CHIKKAMAGALURU | Dec 5, 2023 | ನಾಯಿ ಬೊಗಳಿದ ವಿಚಾರದಲ್ಲಿ ವ್ಯಕ್ತಿಯೊಬ್ಬ ನೆರೆಮನೆಯ ವ್ಯಕ್ತಿಗೆ ಆ್ಯಸಿಡ್ ಎರಚಿದ ಘಟನೆಯೊಂದರ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲ್ಲೂಕು ನಲ್ಲಿ ವರದಿಯಾಗಿದೆ
READ : ಅರ್ಜುನನನ್ನ ಕೊಂದಿದ್ದು ಯಾರು? ಕಾಕನಕೋಟೆ ಆಪರೇಷನ್ ಖೆಡ್ಡಾ ಮತ್ತೆ ಬೇಕಿದೆ ! ಏಕೆ ಗೊತ್ತಾ ಜೆಪಿ ಬರೆಯುತ್ತಾರೆ
ಎನ್ಆರ್ಪುರ ತಾಲ್ಲೂಕು
ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೇಮ್ಸ್ ಎಂಬಾತ ಸುಂದರ್ ರಾಜ್ ಎಂಬುವರ ಮೇಲೆ ಆ್ಯಸಿಡ್ ಎರಚಿರುವ ಬಗ್ಗೆ ವರದಿಯಾಗಿದೆ. ಆತನನ್ನು ಶಿವಮೊಗ್ಗ ಜಿಲ್ಲೆ ಮೆಗ್ಗಾನ್ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಎನ್ಆರ್ ಪುರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.
READ : ಕಾಲೇಜಿನ ಕಟ್ಟದಿಂದ ಬಿದ್ದು ವಿದ್ಯಾರ್ಥಿನಿ ಸಾವು! ಶಿಕ್ಷಣ ಸಂಸ್ಥೆಯ ಎದುರು ಪೋಷಕರ ಆಕ್ರೋಶ
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ
ಘಟನೆಯ ವಿವರ ನೋಡುವುದಾದರೆ, ಸುಂದರ್ ರಾಜ್ ಎಂಬವರ ಮನೆ ನಾಯಿ ಬೊಗಳುತ್ತಿತ್ತಂತೆ. ಅದಕ್ಕೆ ಸುಂದರ್ ರಾಜ್ ಬೈಯ್ಯುತ್ತಿದ್ದರಂ ಅವರ ಮನೆ ನಾಯಿಗೆ ಬೈಯ್ಯುತ್ತಿರುತ್ತಿರುವದನ್ನ ಜೇಮ್ಸ್ ತಮಗೆ ನೆರೆಮನೆಯಾತ ಬೈಯ್ಯುತ್ತಿದ್ದಾನೆ. ನಾಯಿಯ ನೆಪದಲ್ಲಿ ತಮಗೆ ನಿಂದಿಸುತ್ತಿದ್ದಾನೆ ಎಂದು ಸಿಟ್ಟಾಗಿ ಆ್ಯಸಿಡ್ ಎರಚಿರುವ ಬಗ್ಗೆ ವರದಿಯಾಗಿದೆ. ಸದ್ಯ ಈ ಸಂಬಂಧ ಎನ್ಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸ್ತಿದ್ದಾರೆ.
