KARNATAKA NEWS/ ONLINE / Malenadu today/ May 4, 2023 GOOGLE NEWS
ಶಿವಮೊಗ್ಗ/ Bajarangdal/ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು (Bajrang Dal) ನಿಷೇಧಿಸುವ ವಿಚಾರ ಸಂಬಂಧ ಬಜರಂಗ ದಳ ನಿನ್ನೆ ಸಂಜೆ ಹನುಮಾನ್ ಚಾಲೀಸಾ ಪಠಣದ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಏಳು ಗಂಟೆ ರಾಜ್ಯದ ವಿವಿದೆಡೆ ಹನುಮಾನ್ ಚಾಲೀಸಾವನ್ನು ಪಠಣ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಬಜರಂಗ ದಳ ಸಂಘಟನೆಯ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಸಂಘಟನೆಯ ಸದಸ್ಯರೆಲ್ಲಾ ಸೇರಿ ಹನುಮಾನ್ ಭಾವಚಿತ್ರದ ಎದರು ಹನುಮಾನ್ ಚಾಲೀಸಾ ಪಠಿಸಿದರು. ಹನುಮಾನ್ ಚಾಲೀಸಾ ಪ್ರತಿಯನ್ನು ಎಲ್ಲರಿಗೂ ನೀಡಲಾಗಿತ್ತು. ಇನ್ನೂ ಈ ವೇಳೆ ಕಾಂಗ್ರೆಸ್ನ ವಿರುದ್ಧ ಆಕ್ರೋಶವೂ ವ್ಯಕ್ತವಾಯ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ಪಟೇಲ್ ಕಾಂಗ್ರೆಸ್ ನಾಯಕರು ಚುನಾವಣೆ ಸಮಯದಲ್ಲಿಯೂ ಬುದ್ದಿ ಕಲಿಯಲಿಲ್ಲ. ಮಲ್ಲಿಕಾರ್ಜುನ್ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯನ್ನ ವಿಷ ಸರ್ಪ ಎಂದು ಕರೆದರು, ಪ್ರಿಯಾಂಕಾ ಗಾಂಧಿಯವರು ಪಾರ್ಕ್ ನಲ್ಲಿ ಯೋಗ ಮಾಡೋದು ನಿಲ್ಲಿಸುತ್ತೇವೆ ಎಂದರು. ಇಂತಹ ಮಾತುಗಳಿಂದಲೇ ಕಾಂಗ್ರೆಸ್ ಅಧಪತನವಾಗುತ್ತಿದೆ ಎಂದರು.
Thirthahalli / ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗೆ ವೇದಿಕೆಯಲ್ಲಿಯೇ ಬೆದರಿಕೆ
ತೀರ್ಥಹಳ್ಳಿ/ ಶಿವಮೊಗ್ಗ ಅಪಚರಿತ ವ್ಯಕ್ತಿಯೊಬ್ಬರು ವೇದಿಕೆ ಮೇಲೆಯೇ ಬಂದು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಅಂತಾ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಲೂರು ಶಿವಕುಮಾರ್ ಗೌಡ ಆರೋಪಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಮಾಳೂರು ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೂಡ ಕೊಟ್ಟಿದ್ದು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ
ನಡೆದಿದ್ದೇನು?
ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ತೀರ್ಥಹಳ್ಳಿಯಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಮಂಡಗದ್ದೆ ಬಳಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಓರ್ವ ಅಪರಿಚಿತ ವ್ಯಕ್ತಿ ವೇದಿಕೆಯ ಮೇಲೆ ಬಂದು ಕೊಲೆ ಬೆದರಿಕೆ ಹಾಕಿದ್ದ. ಆ ಸಂದರ್ಭದಲ್ಲಿ, ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ ಇದುವರೆಗೂ ಆರೋಪಿಯನ್ನು ಪತ್ತೆಹಚ್ಚಿಲ್ಲ ಎಂದಿದ್ದಾರೆ.
ನಾನು ಸುಪ್ರೀಂ ಕೋರ್ಟ್ ವಕೀಲನಾಗಿದ್ಧೇನೆ. ನನ್ನ ಗತಿಯೇ ಹೀಗಾದರೆ ಜನಸಾಮಾನ್ಯರ ಪಾಡು ಏನು? ಎಂಧು ಪ್ರಶ್ನಿಸಿರುವ ಅವರು ಘಟನೆ ಕುರಿತು ಇಲ್ಲಿಯವರೆಗೆ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ಮಾತಾಡಿಲ್ಲ
ಶತ್ರುವಿನ ಮದುವೆ ಫೋಟೋ ಸ್ಟೇಟಸ್ನಲ್ಲಿ ಹಾಕಿದ್ದಕ್ಕೆ ಸ್ನೇಹಿತನ ಮೇಲೆ ಹಲ್ಲೆ
ಭದ್ರಾವತಿ/ಶಿವಮೊಗ್ಗ/ ಶತ್ರುವಿನ ಮದುವೆ ಫೋಟೋ ಸ್ಟೇಟಸ್ನಲ್ಲಿ ಹಾಕ್ತೀಯಾ ಅಂತಾ ಸ್ನೇಹಿತನ ಮೆಲೆ ಹಲ್ಲೆ ಮಾಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಕೆಲದಿನಗಳ ಹಿಂದೆ ನಡೆದ ಘಟನೆ ಸಂಬಂಧ ಭದ್ರಾವತಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರು ಪೇಪರ್ ಟೌನ್ನಿಂದ ತಮ್ಮಗೆ ಮನೆಗೆ ಹೋಗುತ್ತಿದ್ದಾಗ, ಸ್ನೇಹಿತನೊಬ್ಬ ಎದುರಾಗಿದ್ದಾನೆ. ಆತ ಇವರನ್ನ ನೋಡುತ್ತಲ್ಲೇ ಬೈಕ್ ಅಡ್ಡ ಗಟ್ಟಿ ನನ್ನ ಶತ್ರುವಿನ ಮದುವೆ ಫೋಟೋ ಸ್ಟೇಟಸ್ನಲ್ಲಿ ಹಾಕ್ಕೊಂಡಿದ್ದೀಯಾ ಎಂದು ಹಲ್ಲೆ ಮಾಡಿದ್ದಾನೆ. ಅಲ್ಲದೆ ಇದೇ ವಿಚಾರವಾಗಿ ಜೀವ ಬೆದರಿಕೆಯನ್ನ ಸಹ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಸಂತ್ರಸ್ತರು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.
ಕೈಗೆ ಸಿಕ್ಕ 30 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ನ್ನ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ರವಿ!
ಶಿವಮೊಗ್ಗ/ ಇತ್ತಿಚೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ನಗದು ಹಾಗೂ ಬೆಲೆಬಾಳುವ ವಸ್ತು ಇದ್ದ ಬ್ಯಾಗ್ನ್ನ ಅದರ ಮಾಲೀಕರಿಗೆ ಹಿಂದುರಿಗಿಸಿದ್ದ ಆಟೋಚಾಲಕನನ್ನ ಸನ್ಮಾನಿಸಿತ್ತು. ಈ ಘಟನೆ ಬೆನ್ನಲ್ಲೆ ಮತ್ತೊಬ್ಬ ಆಟೋಚಾಲಕ ರವಿ ಎಂಬಾತ ತನಗೆ ಸಿಕ್ಕ ಮೊಬೈಲ್ ಫೋನ್ನ್ನ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸಾಮಾನ್ಯವಾಗಿ ಮೊಬೈಲ್ ಕಳುವಾದರೆ ಮತ್ತೆ ಸಿಗೋದು ಡೌಟೇ. ಅಂತದ್ರಲ್ಲಿ ಮರೆವಿನಲ್ಲಿ ಬಿಟ್ಟುಹೋದ ಮೊಬೈಲ್ನ್ನ ರವಿ, ಪೊಲೀಸ್ ಸ್ಟೇಷನ್ಗೆ ಹೋಗಿ ನೀಡಿದ್ಧಾರೆ.
ಕಳೆದ ಮೇ 2 ರಂದು ರಾತ್ರಿ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ರವಿಗೆ ಮೊಬೈಲ್ವೊಂದನ್ನ ಯಾರೋ ಬಿಟ್ಟುಹೋಗಿರುವುದು ಕಾಣಿಸಿದೆ. ತಕ್ಷಣ ಅದನ್ನ ಹೋಗಿ ತೆಗೆದಿಟ್ಟುಕೊಂಡಿದ್ಧಾರೆ. ಬಳಿಕ ಅದನ್ನ ತೆಗೆದುಕೊಂಡು ಹೋಗಿ ವಿನೋಬನಗರ ಪೊಲೀಸ್ ಸ್ಟೆಷನ್ ಪೊಲೀಸರಿಗೆ ಕೊಟ್ಟಿದ್ದಾರೆ.
ಸುಮಾರು 30 ಸಾವಿರ ಮೌಲ್ಯದ ಮೊಬೈಲ್ ಸೋಮಿನಕೊಪ್ಪದ ನಿವಾಸಿ ಇಂಜಿನಿಯರ್ ಒಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ರವಿಯ ಪ್ರಾಮಾಣಿಕತೆಗೆ ಪೊಲೀಸ್ ಸಿಬ್ಬಂದಿ ಶ್ಲಾಘಿಸಿದ್ದಾರೆ.
ಶಿವಮೊಗ್ಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಸಂಬಂಧ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಹಾಗೂ ಕುಂಸಿ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಒಂದು
ವಿಧಾನಸಭಾ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯವರು ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ ಪ್ಲೈಯಿಂಗ್ ಸ್ಕ್ವ್ಯಾಡ್ ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ಅಡಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ಎರಡು
ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಕ್ಕಳೊಂದಿಗೆ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ಲೈಯಿಂಗ್ ಸ್ಕ್ವ್ಯಾಡ್ ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಲಂ 14 ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗಕ್ಕೆ ಮತ್ತೆ ಬರಲಿದೆ ಮೋದಿ ಫ್ಲೈಟ್ ಪ್ರಧಾನಿ ಕಾರ್ಯಕ್ರಮದ ವಿವರ
ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ ಅಂತಿಮ ಘಟ್ಟಕ್ಕೆ ಬರುತ್ತಿದೆ. ಮತದಾರರ ಮನೆ ಮನ ತಲುಪುವುದಕ್ಕೂ ಅಭ್ಯರ್ಥಿಗಳು ಬಿಡುವಿಲ್ಲದ ಓಡಾಟದಲ್ಲಿ ತೊಡಗಿದ್ದಾರೆ. ಇದರ ನಡುವೆ ಕೊನೆಕ್ಷಣದಲ್ಲಿ ಕಮಾಲ್ ಮಾಡಲು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಇದೇ ಮೇ ಏಳರಂದು ಪ್ರಧಾನಿ ನರೇಂದ್ರ ಮೋದಿ ಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಪಟ್ಟಿ ಇಲ್ಲಿದೆ
ರಾಜಧಾನಿ ಬೆಂಗಳೂರುನಲ್ಲಿ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ ನಂತರ ಆರನೇ ತಾರೀಖು ರಾತ್ರಿ, ಅಲ್ಲಿಯ ರಾಜಭವನದಲ್ಲಿ ಉಳಿದುಕೊಳ್ಳಲಿದ್ದಾರೆ. ಬಳಿಕ ಮರುದಿನ ಅಂದರೆ ಏಳನೇ ತಾರೀಖು ಭಾನುವಾರ ಬೆಂಗಳೂರು ಹೆಚ್ಎ ಎಲ್ ಏರ್ಪೋರ್ಟ್ ನಿಂದ ಹುಬ್ಬಳ್ಳಿಗೆ ಬೆಳಗ್ಗೆ ಒಂಬತ್ತು ಗಂಟೆಗೆ ಹೊರಡಲಿದ್ದಾರೆ.
10:10ಕ್ಕೆ ಹುಬ್ಬಳ್ಳಿಗೆ ಬಂದು ಅಲ್ಲಿಂದ ಬಾದಾಮಿಗೆ ತೆರಳಲಿದ್ಧಾರೆ. ನಂತರ ಮಧ್ಯಾಹ್ನ 12 ಗಂಟೆವರೆಗೂ ಬಾದಾಮಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೋದಿ ಅಲ್ಲಿಂದ ಹಾವೇರಿಗೆ ತೆರಳಲಿದ್ದಾರೆ. ಅಲ್ಲಿ, 2 ಗಂಟೆಯುವರೆಗೂ ಇದ್ದು ಶಿವಮೊಗ್ಗಕ್ಕೆ ಬರಲಿದ್ಧಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಆಯನೂರಿನಲ್ಲಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ಧಾರೆ.
ಸಮಾವೇಶ ಮುಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಂಜೆ 4.25 ಕ್ಕೆ ಶಿವಮೊಗ್ಗ ಏರ್ಪೋರ್ಟ್ ತಲುಪಲಿದ್ಧಾರೆ. ಅಲ್ಲಿಂದ ಮೈಸೂರಿಗೆ ತೆರಳಿ, ನಂಜನಗೂಡಿಗೆ ಪ್ರಯಾಣ ಬೆಳಸಲಿದ್ದಾರೆ. ನಂತರ ರಾತ್ರಿ ದೆಹಲಿಗೆ ವಾಪಸ್ ಆಗಲಿದ್ದಾರೆ.
Malenadutoday.com Social media
