SHIVAMOGGA NEWS TODAY

ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿ ಅಶ್ಲೀಲ ಚಿತ್ರದ ಮೇಲೆ ಯುವತಿಯ ನಂಬರ್​ : ಏನಿದು ಪ್ರಕರಣ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Cybercrime Shivamogga ಶಿವಮೊಗ್ಗ  : ಯುವತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿ. ಆ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಯುವತಿಯ ನಂಬರ್​ ನಮೂದಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ, ಈ ಹಿನ್ನೆಲೆ ಯುವತಿಗೆ ಅಪರಿಚಿತ ವ್ಯಕ್ತಿಗಳಿಂದ ಕರೆ ಬರುತ್ತಿದ್ದು ಯುವತಿ ಶಿವಮೊಗ್ಗದ ಸಿ ಇ ಎನ್​ ಕ್ರೈ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ  ತಾಲೂಕು ಒಂದರಲ್ಲಿ ಮಹಿಳೆಯೊಬ್ಬರ ಹೆಸರಿನಲ್ಲಿ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ) ಕಿಡಿಗೇಡಿಗಳು ನಕಲಿ ಖಾತೆಯನ್ನು ಸೃಷ್ಟಿಸಿದ್ದಾರೆ. ಸೃಷ್ಟಿಸಿದ್ದು ಅಷ್ಟೇ ಅಲ್ಲದೆ. ಆ ಖಾತೆಯಲ್ಲಿ ಯಾರೋದ್ದೋ ಅಶ್ಲೀಲ ಫೋಟೋವನ್ನು ನಮೂದಿಸಿ ಮಹಿಳೆಯ ನಂಬರ್ ಅಕೆಯ ತಂಗಿ ಹಾಗೂ ಪತಿಯ ನಂಬರ್​ನ್ನು ನಮೂದಿಸಿದ್ದಾರೆ. ಇದು ಮಹಿಳೆಗೆ ತಿಳಿದಿರಲಿಲ್ಲ. ಇದರಿಂದಾಗಿ ಮಹಿಳೆಗೆ ಕೆಲ ದಿನಗಳ ನಂತರ ಫೋನ್​ಗಳ ಮೇಲೆ ಫೋನ್​ಗಳು ಬರಲು ಶುರುವಾಗಿದೆ. ಇದರಿಂದ ಅನುಮಾನಗೊಮನಡ ಮಹಿಳೆ ಪರಿಚಯಸ್ತರಲ್ಲಿ ವಿವಾರಿಸಿದಾಗ ತನ್ನ ಹೆಸರಲ್ಲಿ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿರುವುದು ತಿಳಿದುಬಂದಿದೆ.

ಇದರಿಂದ ಆಘಾತಗೊಂಡ ಮಹಿಳೆ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು. ಅಶ್ಲೀಲ ಪೋಟೋಗಳ ಮೇಲೆ ತನ್ನ ಹಾಗೂ ತನ್ನ ಕುಟುಂಬದ ನಂಬರ್​ಗಳನಬ್ನು ನಮೂದಿಸಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳವಂತೆ ಶಿವಮೊಗ್ಗದ ಸಿ ಇ ಎನ್​ ಕ್ರೈಂ ಪೊಲೀಸ್​​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

Cybercrime Shivamogga

 

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.