609Malenadutoday-image-shivamogga-1.webp

Eagle Eye Enterprises ವತಿಯಿಂದ ಇಂದಿನಿಂದ ಅಂದರೆ ಸೆಪ್ಟೆಂಬರ್ 5 ಮತ್ತು 6ರಂದು ಶಿವಮೊಗ್ಗದ ಗೋಪಾಳದ ಗುಡ್‌ಲಕ್ ಸರ್ಕಲ್ ಸಮೀಪದ ಶ್ರೀ ಯೋಗಿ ನಾರಾಯಣ ಬಲಿಜ ಸಮುದಾಯ ಭವನದಲ್ಲಿ ‘ಶ್ರಾವಣ ಸಂಭ್ರಮ–2026’ ಹೆಸರಿನಲ್ಲಿ (Mega Expo in Shivamogga) ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು Eagle Eye Enterprises ವ್ಯವಸ್ಥಾಪಕಿ ಸಂಗೀತಾ ತಿಳಿಸಿದರು.

ನಿನ್ನೆ ಈ ಕುರಿತಾಗಿ ಶಿವಮೊಗ್ಗದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಮಾದರಿಯ ಸೀರೆಗಳು, ಮಹಿಳೆಯರ ಉಪಯೋಗಿ ವಸ್ತುಗಳು, ಗೃಹಾಲಂಕಾರಿಕ ಸಾಮಗ್ರಿಗಳು, ಅಪರೂಪದ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ ಎಂದರು.

ಸೆ.5 ಮತ್ತು 6ರಂದು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಕುಟುಂಬ ಸಮೇತ ಆಗಮಿಸಿ ವೀಕ್ಷಿಸಬಹುದು ಎಂದು ಹೇಳಿದರು.

ಭಾನುವಾರ ಸಂಜೆ ಮಕ್ಕಳಿಗಾಗಿ ರಾಧಾ–ಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು, 2ರಿಂದ 10 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಉತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ ಎಂದರು.

ಹೆಚ್ಚಿನ ಮಾಹಿತಿಗಾಗಿ 97319 12273 ಹಾಗೂ 93809 62690 ಸಂಖ್ಯೆಯನ್ನು ಸಂಪರ್ಕಿಸಬಹುದು ತಿಳಿಸಿದ್ದು, ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್, Eagle Eye Enterprises ಉಪಾಧ್ಯಕ್ಷೆ ಮೇಘನಾ ಹಾಗೂ ಗಾಯತ್ರಿ ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor