ಈಗ ಸಿನಿಮಾದ ರೀತಿ ನಾಯಿ ರೂಪದಲ್ಲಿ ಬಂದನಾ ಮನೆ ಮಗ! ಏನಿದು ಅಚ್ಚರಿಯ ವಿಸ್ಮಯ!! ಒಂದು ಶ್ವಾನದ ಕಥೆ

A dog in Honnali taluk of Davanagere district is awe-inspiring

ಈಗ ಸಿನಿಮಾದ ರೀತಿ ನಾಯಿ ರೂಪದಲ್ಲಿ ಬಂದನಾ ಮನೆ ಮಗ! ಏನಿದು ಅಚ್ಚರಿಯ ವಿಸ್ಮಯ!! ಒಂದು ಶ್ವಾನದ ಕಥೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA

Davanagere   |  Malnenadutoday.com | : ದಾವಣಗೆರೆ ಜಿಲ್ಲೆ  ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದಲ್ಲಿ  ವಿಚಿತ್ರಕಾರಿ ಘಟನೆ ನಡೆದಿದೆ. ಕಳೆದ ಗುರುವಾರ 16 ನೆ ತಾರೀಖು ಬೆಳಿಗ್ಗೆ ಗ್ರಾಮದ ತಿಪ್ಪೇಶ್ ಎಂಬಾತ ಬೈಕ್ ಆಕ್ಸಿಡೆಂಟ್ ನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದ. 

ಭದ್ರಾವತಿ ತಾಲ್ಲೂಕು ಕುರುಬರ ವಿಠ್ಹಲಾಪುರ ಗ್ರಾಮಕ್ಕೆ ತನ್ನ ಸಹೋದರಿಯನ್ನು ಡ್ರಾಪ್ ಮಾಡಿ ಬರುವಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದು ಬೈಕ್ ಆಕ್ಸಿಡೆಂಟ್ ಆಗಿತ್ತು.. ಯುವಕ ತಿಪ್ಪೇಶ್ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಘಟನೆ ನಡೆದು ಮೂರು ದಿನಕ್ಕೆ ತಿಪ್ಪೇಶ್ ತಂದೆ ಚಂದ್ರಪ್ಪ ತಾಯಿ ಯಶೋಧ ಮನೆಗೆ ಇದ್ದಕ್ಕಿದ್ದಂತೆ ನಾಯಿಯೊಂದು ಓಡಾಡಲು ಆರಂಭಿಸಿದೆ.  

READ : ಸೀಗೆಹಟ್ಟಿಗೆ ಬಂದು ವಾಪಸ್​ ಸಾಗರ ತೆರಳಲು ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಮಹಿಳೆಗೆ ಶಾಕ್! ಮತ್ತೊಂದು ಘಟನೆ!

ಆಕ್ಸಿಡೆಂಟ್ ಸಂದರ್ಭದಲ್ಲಿ ಬೈಕ್​ಗೆ ಅಡ್ಡಬಂದಿದ್ದ  ಕರಿ ನಾಯಿಯು  ತಿಪ್ಪೇಶಿ ಮನೆಯಲ್ಲಿ ಪ್ರತ್ಯಕ್ಷವಾಗಿ ಕಳೆದ ಎಂಟು ದಿನಗಳಿಂದ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದೆ. ಇದ್ದಕ್ಕಿದ್ದಂತೆ ಮನೆಗೆ ಬಂದ ನಾಯಿ ಎಲ್ಲಿಯದ್ದು ಎಂದು ಗ್ರಾಮಸ್ತರು ಹುಡುಕಾಡಿದ್ದಾರೆ.  ವಿಠ್ಹಲಾಪುರ ಗ್ರಾಮದ ಒಬ್ಬರಿಗೆ ಸೇರಿದ ಸಾಕು ನಾಯಿ ಇದಾಗಿತ್ತು. ಅಲ್ಲದೆ ಇದೇ ನಾಯಿ ಬೈಕ್​ಗೆ ಅಡ್ಡ ಬಂದು ತಿಪ್ಪೇಶ್ ಸಾವನ್ನಪ್ಪಿದ್ದ ಎಂಬುದು ಗೊತ್ತಾಗಿತ್ತು. 

READ :ಮಹಿಳೆ ಮತ್ತು ಐವರು ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ! ಕಾಣೆಯಾದವರು ಮೈಸೂರಲ್ಲಿ ಪತ್ತೆ!

ಆದರೆ ಘಟನೆ ಬೆನ್ನಲ್ಲೆ ನಾಯಿ ತನ್ನ ಮಾಲೀಕನ ಮನೆಗೆ ಹೋಗಿಲ್ಲ. ಬದಲಾಗಿ ವಿಠ್ಹಲಾಪುರದಿಂದ  ಕ್ಯಾಸಿನಕೆರೆಗೆ  8 ಕಿ ಮೀ ದೂರ ವಲಸೆ ಬಂದಿದೆ. ಅಲ್ಲದೆ ಮೃತ ತಿಪ್ಪೇಶನ ಮನೆಗೆ ಬಂದು ಅವರ ಕುಟುಂಬಸ್ಥರನ್ನ ತನ್ನ ಮೂಕ ಭಾಷೆಯಲ್ಲಿಯೇ ಮಾತನಾಡಿಸಿದದೆ. ಕುಟುಂಬ ಸದಸ್ಯರ ಜೊತೆ ಕಾಲ ಕಳೆಯುತ್ತಿರುವ ಶ್ವಾನ ಮೃತನ ಸಂಬಂಧಿ ಹಾಗೂ ಸ್ನೇಹಿತರಲ್ಲಿ ಅಚ್ಚರಿ ಮೂಡಿಸಿದೆ. 

ತಿಪ್ಪೇಶ್ ಸ್ನೇಹಿತರು ಒಡನಾಡಿಗಳು ಸಂಬಂದಿಗಳ ಜೊತೆ ನಾಯಿಯು ಆತ್ಮೀಯವಾಗಿರುವುದನ್ನ ನೋಡಿದ ಜನರು ತಿಪ್ಪೇಶನೇ ಹೀಗೆ ಈ ರೂಪದಲ್ಲಿ ಬಂದನೇ ಎಂದು ಮಾತನಾಡಿಕೊಳ್ತಿದ್ದಾರೆ. ವಿಶೇಷ ಅಂದರೆ, ತಿಪ್ಪೇಶನ ಸಮಾಧಿ ಸ್ಥಳಕ್ಕೆ ಹೋಗಿದ್ದ ನಾಯಿ ಅಲ್ಲಿ ಆತನ ಸಮಾಧಿ ಮೇಲೆ ಮಲಗಿದ ಘಟನೆಯು ನಡೆದಿದೆ.  ವಿಚಾರ ಏನೇ ಇರಬಹುದು. ಆದರೆ ಭಾವುಕ ಜಗತ್ತಿನಲ್ಲೊಂದು ವಿಸ್ಮಯದ ಸಂಗತಿಯಾಗಿ ನಾಯಿ ಕಾಣತೊಡಗಿದೆ