ಶಿವವಮೊಗ್ಗದಲ್ಲಿ ಮತ್ತೊಂದು ನಂಬಿಕೆ ದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ( Doddapete police station ) ಎಫ್ಐಆರ್ ಆಗಿದೆ.ಆರ್ ಎಂ ಎಲ್ ನಗರದ ಶಾರದಾ ಎಂಬು ವರಿಗೆ 25 ಲಕ್ಷ, ಶೇಷಗಿರಿಗೌಡ ಎಂಬವರಿಗೆ 1,98,000, ಮಂಜುನಾಥ್ ಎಂಬುವರಿಗೆ 25 ಲಕ್ಷ , ದಾವಣಗೆರೆಯ ಶಶಿಕುಮಾರ್ ಎಂಬುವರಿಗೆ 40 ಲಕ್ಷ, ಗೋಪಾಲಗೌಡ ಬಡಾವಣೆ ನಿವಾಸಿ ದಿವ್ಯಾ ಪ್ರವೀಣ್ ಅವರಿಗೆ 25 ಲಕ್ಷ ಹೀಗೆ ಒಟ್ಟು 1 ಕೋಟಿ 66 ಲಕ್ಷದ 98 ಸಾವಿರ ರೂಪಾಯಿ ವಂಚನೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
Doddapete police station : ಕೋವಿಡ್ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್
ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ: ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್ಸೈಟ್
ಏನಿದು ಕೇಸ್.
ಆರ್ಎಂಎಲ್ ನಗರದ ನಿವಾಸಿಯೊಬ್ಬರು , ಮೊದಲ ಕೋವಿಡ್ ಸಂದರ್ಭದಲ್ಲಿ ಮಿಳಘಟ್ಟದಲ್ಲಿ ಇ-ಸ್ಟೋರ್ ಒಂದರ ಕರಪತ್ರ ನೋಡಿ ಅದರಲ್ಲಿದ್ದ ಅಡ್ರೆಸ್ಗೆ ಕರೆಮಾಡಿದ್ದಾರೆ. ಫೋನ್ ಸ್ವೀಕರಿಸಿದವರು, ಮನೆಯ ವಿಳಾಸ ಕೇಳಿ ಮನೆಗೆ ಬಂದಿದ್ದಾರೆ. ಈ ವೇಳೆ ಹವಾಟಿ ಇ-ಸ್ಟೋರ್ ಇಂಡಿಯ ಕಂಪನಿಯ ಹಲವು ಮುಖ್ಯಸ್ಥರನ್ನು ಫೋಟೋಗಳ ಮೂಲಕ ಪರಿಚಯಿಸಿದ್ಧಾರೆ. ಅಲ್ಲದೆ ಏನದು ಸ್ಕೀಮ್ ಎಂಬುದನ್ನ ವಿವರಿಸಿದ್ದಾರೆ. ಈ ಕಂಪನಿಯಲ್ಲಿ ಕನಿಷ್ಟ 5 ಲಕ್ಷ ರೂ ಹೂಡಿಕೆ ಮಾಡಿದರೆ, 50,000 ರೂ ಪ್ರತಿ ತಿಂಗಳಿನಂತೆ ಸಿಗುತ್ತದೆ. 25 ಲಕ್ಷರೂ ಬಂಡವಾಳ ಹೂಡಿದರೇ ಇಸ್ಟೋರ್ ಅಂಗಡಿ ಮತ್ತು ತಿಂಗಳಿಗೆ 1 ಲಕ್ಷದ 35 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ.
Doddapete police station : ಕೋವಿಡ್ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್
ಇದನ್ನ ನಂಬಿ ಮೋಸಹೋದವರೊಬ್ಬರು 25 ಲಕ್ಷರೂ. ಬಂಡವಾಳ ಹೂಡಿದ್ದಾರೆ. ಇದರಲ್ಲಿ ಹೂಡಿಕೆ ಹಣಕ್ಕೆ ಪ್ರತಿಯಾಗಿ ಇದುವರೆಗೂ ಒಟ್ಟು 16 ಲಕ್ಷ ಪ್ರತಿ ತಿಂಗಳು ಹಣ ಬಂದಿದೆ. 9 ಲಕ್ಷ ರೂ ಹಣ ವಾಪಾಸ್ ಆಗಿಲ್ಲ. ಇದನ್ನು ವಿಚಾರಿಸಿದರೆ ನೀವು ಮತ್ತೆ ಇಬ್ಬರು ಉದ್ಯೋಗಿಗಳನ್ನು ಕಂಪನಿಗೆ ಪರಿಚಯಿಸಿ ಹಣ ಬರುತ್ತದೆ ಎಂದಿದ್ದಾರೆ. ಇದರಿಂದ ಮೋಸ ಹೋಗಿರುವುದು ಗೊತ್ತಾಗಿ ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ( Doddapete police station ) ದೂರು ದಾಖಲಿಸಿದ್ಧಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com