bhadravathi news today : 9 ಕ್ಕೂ ಅಧಿಕ ಮಕ್ಕಳಿಗೆ ಕಡಿದ ಹುಚ್ಚುನಾಯಿ | ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು

ಕೊನೆಯ ನವೀಕರಣ: 17 ಜೂನ್ 2025, 1:16 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
bhadravathi news today
bhadravathi news today

bhadravathi news today : 9 ಕ್ಕೂ ಅಧಿಕ ಮಕ್ಕಳಿಗೆ ಕಡಿದ ಹುಚ್ಚುನಾಯಿ | ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು

bhadravathi news today : ಭದ್ರಾವತಿ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಹುಚ್ಚು ನಾಯಿಯ ಹಾವಳಿ ವಿಪರೀತವಾಗಿದ್ದು, ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನಾಯಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಮರದ ಬಡಿಗೆಗಳನ್ನು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಾಸರಕಲ್ಲಹಳ್ಳಿಯಲ್ಲಿ ಹುಚ್ಚು ಹಿಡಿದಿರುವ ನಾಯಿಯೊಂದು 9 ಮಕ್ಕಳು ಸೇರಿದಂತೆ ಹಲವರಿಗೆ ಕಚ್ಚಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಜಾನುವಾರುಗಳ ಮೇಲೂ ದಾಳಿ ನಡೆಸಿದೆ ಎನ್ನಲಾಗಿದ್ದು, ಇದು ಜನರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಾಯಿಯ ದಾಳಿಯಿಂದ ರಕ್ಷಣೆ ಪಡೆಯಲು ಗ್ರಾಮಸ್ಥರು ಬಡಿಗೆಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಜೊತೆಗೆ, ಹುಚ್ಚು ನಾಯಿಯನ್ನು ಪತ್ತೆಹಚ್ಚಿ ಹಿಡಿಯಲು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಇಲಾಖೆಗಳು ದಾಸರಕಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಹುಚ್ಚು ನಾಯಿಯನ್ನು ಹಿಡಿದು ಗ್ರಾಮಸ್ಥರಲ್ಲಿರುವ  ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor