ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಷಷ್ಠಿ ತಿಥಿಯು ಸಂಜೆ 4.07 ರವರೆಗೆ ಇರಲಿದ್ದು, ತದನಂತರ ಸಪ್ತಮಿ ಆರಂಭವಾಗಲಿದೆ. ಮೂಲ ನಕ್ಷತ್ರ ದಿನಪೂರ್ತಿ ಇರುತ್ತದೆ. ರಾತ್ರಿ 11.03 ರಿಂದ 12.30 ರವರೆಗೆ ಅಮೃತ ಘಳಿಗೆ ಒದಗಿಬರಲಿದೆ. ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಯಮಗಂಡ ಕಾಲವಿರುತ್ತದೆ.
ಇಂದಿನ ರಾಶಿಫಲ
ಮೇಷ / ಬಂಧುಗಳ ಕಡೆಯಿಂದ ಒತ್ತಡ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಲಿವೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು, ವ್ಯಾಪಾರ ವಹಿವಾಟುಗಳು ಸಾಮಾನ್ಯವಾಗಿರಲಿದೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ.
ವೃಷಭ / ಈ ರಾಶಿಯವರ ಇಂದಿನ ರಾಶಿಫಲದ ವಿವರ ಹೀಗಿದೆ. ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಗಳಿದ್ದು, ಅನಿರೀಕ್ಷಿತ ಖರ್ಚು ಎದುರಾಗಲಿವೆ. ಜವಾಬ್ದಾರಿ ಹೆಚ್ಚಾಗುವುದರ ಜೊತೆಗೆ ಹಠಾತ್ ಪ್ರಯಾಣ ಸಾಧ್ಯತೆ . ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿರುತ್ಸಾಹ ಕಾಡಲಿದ್ದು, ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ.
ಮಿಥುನ / ಹಲವು ಕಾರ್ಯಗಳು ಯಶಸ್ವಿಯಾಗಲಿದ್ದು, ಶುಭ ಆಮಂತ್ರಣ ಬರಲಿವೆ. ಸ್ಥಿರಾಸ್ತಿ ವೃದ್ಧಿಯಾಗುವ ಜೊತೆಗೆ ಉದ್ಯೋಗ ಯೋಗವೂ ಒದಗಿಬರಲಿದೆ. ವ್ಯಾಪಾರವು ವಿಸ್ತರಣೆಯಾಗಲಿದ್ದು, ಆರ್ಥಿಕ ಲಾಭ ದೊರೆಯಲಿದೆ.
ಕರ್ಕಾಟಕ / ಹೊಸ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಶುಭ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಹಳೆಯ ಸ್ನೇಹಿತರ ಭೇಟಿಯಾಗಲಿದ್ದು, ಆರ್ಥಿಕ ಪ್ರಗತಿ ಕಂಡುಬರಲಿದೆ. ವ್ಯಾಪಾರದಲ್ಲಿ ಮುನ್ನಡೆ ಹಾಗೂ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ.
ಸಿಂಹ / ಆರ್ಥಿಕ ಸಂಕಷ್ಟಗಳನ್ನು ಎದುರಿಸಲಿದ್ದು, ಸಾಲಕ್ಕಾಗಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲಸಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದ್ದು, ಕುಟುಂಬ ಸದಸ್ಯರೊಂದಿಗೆ ಮನಸ್ತಾಪಗಳು ಬರಲಿವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ.
ಕನ್ಯಾ / ದೂರ ಪ್ರಯಾಣ ಕೈಗೊಳ್ಳಲಿದ್ದು, ಕುಟುಂಬದಲ್ಲಿ ಕಿರಿಕಿರಿ ಉಂಟಾಗಲಿದೆ. ಬಂಧುಗಳೊಂದಿಗೆ ಮಾತಿನ ಚಕಮಕಿ ನಡೆಯುವ ಸಾಧ್ಯತೆಗಳಿದ್ದು, ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದಾರೆ. ವ್ಯಾಪಾರದಲ್ಲಿ ಮಂದಗತಿ ಇರಲಿದ್ದು, ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಬೀಳಲಿದೆ.
ಇಂದಿನ ರಾಶಿಫಲ ಮತ್ತು ದಿನದ ವಿಶೇಷ
ತುಲಾ / ಅನಿರೀಕ್ಷಿತ ಧನ ಹಾಗೂ ವಸ್ತು ಲಾಭವಾಗಲಿದ್ದು, ಕೈಗೊಂಡ ಕಾರ್ಯಗಳಲ್ಲಿ ಜಯ ಸಿಗಲಿದೆ. ವ್ಯಾಪಾರವು ಲಾಭದಾಯಕವಾಗಿರಲಿದ್ದು, ಉದ್ಯೋಗಿಗಳಿಗೆ ಖುಷಿಯ ಸುದ್ದಿ ಸಿಗಲಿದೆ..
ವೃಶ್ಚಿಕ / ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೆಲಸಗಳಲ್ಲಿ ವಿಳಂಬವಾಗಲಿದೆ. ಆರೋಗ್ಯ ಸಮಸ್ಯೆ ಹಾಗೂ ಸಹೋದರರೊಂದಿಗೆ ವಿವಾದ ತಲೆದೋರಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಬದಲಾವಣೆಗಳಾಗಲಿದ್ದು, ಶ್ರಮ ಹೆಚ್ಚಾಗಲಿದೆ.
ಧನುಸ್ಸು / ಕೆಲಸದಲ್ಲಿ ಯಶಸ್ಸು ಸಿಗಲಿದ್ದು, ಶುಭ ವಾರ್ತೆಗಳು ಬರಲಿವೆ. ವಾಹನ ಸೌಖ್ಯ ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಸಂಪರ್ಕ ಹೆಚ್ಚಾಗಲಿದ್ದು, ವ್ಯಾಪಾರವು ಅನುಕೂಲಕರವಾಗಿರಲಿದೆ.
ಮಕರ / ಸ್ನೇಹಿತರೊಂದಿಗೆ ವಿವಾದ ಹಾಗೂ ಆರೋಗ್ಯದ ಸಮಸ್ಯೆ ಎದುರಾಗಲಿವೆ. ಕೆಲಸಗಳಲ್ಲಿ ಶ್ರಮ ಹೆಚ್ಚಾಗಲಿದ್ದು, ಕೆಲವು ಕಾರ್ಯಗಳನ್ನು ಮುಂದೂಡಬೇಕಾಗುತ್ತದೆ. ಬಂಧುಗಳಿಂದ ಒತ್ತಡ ಹಾಗೂ ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಲಿದೆ.
ಕುಂಭ / ಕುಟುಂಬದಲ್ಲಿ ಶುಭ ಕಾರ್ಯಗಳ ಚರ್ಚೆ ನಡೆಯಲಿದ್ದು, ಆಸ್ತಿ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿನ ಏರುಪೇರು ನಿವಾರಣೆಯಾಗಲಿವೆ.
ಮೀನ / ನೂತನ ಉದ್ಯೋಗ, ಸಮಾಜದಲ್ಲಿ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
