ಶಿವಮೊಗ್ಗ ಸುದ್ದಿ / ಎಣ್ಣೆ ಸಾಲ ಕೊಟ್ಟಿಲ್ಲ ಅಂತಾ ವೈನ್ಶಾಪ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆಯೊಂದು ಸಂತೆಕಡೂರಿನಲ್ಲಿ ವರದಿಯಾಗಿದೆ. ವ್ಯಕ್ತಿಯೊಬ್ಬ ವೈನ್ಸ್ ಸ್ಟೋರ್‌ಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಪೂರ್ತಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಇಲ್ಲಿನ ವೈನ್ಸ್ ಶಾಪ್ನ ಮ್ಯಾನೇಜರ್ ದೂರು ನೀಡಿದ್ದಾರೆ. ಅದರಂತೆ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿ ಕಳೆದ ಮೇ 15 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಆರೋಪಿ ಸಂತೆಕಡೂರಿನಲ್ಲಿರುವ ವೈನ್ಸ್ಶಾಪ್ಗೆ ಬಂದಿದ್ದ. ಈ ವೇಳೆ ಮ್ಯಾನೇಜರ್ ಬಳಿ ತನಗೆ ಎಣ್ಣೆ ಸಾಲ ಕೊಡುವಂತೆ ಕೇಳಿದ್ದಾನೆ. ಆದರೆ, ಮ್ಯಾನೆಜರ್ ಇದಕ್ಕೆ ಒಪ್ಪಿಲ್ಲ.
ಅಲ್ಲಿ ಮಾತುಕತೆ ನಡೆದು ಆನಂತರ ಆರೋಪಿ ವಾಪಸ್ ಆಗಿದ್ದ, ಬಳಿಕ ಸಂಜೆ 7 ಗಂಟೆಯ ಸುಮಾರಿಗೆ ಮತ್ತೆ ವೈನ್ಸ್ ಸ್ಟೋರ್ ಬಳಿ ಬಂದು ಅಂಗಡಿಯೊಳಗೆ ನುಗ್ಗಿದ್ದಾನೆ. ಬರುತ್ತಲೇ ಪೆಟ್ರೋಲ್ ತುಂಬಿದ್ದ ಬಾಟಲಿ ಹಿಡಿದು ಬಂದಿದ್ದ ಆತ ಇಲ್ಲಿ ವೈನ್ಸ್ ಸ್ಟೋರ್ ಅನ್ನು ಹೇಗೆ ನಡೆಸುತ್ತೀರಾ, ನಿಮ್ಮ ಅಂಗಡಿಯೂ ಇರಬಾರದು ಎನ್ನುತ್ತಾ, ಪೆಟ್ರೋಲ್ ಎರಚಲು ಆರಂಭಿಸಿದ್ದ. ಅಷ್ಟೊತ್ತಿಗೆ ಬಾರ್ ಸಿಬ್ಬಂದಿ ಆರೋಪಿಯನ್ನು ಹಿಡಿದು, ಆತ ಬೆಂಕಿ ಹಚ್ಚುವುದನ್ನ ತಪ್ಪಿಸಿದ್ದಾರೆ.
ಈ ಮಧ್ಯೆ ಪ್ರಕರಣ ರಾಜಿ ಆಗದ ಹಿನ್ನೆಲೆಯಲ್ಲಿ ಇದೀಗ ಎಫ್ಐಆರ್ ದಾಖಲಾಗಿದೆ. ಮೇ 17 ರಂದು ದಾಖಲಾಗಿರುವ ಎಫ್ಐಆರ್ ಅಡಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
