SHIVAMOGGA NEWS TODAY

ಕಂತು ಕಟ್ಟಿಸಿಕೊಂಡು ಕಣ್ಮರೆಯಾದ ರಿಯಲ್ ಎಸ್ಟೇಟ್ ಸಂಸ್ಥೆ: ಬಡ್ಡಿ ಸಮೇತ ಲಕ್ಚಾಂತರ ರೂ. ಮರುಪಾವತಿಗೆ ಕೋರ್ಟ್​​ ತೀರ್ಪು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Court Orders ಶಿವಮೊಗ್ಗ : ಹಣ ಪಡೆದು ಸೈಟ್ ನೀಡದೆ ವಂಚಿಸುವ ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಶಾಕ್​​ ನೀಡಿದೆ. ನಿವೇಶನ ಖರೀದಿದಾರರಿಗೆ ಸಕಾಲದಲ್ಲಿ ಕ್ರಯಪತ್ರ ಮಾಡಿಕೊಡದೆ ಸೇವಾನ್ಯೂನತೆ ಎಸಗಿದ ಬೆಂಗಳೂರಿನ ಡೆವಲಪರ್ಸ್‌ ಸಂಸ್ಥೆಗೆ, ಗ್ರಾಹಕರಿಂದ ಪಡೆದ ಪೂರ್ಣ ಮೊತ್ತವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ತೀರ್ಪು ನೀಡಿದೆ.

ಬೆಂಗಳೂರು-ಶಿವಮೊಗ್ಗ ಟ್ರೈನ್​ನಲ್ಲಿ ಸಿಕ್ಕ ಟಿಟಿನೇ ಫೇಕ್! ರಾಗಿಗುಡ್ಡದಲ್ಲಿ Rcb ಕ್ರಿಕೆಟ್ ಕಿರಿಕ್, ಮದುವೆಗೆ ನೋ ಎಂದ ವರ! ದಾಖಲಾಯ್ತು ಕೇಸ್ !ಜಸ್ಟ್ ಶಿವಮೊಗ್ಗ 

ಘಟನೆ ವಿವರ

ಶಿವಮೊಗ್ಗದ ವಿನೋಬನಗರದ ನಿವಾಸಿ  ವೆಂಕಟಲಕ್ಷ್ಮೀ ಅವರು ಬೆಂಗಳೂರಿನ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಒಂದರ ಪಾಲುದಾರರಾದ ಇಬ್ಬರ ವಿರುದ್ಧ ವಕೀಲರ ಮೂಲಕ ಈ ಕಾನೂನು ಹೋರಾಟ ನಡೆಸಿದ್ದರು. ದೂರುದಾರರು ನೆಲಮಂಗಲ ತಾಲೂಕಿನ ಯಲಚಗೆರೆಯಲ್ಲಿ ರೂ. 5.00 ಲಕ್ಷ ಮೌಲ್ಯದ 40/20 ಅಳತೆಯ ನಿವೇಶನಕ್ಕಾಗಿ ಅಕ್ಟೋಬರ್ 2024ರ ಒಳಗೆ ಹಂತ-ಹಂತವಾಗಿ ಒಟ್ಟು ರೂ. 4.99 ಲಕ್ಷ ಪಾವತಿಸಿದ್ದರು. 

ಆದರೆ, 6 ತಿಂಗಳೊಳಗೆ ಕ್ರಯಪತ್ರ ಮಾಡಿಕೊಡುವುದಾಗಿ ನಂಬಿಸಿದ್ದ ಸಂಸ್ಥೆಯು ಮಾತು ತಪ್ಪಿದ್ದಲ್ಲದೆ, 2025ರಲ್ಲಿ ನೀಡಿದ ಲೀಗಲ್ ನೋಟಿಸ್‌ಗೂ ಕ್ಯಾರೆ ಎನ್ನದೆ ಗ್ರಾಹಕರಿಗೆ ದ್ರೋಹ ಬಗೆದಿತ್ತು. ಆಯೋಗದ ನೋಟಿಸ್‌ಗೂ ಹಾಜರಾಗದ ಎದುರುದಾರರ ವಿರುದ್ಧ ಏಕಪಕ್ಷೀಯವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠವು ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಆದೇಶದ ಪ್ರಕಾರ, ಡೆವಲಪರ್ಸ್ ಸಂಸ್ಥೆಯು ಗ್ರಾಹಕರಿಗೆ ರೂ. 4.99 ಲಕ್ಷ ಮೊತ್ತವನ್ನು ವಾರ್ಷಿಕ ಶೇ. 9 ರ ಬಡ್ಡಿಯೊಂದಿಗೆ45 ದಿನಗಳೊಳಗೆ ನೀಡಬೇಕು. ವಿಳಂಬವಾದರೆ ಶೇ. 12 ರಷ್ಟು ಬಡ್ಡಿ ತೆರಬೇಕಾಗುತ್ತದೆ. ಇದರೊಂದಿಗೆ ಮಾನಸಿಕ ಹಿಂಸೆಗೆ ರೂ. 50,000 ಹಾಗೂ ಕೋರ್ಟ್ ವೆಚ್ಚಕ್ಕಾಗಿ ರೂ. 10,000 ಪರಿಹಾರ ನೀಡಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.

Court Orders Real Estate Firm to Refund Buyer

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.