ರಾಷ್ಟ್ರಭಕ್ತ ಮುಸಲ್ಮಾನರು ಎಂದಿಗೂ ರಾಷ್ಟ್ರದ್ರೋಹಿ ದೇಶದ ಪರವಾಗಿ ನಿಲ್ಲಬಾರದು, ಕೆ.ಎಸ್. ಈಶ್ವರಪ್ಪ 

Eshwarappa ಶಿವಮೊಗ್ಗ | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಭಾರತದ ಕೆಲವು ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ನಿಜವಾದ ರಾಷ್ಟ್ರಭಕ್ತ ಮುಸಲ್ಮಾನರು ಎಂದಿಗೂ ರಾಷ್ಟ್ರದ್ರೋಹಿ ದೇಶದ ಪರವಾಗಿ ನಿಲ್ಲಲು ಸಾಧ್ಯವಿಲ್ಲಎಂದು ಅಭಿಪ್ರಾಯಪಟ್ಟರು.

ಶಾಖಾಹಾರಿ ಗೆ ಫಿಲ್ಮ್ ಫೇರ್ ಪ್ರಶಸ್ತಿ! ಶಿವಮೊಗ್ಗ ಕೀಳಂಬಿ ಮೀಡಿಯಾ ಸಾಧನೆ! ವಿಶೇಷ ಇಲ್ಲಿದೆ

ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಅಶಾಂತಿ ಮತ್ತು ಸಂಘರ್ಷದ ವಾತಾವರಣವಿದ್ದು, ಮುಸ್ಲಿಮರು ಪರಸ್ಪರ ಕಾದಾಡುತ್ತಿದ್ದಾರೆ. ಆದರೆ ಭಾರತವು ಮುಸ್ಲಿಮರಿಗೆ ಅತ್ಯಂತ ಸುರಕ್ಷಿತವಾದ ದೇಶವಾಗಿದೆ. ಇಲ್ಲಿ ಅವರು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ವಿರೋಧಿ ಧೋರಣೆ ಹೊಂದಿದ್ದ ಖಮೇನಿ ಪರವಾಗಿ ಬೀದಿಗೆ ಇಳಿಯುವುದು ಸರಿಯಲ್ಲ ಎಂದು ಅವರು ಹೇಳಿದರು. 

ಇರಾನ್ ಕೇವಲ ಭಾರತದ ವ್ಯಾಪಾರ ಪಾಲುದಾರನಾಗಿದೆಯೇ ಹೊರತು, ರಾಜತಾಂತ್ರಿಕವಾಗಿ ಯಾವಾಗಲೂ ಪಾಕಿಸ್ತಾನದ ಪರವಾಗಿಯೇ ನಿಂತಿದೆ. ಮುಂಬೈ ಬಾಂಬ್ ದಾಳಿಯ ಸಂದರ್ಭದಲ್ಲಿ ಇರಾನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಅಲ್ಲದೆ, 2017ರಲ್ಲಿ ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಖಮೇನಿ, 2019ರಲ್ಲಿ 370ನೇ ವಿಧಿ ರದ್ದಾದಾಗಲೂ ಅಸಮಾಧಾನ ವ್ಯಕ್ತಪಡಿಸಿದ್ದರು. 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರ ಮಾರಣಹೋಮ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದರು ಅಂತಹ ವ್ಯಕ್ತಿ ಪರವಾಗಿ ಕೆಲ ಮುಸ್ಲಿಮರು ಹೋರಾಟ ಮಾಡುತ್ತಿರುವುದು ಸರಿಯಿಲ್ಲ.

ಈ ಹಿಂದೆ ಪೆಹಲ್ಗಾಂ ಅಟ್ಯಾಕ್​ನಲ್ಲಿ ಮೃತಪಟ್ಟಾಗ ಮೌನ ವಹಿಸಿದ್ದವರು ಯಾರೂ ಸಹ ಭಯೋದ್ಪಾದಕರ ವಿರುದ್ದ ಹೋರಾಟ ಮಾಡಲಿಲ್ಲ, ಇಂದು ಇರಾನ್ ನಾಯಕನಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವುದು ದುರದೃಷ್ಟಕರ. ಭಾರತದ ಅನ್ನ ತಿಂದು ಬೆಳೆದವರು ಈ ಮಣ್ಣಿನ ಜನರ ಪರವಾಗಿ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಮುಸ್ಲಿಂ ಸಂಘಟನೆಗಳು ಮೋದಿಯವರು ಹೋಗಿ ಇಸ್ರೇಲ್​​ ಬಳಿ ಯುದ್ದ ನಿಲ್ಲಿಸಲು ಹೇಳಬೇಕು ಎನ್ನುತ್ತಿದ್ದಾರೆ. ಆನೇಕ ವಿಚಾರಗಳಲ್ಲಿ ಇಸ್ರೇಲ್​ ನಮ್ಮ ಪರವಾಗಿಯೇ ಇದೆ ಎಂದರು

ಪಾಕಿಸ್ತಾನದಂತಹ ದೇಶಗಳಲ್ಲಿ ಮಸೀದಿಗಳ ಮೇಲೆಯೇ ಬಾಂಬ್ ದಾಳಿಗಳು ನಡೆಯುತ್ತವೆ, ಆದರೆ ಭಾರತದಲ್ಲಿ ಮಸೀದಿಗಳ ಮೇಲೆ ಇದುವರೆಗೂ ಸಹ ಬಾಂಬ್​​ ಬಿದ್ದ ಉದಾಹಾರಣೆಗಳಿಲ್ಲ. ಅಷ್ಟರ ಮಟ್ಟಿ ಮುಸ್ಲಿಮರಿಗೆ ಭಾರತ ದೇಶದಲ್ಲಿ ಭದ್ರತೆ ಇದೆ. ಮುಸ್ಲಿಮರು ದೇಶದ ಭದ್ರತೆಯನ್ನು ಗೌರವಿಸಬೇಕು ಮತ್ತು ದೇಶದ ಪರವಾಗಿ ನಿಲ್ಲಬೇಕು ಎಂದರು. 

Eshwarappa Slams Pro-Iran Protests

Eshwarappa Slams Pro-Iran Protests
Eshwarappa Slams Pro-Iran Protests
shivamogga car decor sun control house
shivamogga car decor sun control house