ಭದ್ರಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು

ಹಂಚಿಕೊಳ್ಳಿ
WhatsApp Facebook X Telegram
Dam Water Level july 28
Dam Water Level july 28

Dam Water Level ಭದ್ರಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು

ಶಿವಮೊಗ್ಗ, ಜುಲೈ 28, 2025: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಹೆಚ್ಚಾಗಿದ್ದು, ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇಂದು ಬೆಳಿಗ್ಗೆಯ ವರದಿಯ ಪ್ರಕಾರ, ಭದ್ರಾ ಜಲಾಶಯಕ್ಕೆ 37,226 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಇದೇ ಪ್ರಮಾಣದ 37,226 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 180 ಅಡಿ 6 ಇಂಚುಗಳಿಗೆ (ಸಮುದ್ರ ಮಟ್ಟದಿಂದ 2152.50 ಅಡಿ) ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ (ಸಮುದ್ರ ಮಟ್ಟದಿಂದ 2158.00 ಅಡಿ) ಆಗಿದ್ದು, ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದೆ. ಸದ್ಯ, ಜಲಾಶಯದಲ್ಲಿ 64.777 ಟಿಎಂಸಿ ನೀರು ಸಂಗ್ರಹವಾಗಿದೆ.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor