ರೈಲ್ವೆ ಪ್ರಯಾಣಿಕರ ಗಮನಕ್ಕೆ/ ಡಿಸೆಂಬರ್ 5 &6 ರಂದು ಬೆಂಗಳೂರು/ಶಿವಮೊಗ್ಗ ಜನ ಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ಬದಲಾವಣೆ

ನೈಋತ್ಯ ರೈಲ್ವೆ ರೈಲ್ವೆ ಇಲಾಖೆಯು ಎರಡು ದಿನಗಳ ಮಟ್ಟಿಗೆ ವಿವಿಧ ರೈಲುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆ ಮಾಡಿದೆ. ಕೆಲವು ರೈಲುಗಳ ಸಂಚಾರ ಸಮಯವನ್ನು ರಿಷೆಡ್ಯೂಲ್​ ಮಾಡಲಾಗಿದೆ. ಮತ್ತೆ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಗುಡ್ ನ್ಯೂಸ್​ : ಕಾಶಿಪುರ ರೈಲ್ವೆ ಅಂಡರ್​ ಪಾಸ್​ ಕಾಮಗಾರಿ ಮುಕ್ತಾಯ ಹಂತಕ್ಕೆ

ಇನ್ನೂ ಕೆಲವು ರೈಲುಗಳ ಸಂಚಾರವನ್ನು ರೆಗ್ಯಲೆಟ್ ಮಾಡಲಾಗಿದೆ. ಕಡೂರು ರೈಲ್ವೆ ನಿಲ್ದಾಣದಲ್ಲಿ ಡ್ಯುಯಲ್​ ವಿಡಿಯು ಸಿಸ್ಟಮ್​ನ್ನು ಅಳವಡಿಸಲಾಗುತ್ತಿದೆ. (hot standby Dual VDU system at Kadur station) ರೈಲ್ವೆ ಇಲಾಖೆಯ  non-Interlocking worksನ ಕಾರಣದಿಂದಾಗಿ ಇದೇ ಡಿಸೆಂಬರ್​  ಡಿಸೆಂಬರ್ 5 ಮತ್ತು 6 ರಂದು 2 ದಿನಗಳ ಕಾಲ ನಿಗದಿತ ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ.ಯಾವ್ಯಾವ ರೈಲುಗಳ ಸಂಚಾರದಲ್ಲಿ ಏನೇನು ವತ್ಯಾಸ ಎಂಬುದರ ವಿವರ ಈ ಕೆಳಕಂಡಂತೆ ಇದೆ.

ಇದನ್ನು ಸಹ ಓದಿ : BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

 ಭಾಗಶಃ ರದ್ದತಿ:

1. ಯಶವಂತಪುರದಿಂದ ಹೊರಡುವ  ರೈಲು ಸಂಖ್ಯೆ 16240 ಯಶವಂತಪುರಚಿಕ್ಕಮಗಳೂರು ಡೈಲಿ ಎಕ್ಸ್ಪ್ರೆಸ್ ನ ಸಂಚಾರವನ್ನು  06.12.2022 ರಂದು ಕಡೂರುಚಿಕ್ಕಮಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಕಡೂರಿನಲ್ಲಿ  ನಿಲುಗಡೆಯಾಗಲಿದೆ.

2. ಶಿವಮೊಗ್ಗ ನಗರದಿಂದ ಹೊರಡುವ  ರೈಲು ಸಂಖ್ಯೆ 07365 ಶಿವಮೊಗ್ಗ ಟೌನ್ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ಟ್ರೈನ್​ ಸಂಚಾರವೂ 06.12.2022 ರಂದು  ಬೀರೂರುಚಿಕ್ಕಮಗಳೂರು ನಡುವೆ ಭಾಗಶಃ ರದ್ದಾಗಲಿದೆ ಮತ್ತು ಟ್ರೈನ್​ ಬೀರೂರಿನಲ್ಲಿ ನಿಲ್ಲಲಿದೆ.

ದಿವಂಗತ ಸಾರೆಕೊಪ್ಪ ಬಂಗಾರಪ್ಪರವರ ಅಪರೂಪದ ವಿಡಿಯೋ ನೋಡಿ

ನಿಯಂತ್ರಣ:

  1. ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್ಮೈಸೂರು ಸಾಪ್ತಾಹಿಕ ಸೂಪರ್​ ಫಾಸ್ಟ್​  ಎಕ್ಸ್ಪ್ರೆಸ್ ನ ಸಂಚಾರ 05.12.2022  ರಂದು ಒಟ್ಟಾರೆ  30 ನಿಮಿಷಗಳ ಕಾಲ ವಿಳಂಭವಾಗಲಿದೆ
  2. 06.12.2022 ರಂದು ತುಮಕೂರಿನಿಂದ ಹೊರಡುವ ರೈಲು ಸಂಖ್ಯೆ 16567 ತುಮಕೂರುಶಿವಮೊಗ್ಗ ಟೌನ್ ಡೈಲಿ ಎಕ್ಸ್ಪ್ರೆಸ್ ಸಂಚಾರವು ಸಹ  30 ನಿಮಿಷಗಳ ಕಾಲ ವಿಳಂಭವಾಗಲಿದೆ
  3. ಮೈಸೂರಿನಿಂದ ಹೊರಡುವ  ರೈಲು ಸಂಖ್ಯೆ 16535 ಮೈಸೂರುಸೋಲಾಪುರ ಡೈಲಿ ಗೋಲ್​ಗುಂಬಜ್​  ಎಕ್ಸ್ಪ್ರೆಸ್ ನ ಸಂಚಾರದ ಒಟ್ಟಾರೆ ಸಮಯದಲ್ಲಿ ಸಹ 06.12.2022 ರಂದು  ಒಟ್ಟಾರೆ 30 ನಿಮಿಷಗಳ ಕಾಲ ವಿಳಂಬವಾಗಲಿದೆ
  4. ಮಂಗಳೂರು ಜಂಕ್ಷನ್ನಿಂದ  ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ವಿಜಯಪುರ ಡೈಲಿ ಎಕ್ಸ್ಪ್ರೆಸ್ ಸಂಚಾರದ ಒಟ್ಟಾರೆ ಸಮಯದಲ್ಲಿ ದಿನಾಂಕ 06.12.2022 ರಂದು  30 ನಿಮಿಷಗಳ ಕಾಲ ವಿಳಂಬವಾಗಲಿದೆ.

ಮೊದಲು 12 ನಂತರ 4 ಆನೆಗಳು ಉತ್ತರ ಭಾರತಕ್ಕೆ ಶಿಫ್ಟ್​, ಈಗ 14 ಆನೆ ಮಧ್ಯಪ್ರದೇಶಕ್ಕೆ ರವಾನಿಸಲು ಸಿದ್ಧತೆ! ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

 ಮರುನಿಗದಿ 

  •  1. ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ  ರೈಲು ಸಂಖ್ಯೆ 12089 ಕೆಎಸ್ಆರ್ ಬೆಂಗಳೂರುಶಿವಮೊಗ್ಗ ಟೌನ್ ಡೈಲಿ ಜನ್ ಶತಾಬ್ದಿ ಸಂಚಾರದ ಅವಧಿಯನ್ನು ಎಕ್ಸ್ಪ್ರೆಸ್ ದಿನಾಂಕ 06.12.2022 ರಂದು  120 ನಿಮಿಷಗಳ ಕಾಲ ಮರುನಿಗದಿಪಡಿಸಲಾಗಿದೆ
  •  2. ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ  ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿಅರಸೀಕೆರೆ ಡೈಲಿ ಎಕ್ಸ್ಪ್ರೆಸ್​ನ ಸಂಚಾರದ ಅವಧಿಯನ್ನು 06.12.2022 ರಂದು  90 ನಿಮಿಷಗಳ ಕಾಲ ಮರುಹೊಂದಿಸಲಾಗುವುದು.

|King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

 II. ರೈಲುಗಳ ಮರುನಿಗದಿಪಡಿಸುವಿಕೆ

ಅರಸೀಕೆರೆ ಮತ್ತು ಬಾಣಾವರ ನಡುವೆ ನಡೆಯಲಿರುವ ಕಾಮಗಾರಿ ಹಿನ್ನೆಲೆ ಲೈನ್​ ಬ್ಲಾಕ್​ ಆಗುತ್ತಿರುವ ಕಾರಣಕ್ಕಾಗಿ ಈ ಕೆಳಗಿನ ರೈಲುಗಳನ್ನು ಮರುನಿಗದಿಗೊಳಿಸಲಾಗಿದೆ.

 1. ಅರಸೀಕೆರೆಯಿಂದ ಹೊರಡುವ  ರೈಲು ಸಂಖ್ಯೆ 16213 ಅರಸೀಕೆರೆಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲಿನ ಸಂಚಾರದ ಅವಧಿಯನ್ನು 04.12.2022 ಮತ್ತು 11.12.2022 ರಂದು  30 ನಿಮಿಷಗಳ ಕಾಲ  ರಿಷೆಡ್ಯೂಲ್​ ಮಾಡಲಾಗಿದೆ.
 2. 05.12.2022 ಮತ್ತು 12.12.2022 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿಅರಸೀಕೆರೆ ಎಕ್ಸ್ಪ್ರೆಸ್ ರೈಲನ್ನು 60 ನಿಮಿಷಗಳ ಕಾಲ ರಿಷೆಡ್ಯೂಲ್​ ಮಾಡಲಾಗುತ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment