ಶಿವಮೊಗ್ಗ : ವೈನ್ ಶಾಪ್​ಗೆ ಭೇಟಿ ನೀಡಿ ಪರಿಶೀಲಿಸಿ ನೋಟಿಸ್ ನೀಡಿದ ಪೊಲೀಸರು ?

Bar Raid Police Warning On Underage Drinking
Bar Raid Police Warning On Underage Drinking
ಹಂಚಿಕೊಳ್ಳಿ
WhatsApp Facebook X

ಶಿವಮೊಗ್ಗ: ರಾಜ್ಯ ಸರ್ಕಾರವು ರಾಜ್ಯದಾದ್ಯಂತ 21 ವರ್ಷದೊಳಗಿನ ಯುವಕರಿಗೆ ಬಾರ್‌ಗಳಲ್ಲಿ ಮದ್ಯವನ್ನು ನೀಡಬಾರದು ಎಂಬ ಕಾನೂನನ್ನು ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ, ಶಿವಮೊಗ್ಗ ಪೊಲೀಸರು ಮೈದಾನಕ್ಕಿಳಿದು ಬಾರ್ ಮಾಲೀಕರಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದ್ದಾರೆ.

ನಿನ್ನೆ ಶಿವಮೊಗ್ಗ ಜಿಲ್ಲಾ ಪೊಲೀಸರು ನಗರದ ವಿವಿಧ ಬಾರ್‌ಗಳಿಗೆ ಭೇಟಿ ನೀಡಿದರು. ಈ ವೇಳೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ಯಾವುದೇ ಕಾರಣಕ್ಕೂ ಮದ್ಯಪಾನ ಅಥವಾ ಧೂಮಪಾನ ಮಾಡಲು ಅವಕಾಶ ನೀಡಬಾರದು ಎಂದು ಅಂಗಡಿಗಳ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಯುವ ಪೀಳಿಗೆಯು ಮಾದಕ ವ್ಯಸನಗಳಿಗೆ ಬಲಿಯಾಗುವುದನ್ನು ತಡೆಯುವ ಮತ್ತು ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಈ ದಿಢೀರ್ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

Bar Raid Police Warning On Underage Drinking

Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor

NEXT TO READ

ಮುಂದಿನ ಸುದ್ದಿಗಳು

ನೀವು ಓದುತ್ತಿರುವಂತೆ ಮೂರು ಸುದ್ದಿಗಳು ಮಾತ್ರ ಲೋಡ್ ಆಗುತ್ತವೆ.